Advertisement

ಬೆಳಗಾವಿ: “ಕಿತ್ತೂರು ಕೋಟೆ’ಯತ್ತ ದಿವ್ಯ ನಿರ್ಲಕ್ಷ್ಯ

01:30 PM Feb 02, 2024 | Team Udayavani |

ಉದಯವಾಣಿ ಸಮಾಚಾರ
ಚನ್ನಮ್ಮನ ಕಿತ್ತೂರು: ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ವೀರರಾಣಿ ಚನ್ನಮ್ಮಳ ಕೋಟೆ ಅಭಿವೃದ್ಧಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ.

Advertisement

ಕೋಟೆ ಪ್ರವೇಶಿಸುತ್ತಿದ್ದಂತೆ ಸಹಿಸಲಾಗದಷ್ಟು ಕೊಳೆತು ನಾರುವ ಕಸದ ವಾಸನೆ ಮೂಗಿಗೆ ಬಡಿಯುತ್ತದೆ. ಸಾರ್ವಜನಿಕರು, ಅಂಗಡಿಕಾರರು ತಾಜ್ಯ ವಸ್ತುಗಳನ್ನು ಕೋಟೆ ಮುಂಭಾಗ ಎಸೆಯುತ್ತಿರುವ ಪರಿಣಾಮ ಗಬ್ಬೆದ್ದು ನಾರುತ್ತಿದೆ. ಇತಿಹಾಸ
ಸಾರುವ ಕಂದಕಗಳು ಕಸ ಕಡ್ಡಿ, ಸಾರಾಯಿ ಬಾಟಲಿಗಳಿಂದ ತುಂಬಿ ತುಳುಕುತ್ತಿವೆ.

ನನೆಗುದಿಗೆ ಬಿದ್ದ ಧ್ವನಿ-ಬೆಳಕು: 2011ರಲ್ಲಿ ಕೋಟೆಯ ಆವರಣದಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಧ್ವನಿ ಮತ್ತು ಬೆಳಕಿನ ಶೋ ವ್ಯವಸ್ಥೆ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಶೋ ಸ್ಥಗಿತಗೊಂಡಿತು. ಪುನಃ 2014ರಲ್ಲಿ ಮರು ಉದ್ಘಾಟನೆಗೊಂಡರೂ
ಇದು ಸಹಿತ ಆಗಿನ ಕಿತ್ತೂರು ಉತ್ಸವಕ್ಕೆ ಸೀಮಿತವಾಯಿತು.

ಸಮಗ್ರ ಅಭಿವೃದ್ಧಿ ಅಗತ್ಯ: ಚನ್ನಮ್ಮನ ಕಿತ್ತೂರು ಕೇವಲ ಉತ್ಸವಕ್ಕೆ ಸೀಮಿತವಾಗದೆ ರಾಷ್ಟ್ರ- ಅಂತಾರಾಷ್ಟ್ರಮಟ್ಟದ ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ತಾಣವಾಗಬೇಕು. ಕಿತ್ತೂರು ಉತ್ಸವ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ವ್ಯಾಪಿಸಬೇಕು. ಕಿತ್ತೂರು ಪಟ್ಟಣವನ್ನು ಸ್ಮಾರ್ಟ್‌ಸಿಟಿ ಮಾದರಿ ಪಟ್ಟಣವನ್ನಾಗಿ ರೂಪಿಸಬೇಕು. ಕಿತ್ತೂರಲ್ಲಿ ರಾಣಿ ಚನ್ನಮ್ಮನ ಸಂಶೋಧನಾ ಕೇಂದ್ರ ತೆರೆಯಬೇಕು.

ದಾಖಲೆ ಆಮದು ಮಾಡಲು ಕ್ರಮವಹಿಸಿ: ಪುಣೆ ಮತ್ತು ಇಂಗ್ಲೆಂಡ್‌ದಲ್ಲಿರುವ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ದಾಖಲೆ, ವಸ್ತು ಒಡವೆಗಳನ್ನು ಮರಳಿ ತರಬೇಕು. ಕಾಕತಿ, ಬೈಲಹೊಂಗಲ, ತಲ್ಲೂರು, ದೇಶನೂರು, ವಣ್ಣೂರು ಮುಂತಾದೆಡೆ ಕಿತ್ತೂರು ಸಂಸ್ಥಾನಕ್ಕೆ ಸಂಬಂ ಧಿಸಿದ ಸ್ಮಾರಕಗಳ ರಕ್ಷಣೆ ಮತ್ತು ಸಂಶೋಧನೆ ಕೈಗೊಳ್ಳಬೇಕು.

Advertisement

ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕಿತ್ತೂರು ಅಭಿವೃದ್ಧಿ ಆಗದೇ ಇರುವುದು ಖೇದಕರ ಸಂಗತಿ. ಪಕ್ಕದ ಸಂಗೊಳ್ಳಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದು ಸಂತೋಷ ತಂದಿದೆ. ರಾಯಣ್ಣನ ಸಂಗೊಳ್ಳಿಯಂತೆ ಚನ್ನಮ್ಮನ ಕಿತ್ತೂರು ಸಹ ಅಭಿವೃದ್ಧಿ ಮಾಡಬೇಕು.
*ಮಡಿವಾಳ ರಾಜಯೋಗಿಂದ್ರ ಸ್ವಾಮಿಗಳು,
ರಾಜಗುರು ಸಂಸ್ಥಾನ ಕಲ್ಮಠ, ಚನ್ನಮ್ಮನ ಕಿತ್ತೂರು.

ಕಳೆದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಸಭೆಯಲ್ಲಿ ಕಿತ್ತೂರು ಕೋಟೆ ಅಭಿವೃದ್ಧಿ, ಸ್ವಚ್ಛ ತೆ, ದುರಸ್ತಿ ಮಾಡುವ ಕುರಿತು
ಚರ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು ಉತ್ಸವ ಸಂದರ್ಭದಲ್ಲಿ ಕೋಟೆ ದುರಸ್ತಿ
ಕಾರ್ಯ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ಕಾರ್ಯಗಳು ಆರಂಭ ಆಗುತ್ತವೆ.
*ಪ್ರಭಾವತಿ ಫಕೀರಪುರ, ಬೈಲಹೊಂಗಲ ಉಪ ವಿಭಾಗಾಧಿಕಾರಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ

ಸರ್ಕಾರ ರಾಯಣ್ಣನ ಸಂಗೊಳ್ಳಿ ಅಭಿವೃದ್ಧಿ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಸಂಗೊಳ್ಳಿಯಂತೆ ಕಿತ್ತೂರು ಸಹ ಅಭಿವೃದ್ಧಿಯಾಗಲಿ ಎಂದು ಬಯಸುತ್ತೇವೆ.
*ಜಗದೀಶ ಕಡೋಲಿ, ರಾಣಿ ಚನ್ನಮ್ಮ ನವಭಾರತ ಸೇನೆಯ ರಾಜ್ಯ ಸಂಚಾಲಕರು. ಚನ್ನಮ್ಮನ ಕಿತ್ತೂರು.

*ಬಸವರಾಜ ಚಿನಗುಡಿ

Advertisement

Udayavani is now on Telegram. Click here to join our channel and stay updated with the latest news.

Next