ಬೆಳಗಾವಿ: ರಾಷ್ಟ್ರದ ಸರ್ವತೋಮುಖ ಮತ್ತು ಸ್ವಾವಲಂಬಿ ರಾಷ್ಟ್ರದ ಅಭಿವೃದ್ಧಿಗಾಗಿ ದೇಸಿಯ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ದೇಸಿ ತಂತ್ರಜ್ಞಾನವು ನಮ್ಮ ರಾಷ್ಟ್ರದಲ್ಲಿರುವ ಜ್ಞಾನಶಕ್ತಿಯನ್ನು ಜಗತ್ತಿಗೆ ತೋರುವುದಲ್ಲದೆ ಎಷ್ಟೋ ಅಸಂಖ್ಯಾತ ಉದ್ಯೋಗಗಳನ್ನು ಹುಟ್ಟು ಹಾಕಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸುವ ಶಕ್ತಿ ದೇಸಿಯ ಉತ್ಪನ್ನ ಹಾಗೂ ತಂತ್ರಜ್ಞಾನಗಳಲ್ಲಿದೆ ಎಂದು ಕುಲಪತಿ ಪ್ರೊ. ವಿದ್ಯಾಶಂಕರ ಎಸ್. ಹೇಳಿದರು.
Advertisement
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ನಿಮಿತ್ತ ಬುಧವಾರ ನಡೆದಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೊದಲ 5ರಲ್ಲಿ ಭಾರತ ಸ್ಥಾನವನ್ನು ಪಡೆದಿದೆ. ಜತೆಗೆ 2015ರಲ್ಲಿ ಜಾಗತಿಕ ನಾವಿನ್ಯತೆ ಕ್ರಮಾಂಕ (ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್) ದಲ್ಲಿ 81ನೇ ಸ್ಥಾನದಿಂದ 40ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಅಷ್ಟೇ ಅಲ್ಲದೆ ಪೇಟೆಂಟ್ ನೋಂದಣಿಯಲ್ಲಿ ಕಳೆದ ಎರಡು ದಶಕದಲ್ಲಿ ಅತಿ ಹೆಚ್ಚು ಅಂದರೆ 90,000 ಪೇಟೆಂಟ್ ನೋಂದಣಿಯನ್ನು ಮಾಡಿದ್ದು ರಾಷ್ಟ್ರದ ಸಂಶೋಧನಾ ಮತ್ತು ನಾವಿನ್ಯತಾ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.
Related Articles
Advertisement
ಹಣಕಾಸು ಅಧಿಕಾರಿ ಎಂ.ಎ. ಸಪ್ನ, ಪ್ರೊ. ಎಸ್. ಎಲ್. ದೇಶಪಾಂಡೆ ಇದ್ದರು. ಕುಲಸಚಿವ ಪ್ರೊ. ಬಿ.ಈ. ರಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಸರಸ್ವತಿ ಭೂಸನೂರ್ ಸ್ವಾಗತಿಸಿದರು. ನಂದಾ ಹಿರೇಮಠ ವಂದಿಸಿದರು. ಮೈತ್ರಿ ಕಟ್ಟಿ ನಿರೂಪಿಸಿದರು.