Advertisement

ಬೆಳಗಾವಿ: ತೆಲಸಂಗ ಆಸತ್ರೆಯಲ್ಲಿ ಉಪಯೋಗಕ್ಲಿಲ್ಕ ಬೋರ್‌ವೆಲ್‌

05:39 PM Jun 02, 2023 | Team Udayavani |

ತೆಲಸಂಗ: ಗ್ರಾಮದ ಸರಕಾರಿ ಆಸ್ಪತ್ರೆ ಆವರಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಸುಮಾರು 8 ತಿಂಗಳ ಹಿಂದೆ ಬೋರ್‌ವೆಲ್‌ ಕೊರೆಯಿಸಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ.

Advertisement

ಬೋರ್‌ವೆಲ್‌ ಒಳಗಡೆ ನಾಲ್ಕಾರು ಪೈಪ್‌ ಹಾಕಿ ಅದಕ್ಕೆ ವಿದ್ಯುತ್‌ ವೈರ್‌ ಜೋಡಿಸಿ ಮೇಲೆಯೂ ಪೈಪ್‌ ಜೋಡಿಸಿ ಬಿಟ್ಟಿದ್ದಾರೆ ಆದರೆ ನೀರು ಮಾತ್ರ ಬರುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಬೋರ್‌ವೆಲ್‌ ರೀ ಬೋರ್‌ ಮಾಡಿದರೆ ಮಾತ್ರ ಪೈಪ್‌ಗ್ಳನ್ನು ಒಳಗಡೆ ಇಳಿಸಲು ಸಾಧ್ಯ ಅಂತ ಒಮ್ಮೆ ಹೇಳುತ್ತಾರೆ.

ಮತ್ತೊಮ್ಮೆ ಕೇಳಿದರೆ ವಿದ್ಯುತ್‌ ಕನೆಕ್ಷನ್‌ ಕೊಟ್ಟಿಲ್ಲ, ಅದು ಮಾತ್ರ ಬಾಕಿ ಇದೆ ಎನ್ನುತ್ತಾರೆ. 8 ತಿಂಗಳಿಂದ ಇದ್ಯಾವುದೂ ಮಾಡಲಿಕ್ಕೆ ಸಮಯವೇ ಇಲ್ಲವೆ ಎಂದು ಪ್ರಶ್ನಿಸಿದರೆ, 2-3 ದಿನದಲ್ಲಿ ಎಲ್ಲವನ್ನು ಸರಿ ಮಾಡುತ್ತೇವೆ ಎಂದು ಹೇಳಿ
ಜಾರಿಕೊಳ್ಳುತ್ತಾರೆ. ಗುಣಮಟ್ಟ ಕಾಮಗಾರಿ ಆಗಿಲ್ಲ ಎಂದರೆ ನಾಳೆಯೇ ಭೇಟಿ ಕೊಡುತ್ತೇನೆ. ಅದೆಲ್ಲವನ್ನು
ಪರಿಶೀಲಿಸುತ್ತೇನೆಂದು ಅಧಿಕಾರಿಗಳು ಉತ್ತರಿಸಿ ಜಾರಿಕೊಳ್ಳುತ್ತಾರೆ.

2.40 ಲಕ್ಷ ರೂ. ಕಾಮಗಾರಿ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 15ನೇ ಹಣಕಾಸು ಯೋಜನೆಯಡಿ ನಳ ಜೋಡಣೆ ಮತ್ತು
ಮೋಟರ್‌ ಅಳವಡಿಕೆಗೆ ಅಂದಾಜು ವೆಚ್ಚ 2.40 ಲಕ್ಷ ರೂ. ಮಂಜೂರಾಗಿದೆ. ಅಪೂರ್ಣ ಕಾಮಗಾರಿ ಕೈಗೊಂಡು 8 ತಿಂಗಳಾದರೂ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಗುತ್ತಿಗೆದಾರರು ಫಲಕ ಅಳವಡಿಸಿ ಫೋಟೋ ತೆಗೆದುಕೊಂಡು ಹೋದವರು ಇದರತ್ತ ಹೊರಳಿಯೂ ನೋಡಿಲ್ಲ. ಸಾರ್ವಜನಿಕರು ಪ್ರಶ್ನಿಸಿದರೆ ಮೂರೇ ದಿನದಲ್ಲಿ ಸರಿ ಮಾಡಿಕೊಡುವ ಭರವಸೆ ನೀಡುತ್ತಿದ್ದಾರೆ.

Advertisement

ತಕ್ಷಣವೇ ಈ ಬೋರ್‌ವೆಲ್‌ಗೆ ಬಳಸಲಾದ ಕಳಪೆ ಪೈಪ್‌, ವೈರ್‌, ಬಟನ್‌, ಸ್ಟಾಟರ್‌ ಬೋರ್ಡ್‌ ಬದಲಾಯಿಸಿ ಐಎಸ್‌ಐ ಗುಣಮಟ್ಟದ್ದನ್ನು ಬಳಸಿ ಆಸ್ಪತ್ರೆಗೆ ನೀರು ಪೂರೈಸುವ ಕೆಲಸ ಆರಂಭಿಸಬೇಕು. ಈ ಕಳಪೆ ಸಾಮಗ್ರಿ ಬದಲಿಸದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ. ಇದನ್ನೆಲ್ಲ ಸರಿಪಡಿಸಲು ಒಂದು ವಾರದ ಗಡುವು ನೀಡುತ್ತಿದ್ದೇವೆ.
*ಬುರಾನ ಅರಟಾಳ, ಯುವಕ ತೆಲಸಂಗ

ಬೋರ್‌ವೆಲ್‌ ರೀ ಬೋರ್‌ ಮಾಡಿಸುವುದು ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದೆ. ತಕ್ಷಣವೇ ಭೇಟಿ ನೀಡಿ ಎರಡ್ಮೂರು ದಿನದಲ್ಲಿ ನೀರೊದಗಿಸುವ ಕೆಲಸ ಮಾಡಲಾಗುವುದು.
*ರವಿ ಮುರಗಾಲಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ, ಅಥಣಿ.

Advertisement

Udayavani is now on Telegram. Click here to join our channel and stay updated with the latest news.

Next