Advertisement

ಕೋವಿಡ್ ; 298 ಹೊಸ ಕೇಸ್‌

03:53 PM Aug 26, 2020 | Suhan S |

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ 298 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 181 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

Advertisement

ಗೋಕಾಕನ 50 ವರ್ಷದ ಮಹಿಳೆ ಹಾಗೂ ಬೆಳಗಾವಿಯ 56 ವರ್ಷದ ವ್ಯಕ್ತಿ ಕೋವಿಡ್ ಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಕೋವಿಡ್ ದಿಂದ 163 ಜನ ಬಲಿಯಾದಂತಾಗಿದೆ. 298 ಹೊಸ ಪ್ರಕರಣಗಳಿಂದ ಒಟ್ಟು 10560 ಸೋಂಕಿತರು ಆಗಿದ್ದು, ಮಂಗಳವಾರ 181 ಮಂದಿ ಗುಣಮುಖರಾಗಿ ಇಲ್ಲಿಯವರೆಗೆ 6182 ಜನ ಗುಣಮುಖರಾಗಿ ಬಿಡುಗಡೆ ಆದಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿರುವಕೋವಿಡ್‌-19 ವಾರ್ಡ್‌ನಲ್ಲಿ ಸದ್ಯ 4215 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಇಂದಿನವರೆಗೆ 82688 ಜನರ ಮೇಲೆ ನಿಗಾ ಇಡಲಾಗಿದೆ. ಇದುವರೆಗೆ 31516 ಜನರು 14 ದಿನಗಳ ಕಾಲ ಗೃಹ ನಿಗಾದಲ್ಲಿದ್ದರೆ, ಒಟ್ಟು 5725 ಜನರು 14 ದಿನಗಳ ಗೃಹ ನಿಗಾ ಪೂರ್ಣಗೊಳಿಸಿದ್ದಾರೆ. 41232 ಜನರು 28 ದಿನಗಳ ಗೃಹ ನಿಗಾ ಅವಧಿ ಮುಕ್ತಾಯಗೊಳಿಸಿದ್ದಾರೆ. ಇಂದಿನವರೆಗೆ 81392 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 67658 ವರದಿ ನಕಾರಾತ್ಮಕವಾಗಿದೆ. ಇನ್ನೂ 2249 ಜನರ ವರದಿ ಬರುವುದು ಬಾಕಿ ಇದೆ. ಸೋಂಕಿನಿಂದ ಒಟ್ಟು 163 ಜನ ಬಲಿಯಾದಂತಾಗಿದೆ ಎಂದು ಜಿಲ್ಲಾ ವೈದ್ಯಕೀಯ ವರದಿ ತಿಳಿಸಿದೆ.

ಬೈಲಹೊಂಗಲದಲ್ಲಿ 25 ಕೇಸ್‌ : ಪಟ್ಟಣದ ಎರಡು ಸೇರಿದಂತೆ ತಾಲೂಕಿನಲ್ಲಿ ಮಂಗಳವಾರ ಒಟ್ಟು 25 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಪಟ್ಟಣದ ಮಡಿವಾಳರ ಚಾಳ 47 ವರ್ಷದ ಪುರುಷ, ಶೆಟಗಾರ ಚಾಳ 64 ವರ್ಷದ ಪುರುಷ ಹಾಗೂ ತಾಲೂಕಿನ ವಣ್ಣೂರ 4, ಮುರ್ಕಿಭಾವಿ, ಬೆಳವಡಿ, ದೇಶನೂರ ತಲಾ 2, ಲಿಂಗದಹಳ್ಳಿ, ಶೀಗಿಹಳ್ಳಿ, ಸಂಗೊಳ್ಳಿ, ಕಿತ್ತೂರು, ಮತ್ತಿಕೊಪ್ಪ, ಅಂಬಡಗಟ್ಟಿ, ನಯಾನಗರ, ಹೋಳಿಹೊಸೂರು, ಹೊಳಿನಾಗಲಾಪುರ, ಎಂಕೆ ಹುಬ್ಬಳ್ಳಿ, ಸಂಪಗಾವ, ದೊಡವಾಡ, ಉಡಿಕೇರಿ ಗ್ರಾಮದಲ್ಲಿ ತಲಾ ಒಂದು ಕೇಸ್‌ ಪತ್ತೆಯಾಗಿದೆ. ತಾಲೂಕಿನಲ್ಲಿ ಇಲ್ಲಿಯವರೆಗೆ ಒಟ್ಟು 666 ಪ್ರಕರಣ ಕಂಡುಬಂದಿದ್ದು, 143 ಸಕ್ರಿಯ ಪ್ರಕರಣ ಮಾತ್ರ ಇವೆ. ಚಿಕಿತ್ಸಾ ಕೇಂದ್ರದಿಂದ ಇಂದು 16 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ|ಎಸ್‌. ಎಸ್‌.ಸಿದ್ದನವರ ತಿಳಿಸಿದ್ದಾರೆ.

ಖಾನಾಪುರದಲ್ಲಿ 6 ಜನರಿಗೆ ಕೋವಿಡ್‌ : ತಾಲೂಕಿನಲ್ಲಿ 6 ಜನರಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ. ಪಟ್ಟಣದ ವಿಠೊಬಾ ಗಲ್ಲಿ 69 ವರ್ಷದ ವೃದ್ಧೆ, ವಿದ್ಯಾನಗರ 52 ವರ್ಷ ಪುರುಷ, ತಾಲೂಕಿನ ಪಾರೀಶ್ವಾಡ 45 ವರ್ಷ ಪುರುಷ, ಇಟಗಿ 27 ವರ್ಷ ಯುವಕ, ಅಮಟೆ 30 ವರ್ಷ ಪುರುಷ, ಚಿಂಚವಾಡ 52 ವರ್ಷ ಮಹಿಳೆಗೆ ಸೋಂಕು ದೃಢಪಟ್ಟಿದೆ.

Advertisement

11 ಜನರಿಗೆ ಕೋವಿಡ್ ದೃಢ : ಗೋಕಾಕ: ಮೂಡಲಗಿ ಮತ್ತು ಗೋಕಾಕ ತಾಲೂಕಿನಲ್ಲಿ ಮಂಗಳವಾರ 11 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಾಲೂಕು ಆರೋಗ್ಯಾಧಿ ಕಾರಿ ಡಾ| ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರ-3, ಶಿಂದಿಕುರಬೇಟ-4, ಘಟಪ್ರಭಾ, ಮೂಡಲಗಿ, ಬೀಸನಕೊಪ್ಪ, ಹುಣಶ್ಯಾಳ ಪಿ.ವೈ. ಗ್ರಾಮದ ತಲಾ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕಿತರು ವಾಸಿಸುವ 50 ಮೀಟರ್‌ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಸೋಂಕಿತರನ್ನು

ಸಮೀಪದ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next