Advertisement
ಫೆ.28 ರಂದು ಬೆಳಗ್ಗೆ 10ಕ್ಕೆ ವೀರರಾಣಿ ಬೆಳವಡಿ ಮಲ್ಲಮ್ಮನ ವೃತ್ತದಲ್ಲಿ ಬೆಳವಡಿ ಸಂಸ್ಥಾನದ ಧ್ವಜಾರೋಹಣ ಹಾಗೂ ಬೆಳವಡಿ ಮಲ್ಲಮ್ಮನ ವಿಜಯಜ್ಯೋತಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಬರಮಾಡಿಕೊಳ್ಳುವರು. 10.15ಕ್ಕೆ ನಡೆಯುವ ಜಾನಪದ ಕಲಾವಾಹಿನಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸುವರು. 10.30ಕ್ಕೆ ವಸ್ತು ಪ್ರದರ್ಶನವನ್ನು ರಾಜ್ಯ ರೇಲ್ವೆ ಸಚಿವ ಸುರೇಶ ಅಂಗಡಿ ಉದ್ಘಾಟಿಸುವರು. ಫೆ.28ರಂದು ಸಂಜೆ 7ಕ್ಕೆ ಬೆಳವಡಿ ಮಲ್ಲಮ್ಮನ ವೇದಿಕೆಯಲ್ಲಿ ಬೆಳವಡಿ ಮಲ್ಲಮ್ಮನ ಉತ್ಸವ-2020 ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬೆಳವಡಿ ಸಂಸ್ಥಾನದ ರಾಜಗುರು, ಹೂಲಿ ಹಿರೇಮಠದ ಶಿವಮಹಾಂತ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸುವರು. ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಉತ್ಸವ ಕಾರ್ಯಕ್ರಮ ಉದ್ಘಾಟಿಸುವರು.
Related Articles
Advertisement
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರಸಾರಾಂಗ ಸಲಹಾ ಸಮಿತಿ ಸದಸ್ಯ ಯ.ರು.ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಮೈಸೂರಿನ ಹಿರಿಯ ವಿದ್ವಾಂಸ ಡಾ| ಡಿ.ಎ.ಉಪಾಧ್ಯೆ ಅಧ್ಯಕ್ಷತೆ ವಹಿಸುವರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ|ಶೈಲಜಾ ಹಿರೇಮಠ ಅವರು ಬೆಳವಡಿ ರಾಣಿ ಮಲ್ಲಮ್ಮನನ್ನು ಅನುಲಕ್ಷಿಸಿ ವಿಷಯ ಕುರಿತು ಉಪನ್ಯಾಸ ನೀಡುವರು. ಬೆಳವಡಿಯ ಈಶಪ್ರಭು ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಎಂ.ಎಂ. ಕಾಡೇಶನವರ ಬೆಳವಡಿ ಸಂಸ್ಥಾನದ ವಂಶಸ್ಥರು ವಿಷಯ ಕುರಿತು ಉಪನ್ಯಾಸ ನೀಡುವರು. ಬೆಂಗಳೂರಿನ ಖ್ಯಾತ ಅಂಕಣಕಾರರಾದ ಡಾ| ವಿಜಯಲಕ್ಷ್ಮೀ ಬಾಳೇಕುಂದ್ರಿ ಬೆಳವಡಿ ರಾಣಿ ಮಲ್ಲಮ್ಮಳ ಬಾಲ್ಯ, ಶಿಕ್ಷಣ, ಸಾಹಸ ವಿಷಯ ಕುರಿತು ಉಪನ್ಯಾಸ ನೀಡುವರು. ಫೆ.28 ರಂದು ಸಂಜೆ 5 ರಿಂದಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.
ಫೆ.29 ರಂದು ಸಂಜೆ 5ರಿಂದ ಆನಂದ ಮೆಲೋಡಿಸ್ ತಂಡದಿಂದ ಭಾವಗೀತೆ ಗಾನ, ಮಡಿವಾಳಪ್ಪ ಕಿತ್ತೂರ ತಂಡದಿಂದ ಭಜನೆ, ಬಸಪ್ಪ ಅಮರಾವತಿ ತಂಡದಿಂದ ಶಹನಾಯಿ ವಾದನ, ಪಂಚಾಕ್ಷರಿ ಹಿರೇಮಠ ತಂಡದಿಂದ ವಚನ ಸಂಗೀತ, ಮಹಾದೇವ ಸತ್ತಿಗೇರಿ ತಂಡದಿಂದ ನಗೆಹೊನಲು,
ಬೆಳಗಾವಿಯ ಫೈಯರ್ ಫಿಟ್ಸ್ ಡ್ಯಾನ್ಸ್ ಗ್ರೂಪ್ ನಿಂದ ನೃತ್ಯ ರೂಪಕ, ಬೆಳವಡಿಯ ಬಾಬು ಖಂಡೋಜಿ ತಂಡದಿಂದ ಗಾಣಸುಧೆ, ಬಸಯ್ಯ ಗುತ್ತೆದಾರ ಸುಗಮ ಸಂಗೀತ, ಮಂಗಳೂರಿನ ಸತೀಶ ಎಂ ಅವರಿಂದ ಜಾದೂ ಪ್ರದರ್ಶನ, ಡಿ.ಆರ್.ನದಾಫ ಅವರ ಕೊಳಲು ವಾದನ, ಪ್ರೇರಣಾ ಶಿಂಧೆ ತಂಡದಿಂದ ನೃತ್ಯ ವೈವಿಧ್ಯ, ಬೆಂಗಳೂರಿನ ಬಿಗಬಾಸ್ ಖ್ಯಾತಿಯ ಚಲನಚಿತ್ರಗಳ ಖ್ಯಾತ ಹಿನ್ನೆಲೆ ಗಾಯಕರಿಂದ ರಸಮಂಜರಿಕಾರ್ಯಕ್ರಮ, ಹುಬ್ಬಳ್ಳಿಯ ಕಲಾಬಳಗದ ಜಿ.ವಿ.ಹಿರೇಮಠ ಅವರ ಹಾಸ್ಯಭರಿತ ನಾಟಕ, ಆನಿಗೋಳದ ರಾಮಲಿಂಗೇಶ್ವರ ನಾಟ್ಯ ಸಂಘದ ಗೋವಿಂದ ಪರಂಡಿ ಅವರ ನಿಜಗುಣ ಶಿವಯೋಗಿ ಸಣ್ಣಾಟ ನಡೆಯಲಿದೆ.
ಫೆ.29ರಂದು ಬೆಳಗ್ಗೆ 11ಕ್ಕೆ ಈಶಪ್ರಭು ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಆವರಣದಲ್ಲಿ ಕ್ರೀಡಾ ಕಾರ್ಯಕ್ರಮಗಳು ಜರುಗಲಿವೆ. ಮಹಿಳಾ ಮತ್ತು ಪುರುಷ ವಾಲಿಬಾಲ್ ಪಂದ್ಯಾವಳಿಯನ್ನು ಜಿಪಂ ಸದಸ್ಯ ಈರಣ್ಣ ಕರೀಕಟ್ಟಿ ಉದ್ಘಾಟಿಸುವರು. ಮಧ್ಯಾಹ್ನ 3ಕ್ಕೆ ಮಹಿಳಾ ಮತ್ತು ಪುರುಷ ಜಂಗಿ ಕುಸ್ತಿಗಳನ್ನು ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸುವರು.
ಜಿಲ್ಲಾಧಿಕಾರಿ ಡಾ| ಎಸ್.ಬಿ.ಬೊಮ್ಮನಹಳ್ಳಿ, ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಲಕ್ಷ್ಮಣ ನಿಂಬರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಉಪವಿಭಾಗಾಕಾರಿ ಶಿವಾನಂದ ಭಜಂತ್ರಿ ಉಪಸ್ಥಿತರಿರುವರೆಂದು ತಹಶೀಲ್ದಾರ್ ಡಾ|ದೊಡ್ಡಪ್ಪ ಹೂಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.