Advertisement
ಬೆಳ್ಳಾರೆ ಮೇಲಿನ ಪೇಟೆಯ ಬಸ್ ನಿಲ್ದಾಣದ ಎದುರು ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದು, ಕೆಸರು ನೀರು ನಿಂತು ಬಸ್ ಬಂದಾಗ ಪ್ರಯಾಣಿಕರಿಗೆ ಕೆಸರಿನ ಅಭಿಷೇಕವಾಗುತ್ತಿದೆ. ಬಸ್ ನಿಲ್ದಾಣದ ಬಳಿ ಮಾತ್ರವಲ್ಲದೆ ಕೇಳಗಿನ ಪೇಟೆಯಿಂದ ಮೇಲಿನ ಪೇಟೆಯ ವರೆಗೂ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದೆ. ರಸ್ತೆ ಬದಿಯಲ್ಲಿ ಕೆಸರು ನಿಂತು ಪಾದಾಚಾರಿಗಳಿಗೆ ನಡೆದಾಡಲೂ ಅಸಾಧ್ಯವಾಗಿದೆ.
ಅಸಮರ್ಪಕ ಸ್ಲಾಬ್ ಅಳವಡಿಕೆಯಿಂದ ಪೇಟೆಯ ಹಲವು ಕಡೆ ಚರಂಡಿ ನೀರು ರಸ್ತೆಗೆ ಬಂದು ಕೆಸರಾಗುತ್ತಿದೆ. ಇದರಿಂದ ರಸ್ತೆ ಬದಿ ನಡೆದುಕೊಂಡು ಹೋಗುವ ಪಾದಾಚಾರಿಗಳು ಸಮಸ್ಯೆ ಎದುರಿಸುವಂತಾಗಿದೆ. ಈ ವರ್ಷದ ಮೊದಲ ಮಳೆಗೆ ಬೆಳ್ಳಾರೆ ಪೇಟೆಯಲ್ಲಿ ಹಲವರಿಗೆ ಕೆಸರಿನ ಸಿಂಚನವಾಗಿದೆ. ಬೆಳೆಯುತ್ತಿರುವ ಬೆಳ್ಳಾರೆಯಲ್ಲಿ ಚರಂಡಿ ಅವ್ಯವಸ್ಥೆ ತೀವ್ರವಾಗಿದೆ. ಇಲ್ಲಿಗೆ ಪ್ರತಿನಿತ್ಯ ಬರುವ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪೇಟೆಯಲ್ಲಿ ನಡೆದಾಡುವಾಗ ತೊಂದರೆ ಅನುಭವಿಸುತ್ತಾರೆ. ಮಳೆಗಾಲಕ್ಕೂ ಮೊದಲೇ ಚರಂಡಿ ಸರಿಪಡಿಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿದ್ದರೆ ಈ ಸಮಸ್ಯೆ ತಪ್ಪಿಸಬಹುದಿತ್ತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರೋಗ ಭೀತಿ
ಲೋಕೋಪಯೋಗಿ ಇಲಾಖೆ 1 ಕೋಟಿ ರೂ. ಅನುದಾನದಿಂದ ಬೆಳ್ಳಾರೆ ಪೇಟೆಯ ಚರಂಡಿ ದುರಸ್ತಿ ಕಾರ್ಯ ನಡೆಸಿದೆಯಾದರೂ ಕೆಲವೆಡೆ ಅಸಮರ್ಪಕವಾಗಿ ಸ್ಲಾ$Âಬ್ ಅಳವಡಿಸಲಾಗಿದೆ. ಹಲವು ಹೊಟೇಲ್‌ಗಳ ತ್ಯಾಜ್ಯ ಚರಂಡಿ ನೀರು ಸೇರುವುದರಿಂದ ಚರಂಡಿ ಸೊಳ್ಳೆ ಉತ್ಪಾದನೆಯ ಕೇಂದ್ರವಾಗಿ ಬದಲಾಗಿದೆ. ಚರಂಡಿಯಲ್ಲಿ ಎಸೆದ ನೀರಿನ ಬಾಟಲಿ, ಅಂಗಡಿಗಳ ತ್ಯಾಜ್ಯವೂ ಸೇರಿಕೊಂಡು ಅಲ್ಲಲ್ಲಿ ನೀರು ನಿಂತು ದುರ್ವಾಸನೆ ಬೀರುತ್ತಿದೆ.
Related Articles
ಚರಂಡಿ ಸರಿಪಡಿಸಿ ಸರಾಗವಾಗಿ ನೀರು ಹರಿದುಹೋಗುವಂತೆ ಮಾಡಬೇಕೆಂದು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಅವರು ಮಾಡದಿದ್ದಲ್ಲಿ ಪಂಚಾಯತ್‌ನಿಂದಲೇ ಚರಂಡಿ ಶುಚಿಗೊಳಿಸಿ ಸರಾಗವಾಗಿ ನೀರು ಹರಿದುಹೋಗುವಂತೆ ಮಾಡಲಾಗುವುದು. ಸ್ವತ್ಛತೆಗೆ ಪಂಚಾಯತ್ ತ್ಯಾಜ್ಯ ಸಂಗ್ರಹಣ ವಾಹನ ಬೆಳ್ಳಾರೆ ಅಂಗಡಿ ಹಾಗೂ ಹೊಟೇಲ್‌ಗಳ ಬಾಗಿಲಿಗೆ ಹೋಗುತ್ತಿದ್ದರೂ ಬಾಟಲಿ ಹಾಗೂ ತ್ಯಾಜ್ಯಗಳನ್ನು ಚರಂಡಿಗೆ ಎಸೆಯುತ್ತಿದ್ದಾರೆ. ಈ ರೀತಿ ಮಾಡದಂತೆ ಸೂಚನೆ ನೀಡಿದ್ದೇವೆ.
– ಶಕುಂತಳಾ ನಾಗರಾಜ್, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ
Advertisement