Advertisement

ಬೆಳಪು ಗ್ರಾ.ಪಂ ಅಧ್ಯಕ್ಷರಾಗಿ ಶೋಭಾ ಜಿ ಭಟ್, ಉಪಾಧ್ಯಕ್ಷರಾಗಿ ಶರತ್ ಕುಮಾರ್ ಅವಿರೋಧ ಆಯ್ಕೆ

07:13 PM Feb 16, 2021 | Team Udayavani |

ಕಾಪು: ಬೆಳಪು ಗ್ರಾ ಪಂ ಅಧ್ಯಕ್ಷರಾಗಿ ಬೆಳಪು ಗ್ರಾಮಾಭಿವೃದ್ಧಿ ಸಮಿತಿ ಬೆಂಬಲಿತ ಶೋಭಾ ಜಿ. ಭಟ್ ಹಾಗೂ ಶರತ್ ಕುಮಾರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

11 ಸದಸ್ಯ ಬಲದ ಗ್ರಾ.ಪಂನಲ್ಲಿ ಗ್ರಾಮಾಭಿವೃದ್ಧಿ ಬೆಂಬಲಿತ 8, ಬಿಜೆಪಿ ಬೆಂಬಲಿತ 1 ಹಾಗೂ ಎಸ್‌ಡಿಪಿಐ ಬೆಂಬಲಿತ 2 ಸದಸ್ಯರು ಚುನಾಯಿತರಾಗಿದ್ದರು.

ಮಾನ್ಯ ಮಹಿಳೆ ಮೀಸಲಿನಡಿ ಅಧ್ಯಕ್ಷ ಸ್ಥಾನಕ್ಕೆ 4ನೇ ಅವಧಿಗೆ ಸದಸ್ಯರಾದ ಶೋಭಾ ಮತ್ತು ನಫೀಜಾ ಬಾನು, ಹಿಂದುಳಿದ ವರ್ಗ ಎ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿಗೆ ಸದಸ್ಯರಾದ ಶರತ್ ಕುಮಾರ್ ಮತ್ತು ಪಾಹಿಂ ಬೆಳಪು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಚುನಾವಣೆ ಪ್ರಕ್ರಿಯೆಯಲ್ಲಿ ನಫೀಜಾ ಹಾಗೂ ಪಾಹಿಂ ಕಣದಿಂದ ಹಿಂದೆ ಸರಿದರು.

ಇದನ್ನೂ ಓದಿ:ಇನ್ನಂಜೆ ಗ್ರಾಮ ಪಂಚಾಯತ್‌ನಲ್ಲಿ ಮತ್ತೆ ಬಿಜೆಪಿ ಆಡಳಿತ ಅಧಿಕಾರಕ್ಕೆ

ಕಣದಲ್ಲಿ ಉಳಿದ ಶೋಭಾ ಮತ್ತು ಶರತ್ ಆಯ್ಕೆಯನ್ನು ಚುನಾವಣಾಧಿಕಾರಿ ವೀಣಾ ವಿವೇಕಾನಂದ ಘೋಷಿಸಿದರು. ಆಡಳಿತಾಧಿಕಾರಿ ಸಂತೋಷ್, ಪಿಡಿಒ ರಮೇಶ್ ಹಾಗೂ ಕಾರ್ಯದರ್ಶಿ ಸುಮಿತ್ರ ಚುನಾವಣೆ ಪ್ರಕ್ರಿಯೆಯಲ್ಲಿ ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next