Advertisement
ಬೇಳಂಜೆ ಬಸ್ಸು ನಿಲ್ದಾಣದ ಸಮೀಪ ರಿಕ್ಷಾ ಸ್ಟಾಂಡ್ ಬೇಕೆನ್ನುವುದು ಇಲ್ಲಿನ ರಿಕ್ಷಾ ಚಾಲಕರ ಬೇಡಿಕೆಯಾಗಿತ್ತು. ಆದರೆ ನಿರ್ಮಾಣವಾದ ಸ್ಟಾಂಡ್ ಬಸ್ಸು ನಿಲ್ದಾಣಕ್ಕಿಂತ ಸ್ವಲ್ಪದೂರದಲ್ಲಿದೆ. ಈ ಕಾರಣ ರಿಕ್ಷಾದವರು ಹೋಗುತ್ತಿಲ್ಲ ಎನ್ನಲಾಗಿದೆ.
ಕಳೆದ 2 ವರ್ಷದ ಹಿಂದೆ ರಿಕ್ಷಾ ಸ್ಟಾÂಂಡ್ನ ತಗಡಿನ ಮಾಡು ನಿರ್ಮಾಣ ಮಾಡಿದ್ದು ಕಳೆದ 3 ತಿಂಗಳ ಹಿಂದೆ ಇಂಟರ್ಲಾಕ್ ಅಳವಡಿಸಲಾಗಿದೆ.ಆದರೆ ಇನ್ನೂ ಕೂಡ ಇದರ ಉಪಯೋಗ ಮಾತ್ರ ಆಗಿಯೇ ಇಲ್ಲ. ಈ ಬಗ್ಗೆ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಪ್ರಶ್ನಿಸಿದ್ದು ರಿಕ್ಷಾ ಚಾಲಕರ ಸಭೆ ಕರೆದು ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇತ್ಯರ್ಥಪಡಿಸುತ್ತೇವೆ
ಈ ಬಗ್ಗೆ ಈಗಾಗಲೇ ಪಂಚಾಯತ್ನಲ್ಲಿ ಚರ್ಚೆ ನಡೆಸಿದ್ದು ಶೀಘ್ರ ರಿಕ್ಷಾ ಚಾಲಕರ ಸಭೆ ಕರೆದು ನಿರ್ಮಾಣವಾದ ರಿಕ್ಷಾ ಸ್ಟಾಡ್ನಲ್ಲಿ ರಿಕ್ಷಾ ನಿಲ್ಲಿಸುವಂತೆ ಸೂಚಿಸಲಾಗುವುದು.
-ಆನಂದ ಕುಮಾರ್ ಬಿ.ಕೆ., ಪಿ.ಡಿ.ಒ. ಕುಚ್ಚಾರು ಗ್ರಾ.ಪಂ.
Related Articles
ಈಗ ನಿರ್ಮಾಣವಾದ ರಿಕ್ಷಾ ಸ್ಟಾ¤ಂಡ್ ಬಸ್ಸು ತಂಗುದಾಣದಿಂದ ದೂರವಿದ್ದು ಅಲ್ಲಿ ರಿಕ್ಷಾ ನಿಲ್ಲಿಸಿದರೆ ಜನ ಬರುವುದಿಲ್ಲ.ಈ ಬಗ್ಗೆ ಮುಂಚೆಯೇ ಪಂಚಾಯತ್ ಗಮನಕ್ಕೆ ತಂದಿದ್ದು ಬಸ್ಸುತಂಗುದಾಣ ಸಮೀಪ ಜಾಗ ಸಮತಟ್ಟು ಮಾಡಿದ್ದಾರೆ.ಆದರೆ ಬಳಿಕ ಬೇರೆ ಜಾಗದಲ್ಲಿ ನಿಲ್ದಾಣ ಮಾಡಿದ್ದಾರೆ. ಇದರಿಂದ ಅನುಕೂಲವಿಲ್ಲ.
-ಬಸವರಾಜ್, ರಿಕ್ಷಾ ಚಾಲಕರು
Advertisement