ಸುವರ್ಣ ವಿಧಾನಸೌಧ: ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ, ಸರ್ಕಾರ ತನ್ನ ಭ್ರಷ್ಟಾಚಾರಕ್ಕೆ ತೇಪೆ ಹಚ್ಚುವ, ಅದನ್ನು ಮುಚ್ಚಿಕೊಳ್ಳುವ ಕೆಲಸ ಮಾಡಿದೆ. ಈ ಅಧಿವೇಶನ ತಮಗೆ ತೃಪ್ತಿ ತಂದಿಲ್ಲ ಎಂದು ವಿಧಾನ ಪರಿಷತ್ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಸುವರ್ಣ ಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಆಗಲಿಲ್ಲ. ಕಿತ್ತೂರು ಕರ್ನಾಟಕದ ಬಗ್ಗೆ, ಸಮಗ್ರ ಕರ್ನಾಟಕದ ಬಗ್ಗೆ ಚರ್ಚೆ ನಡೆಯಲಿಲ್ಲ. ಚಳಿಗಾಲದ ಅಧಿವೇಶನ ಅತೃಪ್ತಿ ತಂದಿದೆ ಎಂದು ಹೇಳಿದರು.
ಕೆಐಡಿಬಿಯಲ್ಲಿ ಭ್ರಷ್ಟಾಚಾರ ಆಗಿದೆ. ಅದನ್ನು ತನಿಖೆ ಮಾಡುತ್ತಿಲ್ಲ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಬೇಕಾದವರಿಗೆ ಸೈಟ್ ಹಂಚಿಕೆ ಮಾಡಿದ್ದಾರೆ. ಖಾಲಿ ಜಾಗ ಅವರ ಬುಟ್ಟಿಗೆ ಹಾಕಿದ್ದಾರೆ. ರಾಯಚೂರು ಉಷ್ಣ ವಿದ್ಯುತ್ ಸ್ಥಾವರಕ್ಕೆ ಬಣ್ಣ ಬಳಿಯಲು 120 ಕೋಟಿ ರೂಪಾಯಿ ನಿಗದಿ ಮಾಡಿದ್ದಾರೆ. ಉಷ್ಣ ವಿದ್ಯುತ್ ಸ್ಥಾವರಕ್ಕೆ ಬಣ್ಣ ಬಳಿಯಲು 120 ಕೋಟಿ ರೂಪಾಯಿ ಬೇಕಾ? ವಾಲ್ಮೀ ಕಿ, ಮುಡಾ ಹಗರಣ ಹಾಗೂ ಇತರ ಹಗರಣ ಮುಚ್ಚಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಅವರು ಆರೋಪಿಸಿದರು.
ನಾನು ರಾಜ್ಯದ ಜನರ ಕ್ಷಮೆ ಕೊರುವೆ. ಎಷ್ಟೇ ಕೇಳಿದರೂ ಸರ್ಕಾರ ಚರ್ಚೆ ಮಾಡಲು ತಯಾರಿಲ್ಲ. ಗ್ಯಾರಂಟಿ ಬಿಟ್ಟು ಸರ್ಕಾರದ ಬಳಿ ಬೇರೆ ಮಾತಿಲ್ಲ. ಗ್ಯಾರಂಟಿಗಳೇ ಶಾಶ್ವತವಲ್ಲ. ಇಷ್ಟು ದಿನ ಜನರು ಉಪವಾಸ ಇದ್ದರಾ? ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ ಮಾಡಬೇಕು. ಗ್ಯಾರಂಟಿಯಲ್ಲೇ ಸರ್ಕಾರ ಮುಗಿದರೆ ಹೇಗೆ ಎಂದು ವಾಗ್ಧಾಳಿ ಛಲವಾದಿ ವಾಗ್ಧಾಳಿ ನಡೆಸಿದರು.
ಯಡಿಯೂರಪ್ಪೋತ್ಸವ ಇಚ್ಚೆಯೇ
ಹೊರತು ಬಲ ಪ್ರದರ್ಶನವಲ್ಲ
ಮಾಜಿ ಸಿಎಂ ಯಡಿಯೂರಪ್ಪ ಜನ್ಮ ದಿನಾಚರಣೆ ಹೆಸರಲ್ಲಿ ಯಡಿಯೂರಪ್ಪೋತ್ಸವ ಆಚರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜನ್ಮ ದಿನಾಚರಣೆ ಅವರಿಗೆ ಸಂಬಂಧಿಸಿದ್ದು. ಅಭಿಮಾನಿಗಳು ಮಾಡಿದರೆ ಮಾಡಲಿ. ಅದು ಅವರ ಇಚ್ಛೆಯೇ ಹೊರತು ಬಲ ಪ್ರದರ್ಶನ ಅಲ್ಲ ಎಂದು ಹೇಳಿದರು.