Advertisement

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

12:18 PM Apr 29, 2024 | Team Udayavani |

ಬೆಳಗಾವಿ: ರಾಜ್ಯದ ರಾಜಕಾರಣ, ದೇಶದ ರಾಜಕಾರಣ ತಲೆ ತಗ್ಗಿಸುವ ಘಟನೆಯಿದು. ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ ನಮ್ಮ ರಾಜ್ಯದಲ್ಲಿ ಆಗಿದ್ದು ಖೇದಕರ ಎಂದು ಪ್ರಜ್ವಲ್ ರೇವಣ್ಣ ವಿಡಿಯೋ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Advertisement

ಬೆಳಗಾವಿಯ ಗೃಹ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರಜ್ವಲ್ ರೇವಣ್ಣ ವಿಡಿಯೋ ಹರಿದಾಡುತ್ತಿವೆ. ಈ ಎಲ್ಲ ವಿಚಾರಗಳನ್ನು ಹಾಸನ ಬಿಜೆಪಿ ಮುಖಂಡ ದೇವರಾಜಗೌಡ ಡಿಸೆಂಬರ್ ‌ಸಮಯದಲ್ಲೇ ವಿಜಯೇಂದ್ರ ಗಮನಕ್ಕೆ ತಂದಿದ್ದರು. ಮಾಜಿ ಶಾಸಕ ಪ್ರೀತಂಗೌಡ ಕೂಡ ಈ ಎಲ್ಲ ವಿಚಾರಗಳನ್ನು ಅಮಿತ್ ಶಾ ಗಮನಕ್ಕೆ ತಂದಿದ್ದರು. ಈ ಎಲ್ಲ ವಿಚಾರಗಳು ಗೊತ್ತಿದ್ದರೂ ರಾಜಕೀಯ ‌ಲಾಭಕ್ಕಾಗಿ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರು ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಹಾಸನದ ಹಾಲಿ ಸಂಸದರಾಗಿದ್ದಾರೆ. ಅವರ ಅಧಿಕಾರ ದುರುಪಯೋಗವಾಗಿದೆ. ಅಧಿಕಾರ ದರ್ಪ, ಆಸೆ ಆಮೀಷ ತೋರಿಸಿ ನೂರಾರು ಮಹಿಳೆಯರ ದುರುಪಯೋಗವಾಗಿದೆ. ವಿಡಿಯೋ ನೋಡಿದರೆ ಮಹಿಳೆಯರ ಜೀವಂತ ಕೊಲೆಯಾಗಿದೆ ಅನಿಸುತ್ತದೆ. ವಿಡಿಯೋ ಶೇರ್ ಮಾಡಲು ಹೋಗಬೇಡಿ, ಸಮಾಜದ ಸ್ವಾಸ್ಥ್ಯ ಕೆಡಿಸುತ್ತದೆ ಎಂದು ಹೆಬ್ಬಾಳ್ಕರ್ ಹೇಳಿದರು.

ಜಗದೀಶ ಶೆಟ್ಟರ ಅವರು ಪ್ರತಿಪಕ್ಷ ನಾಯಕರಾಗಿಯೂ ಬಹಳಷ್ಟು ಹೋರಾಟ ಮಾಡಿದವರು. ಹೋರಾಟಕ್ಕೆ ತೋರಿದ ಆಸಕ್ತಿಯನ್ನು ಶೆಟ್ಟರ್ ಪ್ರಜ್ವಲ ರೇವಣ್ಣ ವಿರುದ್ಧ ಹೋರಾಟಕ್ಕೆ ತೋರುತ್ತಿಲ್ಲ. ಮಾಜಿ ಶಾಸಕ ಸಂಜಯ್ ಪಾಟೀಲ ನನ್ನ ವಿರುದ್ಧ ಮಾತನಾಡಿದಾಗ ಶೆಟ್ಟರ, ಮಂಗಳಾ ಅಂಗಡಿ ತಲೆ ಅಲ್ಲಾಡಿಸಿ ನಕ್ಕರು. ಪ್ರಜ್ವಲ್ ರೇವಣ್ಣನ ನೀಚಕೃತ್ಯವನ್ನು ಮಾಜಿ ಶಾಸಕ ಸಂಜಯ ಪಾಟೀಲ ಏಕೆ ‌ಖಂಡಿಸುತ್ತಿಲ್ಲ? ಇದೆಯೇ ಬಿಜೆಪಿಯ ಸಭ್ಯತೆ, ಇದೆನಾ ಬಿಜೆಪಿಯ ಸಂಸ್ಕೃತಿ ಎಂದು ಹೆಬ್ಬಾಳಕರ ಆಕ್ರೋಶ ವ್ಯಕ್ತಪಡಿಸಿದರು.

ವಿಜಯೇಂದ್ರ, ಅಶೋಕಣ್ಣ ತಮ್ಮ ರಾಜಕೀಯ ನಿಲುವು ಏನು ಹೇಳಬೇಕು. 300ಕ್ಕೂ ಅಧಿಕ ಮಹಿಳೆಯರ ಮೇಲೆ ನಡೆ ನೀಚ ಕೃತ್ಯವನ್ನು ಖಂಡಿಸುತ್ತಿಲ್ಲ. ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ಈ ಬಗ್ಗೆ ಮಾತನಾಡುತ್ತಿಲ್ಲ. ಬೆಳಗಾವಿಗೆ ಬಂದ ಗೌರವಾನ್ವಿತ ಪ್ರಧಾನಿ ಕೂಡ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ. ರಾಜಕೀಯ ಲಾಭಕ್ಕಾಗಿ ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುತ್ತಿದ್ದಿರಾ?. ಮಹಿಳೆಯರ ಬಗ್ಗೆ ಬಿಜೆಪಿಗೆ ನಿಜವಾಗಲೂ ಗೌರವ ಇದ್ದಿದ್ದರೆ ಈ ಕೃತ್ಯ ಖಂಡಿಸಬೇಕಿತ್ತು. ಪ್ರಜ್ವಲ್ ರೇವಣ್ಣ ಮಹಿಳಾ‌ಪೀಡಕ ಎಂಬುದು ಗೊತ್ತಿದ್ದರೂ ಬಿಜೆಪಿಯವರು ರಕ್ಷಣೆ ಮಾಡಿದ್ದಾರೆ. ನನಗೆ ವಿದೇಶದಿಂದ ಹಲವು ಮಹಿಳೆಯರು ಫೋನ್ ಮಾಡಿ ಕೇಳ್ತಿದ್ದಾರೆ ಎಂದರು.

Advertisement

ಮುಖವಾಡ ಕಳಚಿ ಬೀಳಲಿದೆ: ಮಹಿಳೆಯರ ಮಾಂಗಲ್ಯ ಕಿತ್ತುಕೊಳ್ಳುತ್ತಾರೆ ಎಂದು ಪ್ರಧಾನಿ ಮೋದಿ ಭಾಷಣ ಮಾಡ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ, ಆ‌ ಮಹಿಳೆಯರ ಮಾಂಗಲ್ಯ ಗತಿ ಏನು? ಪ್ರಜ್ವಲ್ ರೇವಣ್ಣ ಪ್ರಕರಣದದ ಬಗ್ಗೆ ಪ್ರಧಾನಿ ಮೋದಿ, ಬಿಎಸ್‌ವೈ, ವಿಜಯೇಂದ್ರ ಸ್ಟ್ಯಾಂಡ್ ಏನು? ಈ ಪ್ರಕರಣದಿಂದ ಬಿಜೆಪಿ ನಾಯಕರ ಮುಖವಾಡ ಕಳಚಿಬೀಳುತ್ತದೆ ಎಂದರು.

ಹುಬ್ಬಳ್ಳಿ ನೇಹಾ ಹತ್ಯೆ ಖಂಡಿಸಿದ ಶೆಟ್ಟರ್, ಮಂಗಳಾ ಅಂಗಡಿ ಈ ವಿಚಾರದಲ್ಲಿ ಮೌನ ಏಕೆ?  ನಿಮ್ಮ ಮೈತ್ರಿ ಅಭ್ಯರ್ಥಿಯ ವರ್ತನೆಯನ್ನು ‌ಖಂಡಿಸಬೇಕು. 16 ವರ್ಷದಿಂದ 50 ವರ್ಷ ವಯಸ್ಸಿನ ‌ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ನೊಂದವರ, ಸಂತ್ರಸ್ತರ ಪರವಾಗಿ ನಾನು ಓರ್ವ ಮಹಿಳೆಯಾಗಿ, ಸಚಿವೆಯಾಗಿ ನಿಲ್ಲುವೆ ಎಂದು ಹೆಬ್ಬಾಳ್ಕರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next