Advertisement
ನಗರದಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಬೇಕು. ವಾಹನಗಳ ನಿಲುಗಡೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆ ಮತ್ತು ಮಾಡಿದ ಹೋರಾಟಗಳಿಗೆ ಲೆಕ್ಕವೇ ಇಲ್ಲ. ಮನಸ್ಸಿಗೆ ಬಂದಂತೆ ಎಲ್ಲೆಂದರೆಲ್ಲಿ ಮಾಡುವ ವಾಹನಗಳ ಪಾರ್ಕಿಂಗ್ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತಿದೆ. ಇಂತಹ ಹತ್ತಾರು ಅಡೆತಡೆಗಳ ನಡುವೆ ವಾಹನಗಳ ನಿಲುಗಡೆ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಮಹಾನಗರಪಾಲಿಕೆ, ಸ್ಮಾರ್ಟ್‌ಸಿಟಿ ಯೋಜನೆ ಮುಂದಾಗಿವೆ. ನಗರದ ಹೃದಯ ಭಾಗದಲ್ಲಿರುವ ಬಾಪಟ್ ಗಲ್ಲಿಯಲ್ಲಿ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಿಸಲು ಹಸಿರು ನಿಶಾನೆ ಸಿಕ್ಕಿದ್ದು ಅಂದುಕೊಂಡಂತೆ ಈ ಯೋಜನೆ ತ್ವರಿತವಾಗಿ ಕೈಗೂಡಿದರೆ ಒಂದೂವರೆ ದಶಕಗಳ ಕನಸು ನನಸಾಗಲಿದೆ.
Related Articles
Advertisement
ಈಗ ಕೊನೆಗೂ 2023 ರಲ್ಲಿ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು ಶಾಸಕ ಅಸಿಫ್ (ರಾಜು) ಸೇಠ ಅವರು ಚಾಲನೆ ಕೊಟ್ಟಿದ್ದಾರೆ. ಒಟ್ಟು 12 ಗುಂಟೆ ಜಾಗದಲ್ಲಿ ನೆಲಮಹಡಿ ಸೇರಿದಂತೆ ಒಟ್ಟು ಐದು ಮಹಡಿಗಳ ಸಂಕೀರ್ಣ ನಿರ್ಮಾಣವಾಗಲಿದೆ. ಇದಕ್ಕಾಗಿ ಎರಡು ವರ್ಷದ ಕಾಲಮಿತಿ ನಿಗದಿಪಡಿಸಲಾಗಿದೆ. ಈ ಪಾರ್ಕಿಂಗ್ ಪ್ರದೇಶದಲ್ಲಿ ಏಕಕಾಲಕ್ಕೆ 120 ಕಾರುಗಳನ್ನುಪಾರ್ಕಿಂಗ್ ಮಾಡಬಹುದು ಎಂಬುದು ಗಮನಿಸಬೇಕಾದ ಸಂಗತಿ. ಸ್ಮಾರ್ಟ್‌ಸಿಟಿ ಯೋಜನೆ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ 12 ಗುಂಟೆ ಜಾಗದಲ್ಲಿ ಈ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಾಣವಾಗಲಿದೆ. ಕಾರುಗಳ ಪಾರ್ಕಿಂಗ್ ಜೊತೆಗೆ ವಾಣಿಜ್ಯ ಮಳಿಗೆಗಳನ್ನು ಸಹ ನಿರ್ಮಾಣ ಮಾಡಲಾಗುತ್ತದೆ. ಮೊದಲು ಲೀಸ್ ಅವಧಿಯಲ್ಲಿ ಈ ಅಂಗಡಿಗಳನ್ನು ನೀಡಲಾಗುವದು. ನಂತರ ಇದನ್ನು ಮಹಾನಗರಪಾಲಿಕೆಗೆ ಹಸ್ತಾಂತರ ಮಾಡಲು ಯೋಜನೆ ರೂಪಿಸಲಾಗಿದೆ. ನೆಲಮಹಡಿ ಹಾಗೂ ಮೊದಲ ಮಹಡಿಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ನಂತರದ ಮಹಡಿಗಳಲ್ಲಿ ತಲಾ 30 ಕಾರುಗಳಂತೆ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ದೊರೆಯಲಿದೆ. ಅಂಗಡಿಗಳನ್ನು ಬಾಡಿಗೆ ಆಧಾರದ ಮೇಲೆ ನೀಡುವದರಿಂದ ಪಾಲಿಕೆಗೆ ಆದಾಯವೂ ಬರುತ್ತದೆ. ಈ ಹಿನ್ನಲೆಯಲ್ಲಿ ಸಾಧ್ಯವಾದಷ್ಟು ಬೇಗ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ. ಬಹಳ ವರ್ಷಗಳ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದು ಕಾಮಗಾರಿ ಪೂರ್ಣಗೊಂಡರೆ ಬೆಳಗಾವಿ ನಗರದಲ್ಲಿನ ವಾಹನಗಳ ನಿಲುಗಡೆ ಸಮಸ್ಯೆಗೆ ಸ್ವಲ್ಪವಾದರೂ ಪರಿಹಾರ ಸಿಗಲಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಯೋಜನೆ ರೂಪಿಸಲಾಗಿದ್ದು ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು
ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಮಹಾನಗರಪಾಲಿಕೆಯವರು ಅಲ್ಲಿನ ಜಾಗವನ್ನು ತೆರವುಗೊಳಿಸಿ ಹಸ್ತಾಂತರ ಮಾಡಿದ ತಕ್ಷಣ ಕಾಮಗಾರಿ ಆರಂಭಿಸಲಾಗುವದು. ಬಹುಮಹಡಿ ಪಾರ್ಕಿಂಗ್ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಿಂದ ಎರಡು ಕೋಟಿ
ವೆಚ್ಚ ಮಾಡಲಾಗುತ್ತಿದೆ.
ಸಯೀದಾ ಅಫ್ರಿನ್ ಬಳ್ಳಾರಿ, ಸ್ಮಾರ್ಟ್‌ಸಿಟಿ ಎಂ ಡಿ *ಕೇಶವ ಆದಿ