Advertisement

Belagavi: ಅಂಕ ಗಳಿಕೆಗೆ ಓದುವುದಕ್ಕಿಂತ ಜ್ಞಾನ ಗಳಿಕೆಗೆ ಓದಿ- ಶೆಟ್ಟರ್‌

05:48 PM Nov 28, 2023 | Team Udayavani |

ಹಿರೇಬಾಗೇವಾಡಿ: ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಗಳಿಸಲು ತಂದೆ-ತಾಯಿ ಮತ್ತು ಶಿಕ್ಷಕರ ಮಾರ್ಗದರ್ಶನ ಅವಶ್ಯ ಎಂದು ರಾಣೇಬೆನ್ನೂರಿನ ನಂದೀಶ್ವರ ನೈಪುಣ್ಯ ಕೌಶಲ್ಯ ಸಂಸ್ಥೆ ಅಧ್ಯಕ್ಷ ಹಾಗೂ ಜೀವನ
ಕೌಶಲ್ಯ ತರಬೇತುದಾರ ನಂದೀಶ ಬಿ ಶೆಟ್ಟರ್‌ ಹೇಳಿದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಬೆಳಗಾವಿ ಗ್ರಾಮಾಂತರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ರಾಣೇಬೆನ್ನೂರು ನಂದೀಶ್ವರ ನೈಪುಣ್ಯ ಕೌಶಲ್ಯ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಬಸವ ನಗರದ ಶಿವಾಲಯದ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಎಸ್‌ಎಸ್‌ ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಫಲಿತಾಂಶ ಹೆಚ್ಚಿಸಲು ಸೋಮವಾರ ಏರ್ಪಡಿಸಿದ್ದ ಒಂದು ದಿನದ ವಿಶೇಷ ನೈಪುಣ್ಯ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ತರಬೇತುದಾರರಾಗಿ ಅವರು ಮಾತನಾಡಿದರು.

ಶಾಲೆಯಲ್ಲಿ ಪ್ರತಿನಿತ್ಯದ ಪಾಠಗಳನ್ನು ಅಂದೇ ಓದಿ, ಬರೆದು ಮತ್ತು ವಿಶ್ಲೇಷಣೆ, ಪುನರಾವರ್ತನೆ ಮಾಡುತ್ತ ಬಂದರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ. ಅಂಕಗಳಿಸುವುದಕ್ಕೋಸ್ಕರ ಕಷ್ಟಪಟ್ಟು ಓದುವುದಕ್ಕಿಂತ ತಮ್ಮ ಜ್ಞಾನದ ಭಂಡಾರವನ್ನು
ಇಮ್ಮಡಿಗೊಳಿಸಲು ಇಷ್ಟಪಟ್ಟು ಓದಿದಾಗ ಎಲ್ಲವೂ ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಸಹ ಇಷ್ಟುಪಟ್ಟು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕೆಂದರು.

ಕೆಪಿಸಿಸಿ ಸದಸ್ಯ ಸುರೇಶ ಇಟಗಿ ಮಾತನಾಡಿ, ಶಿಕ್ಷಕರು ಮಾಡುವ ಪಾಠವನ್ನು ಸರಿಯಾಗಿ ಅಭ್ಯಾಸ ಮಾಡಬೇಕು. ವಿದ್ಯಾರ್ಥಿಗಳು ಪರೀಕ್ಷೆ ಭಯವನ್ನು ಬಿಟ್ಟು ಓದಿನ ಕಡೆ ಹೆಚ್ಚಿನ ಗಮನ ಕೊಟ್ಟರೆ ಉತ್ತಮ ಅಂಕ ಪಡೆಯಲು ಸಾಧ್ಯ ಎಂದು ಹೇಳಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.

ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಯೋಜನಾ ಅಧಿಕಾರಿ ಭಾರತಿ ಶೆಟ್ಟರ್‌, ಕಾಂಗ್ರೆಸ್‌ ಕಮಿಟಿ ಬ್ಲಾಕ್‌ ಅಧ್ಯಕ್ಷ
ಸಿ.ಸಿ ಪಾಟೀಲ, ಬೆಳಗಾವಿ ಗ್ರಾಮಾಂತರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಪಿ.ದಾಸಪ್ಪನವರ, ಬೆಳಗಾವಿ ಗ್ರಾಮಾಂತರ ಕ್ಷೇತ್ರ ಸಮನ್ವಯಾಧಿಕಾರಿ ಡಾ ಎಮ್‌.ಎಸ್‌.ಮೇದಾರ, ನೋಡಲ್‌ ಅ ಧಿಕಾರಿ ಸುನೀಲ ಕುಟ್ರೆ, ಎಸ್‌.ಆರ್‌ ದಂಡಿನ, ಬಿಆರ್‌ಪಿ ಎಸ್‌.ವಿ. ತಾರಾಪೂರ, ಸಿಆರ್‌ ಪಿಗಳಾದ ಶ್ರೀಕಾಂತ ತಾವರೆ, ಸಿ.ಎಸ್‌.ಪಾಟೀಲ, ಬಾಳು ಮಕಾಟೆ, ವಿವಿಧ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ 1050 ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next