Advertisement

Belagavi; ನನ್ನನ್ನು ಯಾರೂ ಮುಟ್ಟಲೂ ಆಗದು..: ಗುಡುಗಿದ ಸಿಎಂ ಸಿದ್ದರಾಮಯ್ಯ

05:50 PM Aug 26, 2024 | Team Udayavani |

ಬೆಳಗಾವಿ: ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಸೋಮವಾರ (ಆ.26) ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು.

Advertisement

ಬಳಿಕ ಮಾತನಾಡಿದ ಅವರು, ಕಿತ್ತೂರು ಸೈನ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಮುಖ ಸೈನಿಕನಾಗಿದ್ದರು. ಮೊದಲನೇ ಯುದ್ಧದಲ್ಲಿ ಕಿತ್ತೂರು ಸಂಸ್ಥಾನಕ್ಕೆ ಜಯ ದೊರಕುತ್ತದೆ. ಎರಡನೇ ಯುದ್ದದಲ್ಲಿ ಸೋಲಾಗುತ್ತದೆ, ಕಿತ್ತೂರು ರಾಣಿ ಚನ್ನಮ್ಮ ಸೆರೆಯಾಗುತ್ತಾರೆ. ಆಗ ಸಂಗೊಳ್ಳಿ ರಾಯಣ್ಣ ಸೆರೆಯಾಗದೆ ಕಿತ್ತೂರನ್ನು ಬ್ರಿಟಿಷರಿಂದ ಬಿಡಿಸಬೇಕು ಎಂದು ಹೋರಾಟ ಮಾಡಿದರು. ಹಳ್ಳಿ, ಕಾಡು-ಮೇಡು ಸುತ್ತಿ ಸೈನ್ಯ ಕಟ್ಟಿಕೊಂಡು ಗೆರಿಲ್ಲಾ ಯುದ್ಧ ಮಾಡುತ್ತಾರೆ. ಬ್ರಿಟಿಷರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾರೆ, ಸಂಗೊಳ್ಳಿ ರಾಯಣ್ಣ ಬ್ರಿಟಿಷರ ಕೈಗೆ ಸಿಗಲ್ಲ. ಆಗ ಬ್ರಿಟಿಷರು ಒಂದು ಉಪಾಯ ಹೂಡುತ್ತಾರೆ. ನಮ್ಮವರನ್ನೇ ಬಳಕೆ ಮಾಡಿಕೊಂಡು ಈಜುವ ಸಮಯದಲ್ಲಿ ಹಿಡಿಸುತ್ತಾರೆ. ಕತ್ತಿ ಗುರಾಣಿ ಇರಲ್ಲ, ಆಗ ಹಿಡಿಯಬಹುದು ಎಂದು ನಮ್ಮವರೇ ಸಹಾಯ ಮಾಡಿದರು. ನಮ್ಮವರು ತಾಯಗಂಡರು ಹಿಡಿದುಕೊಟ್ಟುಬಿಡುತ್ತಾರೆ. ಈಗಲೂ ಇದ್ದಾರೆ ದೇಶದ್ರೋಹಿಗಳು ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಬಾಲಚಂದ್ರ ಜಾರಕಿಹೊಳಿ ಮುಖ ನೋಡಿದರು.

ಬಾಲಚಂದ್ರ ನಮ್ಮ ಪರ, ಆದರೆ ಅವರ ಸಹಪಾಠಿಗಳು ನನ್ನ ವಿರುದ್ಧ. ಹೇಗಾದರೂ ಮಾಡಿ ನನ್ನ ಅಧಿಕಾರದಿಂದ ಇಳಿಸಬೇಕೆನ್ನುವುದು ಅವರ ಉದ್ದೇಶ. ಅದು ಸಾಧ್ಯವೇ ಇಲ್ಲ‌. ನಾನು ಯಾವುದೇ ತಪ್ಪು ಮಾಡಿಲ್ಲ. ಎಲ್ಲಿಯವರೆಗೆ ನಿಮ್ಮ ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೂ ನನ್ನನ್ನು ಯಾರೂ ಮುಟ್ಟಲೂ ಆಗದು ಎಂದು ಗುಡುಗಿದರು.

ಹಿಂದುಳಿದವರು ಸಿಎಂ ಆಗಿದ್ದಾರೆಂದು ತಡೆಕೊಳ್ಳದು ಆಗುತ್ತಿಲ್ಲ. ಹಾಗೆಯೇ ಸಂಗೊಳ್ಳಿ ರಾಯಣ್ಣನನ್ನೂ ಹಿಡಿದು ಹಾಕಿದರು ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next