Advertisement

ಮಾಧ್ಯಮದಲ್ಲಿ ಮಾತ್ರ ನಾಯಕತ್ವ ಬದಲಾವಣೆ ಸುದ್ದಿ: ನಿರಾಣಿ

09:23 PM Jun 10, 2021 | Team Udayavani |

ಬೆಳಗಾವಿ: ಮಾಧ್ಯಮಗಳಲ್ಲಿ ಮಾತ್ರ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸುದ್ದಿ ಬರುತ್ತಿದೆ. ರಾಷ್ಟೀಯ ನಾಯಕರ ಮುಂದೆ ನಾಯಕತ್ವ ಬದಲಾವಣೆ ವಿಷಯ ಇಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ ನಿರಾಣಿ ಹೇಳಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.  ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲವೇ ಇಲ್ಲ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ನಾಯಕರಾದ ಪ್ರಹ್ಲಾದ ಜೋಶಿ, ಸಿಟಿ ರವಿ ಅವರೂ ನಾಯಕತ್ವ ಬದಲಾವಣೆ ಇಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.  ಎಂದು ಹೇಳಿದರು.

ಮುರಗೇಶ ನಿರಾಣಿ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ರಾಷ್ಟೀಯ ನಾಯಕರು ಅನುಭವಿಗಳಿದ್ದಾರೆ. ಈ ಬಗ್ಗೆ ಅವರು ನಿರ್ಧರಿಸುತ್ತಾರೆ. ನನಗೆ ಮುಖ್ಯಮಂತ್ರಿ ಹುದ್ದೆ ನೀಡಿದಾಗಲೇ ಅದರ ಬಗ್ಗೆ ಮಾತನಾಡುತ್ತೇನೆ. ನೂರಕ್ಕೆ ನೂರರಷ್ಟು ಯಡಿಯೂರಪ್ಪನವರೇ ಇನ್ನೂ ಎರಡು ವರ್ಷ ಮುಖ್ಯಮಂತ್ರಿ ಆಗಿ ಮುಂದುವರಯಲಿದ್ದಾರೆ. ಮುಂದಿನ ಚುನಾವಣೆಯೂ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯಲಿದೆ ಎಂದರು.

ಜೂ. 15ಕ್ಕೆ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂಬ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆ ವಿಷಯ ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ ಎಂದು ಸಚಿವ ನಿರಾಣಿ ಹೇಳಿದರು.

ಇದನ್ನೂ ಓದಿ:ತಾಯಿ-ಮಕ್ಕಳ ಆಸ್ಪತ್ರೆ ಹಡಿಲು ಬೀಳದಂತೆ ಕ್ರಮವಹಿಸಲಿ : ಪ್ರಮೋದ್‌ ಆಗ್ರಹ

Advertisement

ಬಾಗಲಕೋಟೆಯ 2054 ಮಕ್ಕಳಿಗೆ ಪಾಸಿಟಿವ್: ನಿರಾಣಿ

ಬಾಗಲಕೋಟೆ ಜಿಲ್ಲೆಯ 18 ವರ್ಷದೊಳಗಿನ 2054 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಶುಣ್ಯ ಇದೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವ ಕಾರಣ ಸಾವು ಸಂಭವಿಸಿಲ್ಲ. ಸೋಂಕಿಗೆ ತುತ್ತಾದ ಎಲ್ಲ ಮಕ್ಕಳೂ ಚೇತರಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ವ್ಯಾಕ್ಸಿನೇಷನ್ ಹೆಚ್ಚಿಸಲು ಜಾಗೃತಿ ಮೂಡಿಸಲಾಗುತ್ತಿದೆ. ವೈದ್ಯರ ನಡೆ ಹಳ್ಳಿ ಕಡೆ ಅಭಿಯಾನವನ್ನು ಸರ್ಕಾರ ಆರಂಭಿಸಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಮುರಗೇಶ ನಿರಾಣಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next