ಬೈಲಹೊಂಗಲ: ತಾಲೂಕಿನ ನೇಸರಗಿ ಗ್ರಾಮ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಗುರುವಾರ ಜೋರಾಗಿ ಮಳೆ ಸುರಿಯಿತು.
ನೇಸರಗಿ ಗ್ರಾಮದ ಬಸ್ ನಿಲ್ದಾಣ, ದೇಶನೂರ ರಸ್ತೆ, ಬಜಾರ ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ಇಲ್ಲಿಯ ಬಡಾವಣೆ ಸಹಿತ ವಿವಿಧೆಡೆಗಳಲ್ಲಿ ಮೋರಿ ತುಂಬಿ ನೀರು ರಸ್ತೆಯಲ್ಲಿ ಹರಿದಿದೆ.
ರಸ್ತೆ, ಸಹಿತ ವಿವಿಧೆಡೆಗಳಲ್ಲಿ ಕಾಮಗಾರಿಗೆ ಅಗೆದಿರುವ ಕಡೆಗಳಲ್ಲಿ ರಸ್ತೆ ಕೆಸರಿನ ರಾಡಿಯಾಗಿವೆ. ರಸ್ತೆಗಳಲ್ಲಿ ಗುಂಡಿಗಳಲ್ಲಿ ನೀರು ಆವರಿಸಿದೆ. ಮಣ್ಣಿನ ಹಾದಿಗಳು ಕೆಸರುಮಯವಾಗಿವೆ. ಸಂಚಾರ ಪಡಿಪಾಟಲಾಗಿದೆ.ಬಸ್ ನಿಲ್ದಾಣ ರಸ್ತೆ ಅಗೆದು ಸರಿಯಾಗಿ ದುರಸ್ತಿ ಮಾಡಿಲ್ಲ. ಗುಂಡಿಗಳಾಗಿದ್ದು, ಓಡಾಟಕ್ಕೆ ತೊಂದರೆಯಾಗಿದೆ.
‘ಗುಂಡಿಗಳಿಗೆ ಎರಡು ಬಾರಿ ಬರೀ ಮಣ್ಣು ಹಾಕಿದ್ದಾರೆ ಅಷ್ಟೆ. ಡಾಂಬರು ಹಾಕಿಲ್ಲ. ಪೈಪ್‌ಲೈನ್ ಸಲುವಾಗಿ ಅಳವಡಿಕೆ ಅಗೆದ ನಂತರ ಸರಿಯಾಗಿ ದುರಸ್ತಿ ಮಾಡಿಲ್ಲ. ಸಂಚಾರಕ್ಕೆ ತೊಡಕಾಗಿದೆ’ ಎಂದು ಗ್ರಾಮಸ್ಥರು ಸಮಸ್ಯೆ ತೋಡಿಕೊಂಡರು.
ಇದನ್ನೂ ಓದಿ:ಸಾವಯವ ಕೃಷಿಯ ಕಮಾಲ್- ಭತ್ತ ಮತ್ತು ಮಲ್ಲಿಗೆ ಕೃಷಿಯಲ್ಲಿ ಯಶಸ್ವಿ ಕಂಡ ರೈತ
ಹಲವರ ಅಂಗಡಿಗಳಿಗೆ, ಮನೆಯೊಳಗೆ ನೀರು ಹೊಕ್ಕು ವಸ್ತುಗಳು ಹಾಳಾಗಿವೆ. ಮನೆಯ, ಅಂಗಡಿಯಲ್ಲಿ ನೀರು ನಿಂತು ತೊಂದರೆಯಾಗಿದೆ.
‘ಈಗ ಸೋಯಾಬಿನ್ ತೆಗೆದಿದ್ದು ಅದನ್ನು ಆರಿಸಲು ಹೊರಗಡೆ ಇಟ್ಟಾಗ ಮಳೆ ಶುರುವಾಗಿದೆ. ಇದರಿಂದ ರೈತರು ಬೆಳೆದ ಸೊಯಾಬಿನ್ ಸಹ ಮಳೆಯಲ್ಲಿ ನೆನೆದಿದೆ ಎಂದು ಪತ್ರಿಕೆ ಮುಂದೆ ಗೋಳು ತೋಡಿಕೊಂಡರು.