Advertisement
ರೈತರಿಗೆ ಮರಣ ಶಾಸನ ಬರೆಯಲು ಕೇಂದ್ರ ಸರಕಾರ ಸುಗ್ರೀವಾಜ್ಞೆ ಮುಖಾಂತರ ಎಪಿಎಂಸಿ ಕಾಯ್ದೆ ತಿದ್ದುಪಡಿ,ವಿದ್ಯುತ್ ಖಾಸಗೀಕರಣ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಳೆದ 10 ತಿಂಗಳಿನಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ದೆಹಲಿಯಲ್ಲಿ ನಡೆದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
Related Articles
Advertisement
ಜಿಲ್ಲಾ ಪಂಚಾಯಿತಿ ಸದಸ್ಯ ನಿಂಗಪ್ಪ ಅರಕೇರಿ, ಈ ಹೋರಾಟ ಕೇವಲ ರೈತರಿಗೆ ಸಂಬಂಧಿಸಿದ್ದಲ್ಲ ಬದಲಾಗಿ ಇಡೀ ನಮ್ಮ ದೇಶದ ನಾಗರೀಕರಿಗೆ ಸಂಬಂಧಿಸಿದೆ, ಸುಗ್ರೀವಾಜ್ಞೆ ಮೂಲಕ ರೈತ ವಿರೋಧಿ ಕಾಯ್ದೆ ಜಾರಿಗೊಳಿಸಿರುವುದು ಸರಿಯಲ್ಲ ಎಂದರು.
ಪ್ರತಿಭಟನೆ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸದಾಶಿವಯ್ಯ ತೆಗ್ಗಿನಮಠ ಶಾಸ್ತ್ರಿಗಳು ಮಾತನಾಡಿ, ಮುಂಬರುವ ದಿನಗಳಲ್ಲಿ ರೈತಕುಲ ಉಳಿಯಬೇಕಾದರೆ ಸರಕಾರಗಳು ರೈತರ ಪರವಾಗಿ ಯೋಜನೆಗಳನ್ನು ರೂಪಿಸುವ ಮುಖಾಂತರ ಅನ್ನದಾತರಿಗೆ ಅನುಕೂಲ ಮಾಡಿಕೊಡಬೇಕು.
ಕೃಷಿತೋ ನಾಸ್ತಿ ದುರ್ಭಿಕ್ಷಃ ಎಂಬಂತೆ ರೈತರು ಬೆಳೆ ಬೆಳೆಯದೆ ಹೋದರೆ ಮುಂಬರುವ ದಿನಗಳಲ್ಲಿ ಆಹಾರದ ಹಾಹಾಕಾರ ಎಳಲಿದೆ,ಆದ್ದರಿಂದ ಸರಕಾರಗಳು ಅನ್ನದಾತರ ಅಳಲನ್ನು ಆಲಿಸಬೇಕು ಎಂದು ಸರಕಾರಕ್ಕೆ ಸಂದೇಶ ರವಾನಿಸಿದ್ದಾರೆ. ಇದೇ ವೇಳೆ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ರೈತ ಸಂಘದ ಜಿಲ್ಲಾ ಮಾದ್ಯಮ ಕಾರ್ಯದರ್ಶಿ ಈಶ್ವರ್ ಶಿಲ್ಲೇದಾರ, ತಾಲೂಕು ಪ್ರಧಾನ ಕಾರ್ಯದರ್ಶಿ ಮಡಿವಾಳಪ್ಪ ಹಿರೆಹೊಳಿ,ರೈತ ಮುಖಂಡರಾದ ಬಾಳಪ್ಪ ಚಳಕೊಪ್ಪ,ಬಸವರಾಜ್ ಖಾನಗೌಡರ್, ಈರಪ್ಪ ಎತ್ತಿನಮನಿ,ಈರಪ್ಪ ತೋಟಗಿ, ಬಸು ಕುರಗುಂದ,ರೈತ ಮಹಿಳಾ ಮುಖಂಡರಾದ ಶ್ರೀದೇವಿ ನಾಯ್ಕರ್,ನಾಗಮ್ಮ ಪೂಜೇರಿ,ಸುರೇಖಾ ಖಾನೋಜಿ, ಮಹಾನಂದ ಹಡಪದ ಪಾಲ್ಗೊಂಡಿದ್ದರು.