ಚಿಕ್ಕೋಡಿ: ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ಬಿಡಿಸಿಸಿ ಬ್ಯಾಂಕ್ ಮೂಲಕ ರೈತರಿಗೆ ಸಮರ್ಪಕ ಮುಟ್ಟಿಸುವ ಕೆಲಸ ಮಾಡಲಾಗುತ್ತದೆ ಎಂದು ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ತಾಲೂಕಿನ ಮುಗಳಿ ಗ್ರಾಮದ ಜೈ ಹನುಮಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪತ್ತಿನ ಹಾಗೂ ಸಾಲ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರಕಾರ ಸಹಕಾರಿ ಸಂಸ್ಥೆಗಳು ಬೆಳೆಯಲು ಮತ್ತು ರೈತರಿಗೆ ಅನುಕೂಲವಾಗಲು ಸಾಲ ಮನ್ನಾ ಮಾಡಿದೆ. ಆದರೂ ರೈತರು ಹೆಚ್ಚು ಸಾಲ ಕೇಳುತ್ತಿರುವುದು ಯಾವ ನ್ಯಾಯ. ಸಾಲ ಮನ್ನಾ ಆದ ಹಣ ಎಲ್ಲಿ ಹೋಗಿದೆ, ಸಹಕಾರಿ ಕ್ಷೇತ್ರಕ್ಕೆ 115 ವರ್ಷ ಆಗಿದೆ. ರೈತರಿಗೆ ಅನುಕೂಲವಾಗಲಿ ಎಂದು ಸಹಕಾರಿ ಸಂಸ್ಥೆಗಳನ್ನು ಹುಟ್ಟು ಹಾಕಿದೆ. ಜಿಲ್ಲೆಯಲ್ಲಿ 3,560 ಕೋಟಿ ರೂ. ಸಾಲ ಮನ್ನಾ ಆಗಿರುವ ಹಣ ಎಲ್ಲಿ ಹೋಗಿದೆ. ಅದರ ಸಮರ್ಪಕ ಬಳಕೆ ಎಲ್ಲಿ ಆಗಿದೆ ಎಂದು ಪ್ರಶ್ನಿಸಿದರು.
ಮುಗಳಿ ಗ್ರಾಮದ 240 ಸದಸ್ಯರ ಪೈಕಿ 170 ರೈತ ಸದಸ್ಯರಿಗೆ 1.48 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಬಡ್ಡಿ ಭಾಗದ ರೈತರು ಸಂಕಷ್ಟದಲ್ಲಿ ಇದ್ದಾರೆಂದು ಮನಗಂಡು ಒಂದು ಎಕರೆ ಪ್ರದೇಶಕ್ಕೆ 40 ರೂ ಸಾಲ ನೀಡುವ ಯೋಜನೆ ಜಾರಿ ಇದೆ. ಉಳಿದ ಕಡೆಗಳಲ್ಲಿ 35 ಸಾವಿರ ರೂ. ಇದೆ ಎಂದರು.
ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ಗ್ರಾಮದಲ್ಲಿ ಕೃಷಿ ಪತ್ತಿನ ಸಂಘ ಇದ್ದರೆ ರೈತರು ಆರ್ಥಿಕವಾಗಿ ಸದೃಡವಾಗುತ್ತಾರೆ. ಕರೋಶಿ, ಜೈನಾಪೂರ, ಮುಗಳಿ, ಹತ್ತರವಾಟ ಮುಂತಾದ ಕಡೆಗಳಲ್ಲಿ ರಮೇಶ ಕತ್ತಿಯವರು ಸೊಸೈಟಿ ಮಂಜೂರು ಮಾಡಿದ್ದಾರೆ. ಬಡ್ಡಿ ರಹಿತ ಸಾಲ ಕೊಡುವುದು ರೈತರಿಗೆ ಅನುಕೂಲವಾಗಿದೆ ಎಂದರು.
ರಾಜು ಹರಗನ್ನವರ ಮಾತನಾಡಿ, 1.48 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಇದು ರೈತರಿಗೆ ಅನುಕೂಲವಾಗಲಿದೆ ಎಂದರು.
ದಿವ್ಯ ಸಾನಿದ್ಯ ವಹಿಸಿದ್ದ ನಿಡಸೊಶಿ ಪಂಚಮಶಿವಲಿಂಗೇಶ್ವರ ಸ್ವಾಮಿಜಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಜು ಬಡಿಗೇರ, ರಾಜು ಹರಗನ್ನವರ, ಹಿರಾ ಶುಗರ ನಿರ್ದೇಶಕ ಸುರೇಶ ಬೆಲ್ಲದ, ಬಸವರಾಜ ಕಡಟ್ಟಿ, ರಮೇಶ ಪಾಟೀಲ, ರಾವಸಾಹೇಬ ಪಾಟೀಲ, ವಿಲಾಸ ಪೊಲೀಸ್ ಪಾಟೀಲ, ಮಲ್ಲಗೌಡ ಪಾಟೀಲ, ಬಾಬಾಜಿ ಪಾಟೀಲ, ಜೈ ಹನುಮಾನ ಪಿಕೆಪಿಎಸ್ ಅಧ್ಯಕ್ಷ ಈರಗೌಡ ಪಾಟೀಲ, ರಾಯಗೌಡ ಪಾಟೀಲ, ಉಮೇಶ ಬಡಿಗೇರ, ಸಂಜು ಬಡಿಗೇರ, ವಿಶ್ವನಾಥ ಕಾಮಗೌಡ, ಗಣಪತಿ ಪೊತದಾರ, ತಮ್ಮಣ್ಣಾ ಬಂಬಲವಾಡೆ, ಶಂಕರ ಶಿಂಧೆ, ಡಿಸಿಸಿ ಬ್ಯಾಂಕಿನ ತಾಲೂಕು ನಿಯಂತ್ರಣಾಧಿಕಾರಿ ವ್ಹಿ.ಎಸ್. ಮಾಳಿಂಗೆ, ಬಿ.ಬಿ.ಮೆಕ್ಕಳಕ್ಕಿ, ಬಸವರಾಜ ಉತ್ತರಳ್ಳಿ, ಬಸವರಾಜ ಮಹಾಜನ್ ಮುಂತಾದವರು ಇದ್ದರು.