Advertisement

ಸಿಎಂ ಪ್ರಗತಿ ಪರಿಶೀಲನೆ ಪೂರ್ವಭಾವಿ ಸಭೆ

08:34 PM May 07, 2022 | Team Udayavani |

ಬೆಳಗಾವಿ: ಬಜೆಟ್‌ ಘೋಷಣೆಗಳು ಹಾಗೂಅನುಷ್ಠಾನ ಕುರಿತು ಮುಖ್ಯಮಂತ್ರಿಗಳುಪ್ರಗತಿ ಪರಿಶೀಲಿಸಲಿದ್ದು ಈ ಹಿನ್ನಲೆಯಲ್ಲಿಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಲಾಗಿರುವಪ್ರತಿಯೊಂದು ಇಲಾಖೆಯ ಅಭಿವೃದ್ಧಿಕಾರ್ಯಕ್ರಮಗಳ ಕುರಿತು ಸಮಗ್ರವಾಗಿಪರಿಶೀಲಿಸಿ ಕ್ರಿಯಾಯೋಜನೆ ಅನುಮೋದನೆಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಶುಕ್ರವಾರ ನಡೆದ ವಿವಿಧ ಇಲಾಖೆಯಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಬಜೆಟ್‌ನಲ್ಲಿಘೋಷಿಸಿರುವಂತೆ ಜಾಂಬೋಟಿ ಜೇನುಬ್ರಾÂಂಡ್‌ ನಿರ್ಮಿಸಲು ಕೈಗೊಳ್ಳಬೇಕಾದಕ್ರಮಗಳ ಕುರಿತು ಪ್ರಸ್ತಾವನೆ ಸಲ್ಲಿಸುವಂತೆತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.ಒಂದು ಜಿಲ್ಲೆ ಒಂದು ಉತ್ಪನ್ನಯೋಜನೆಯಡಿ ಬೆಲ್ಲ ತಯಾರಿಕಾಘಟಕಗಳನ್ನು ನಿರ್ಮಿಸಲಾಗುತ್ತಿದ್ದು,ಈಗಾಗಲೇ ಪ್ರಚಲಿತದಲ್ಲಿರುವ 247ಘಟಕಗಳಿಗೆ ಒಂದು ಜಿಲ್ಲೆ ಒಂದು ಉತ್ಪನ್ನಯೋಜನೆಯಡಿ ನೆರವು ಒದಗಿಸುವಬಗ್ಗೆ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬಜೆಟ್‌ನಲ್ಲಿ ಅಥಣಿಗೆ ಮಂಜೂರಾಗಿರುವಕೃಷಿ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆಮಾಹಿತಿ ಪಡೆದುಕೊಂಡ ಅವರು,ಜಮೀನು ಲಭ್ಯತೆ ಮತ್ತಿತರ ವಿಷಯಗಳಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಬಾರಿಜಿಲ್ಲೆಯ ಬಿತ್ತನೆ ಪ್ರಮಾಣ ಶೇ.100 ಕ್ಕಿಂತಹೆಚ್ಚಾಗಬೇಕು. ಜಿಲ್ಲೆಗೆ ಮಂಜೂರಾಗಿರುವಗೋಶಾಲೆಗಳ ನಿರ್ಮಾಣಕ್ಕೆ ಜಮೀನುಗುರುತಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next