Advertisement

Belagavi: ಬುದ್ಧಿಮಾಂದ್ಯ ಯುವತಿ ಮೇಲೆ ಅನ್ಯ ಕೋಮಿನ ಯುವಕನಿಂದ‌ ಅತ್ಯಾಚಾರಕ್ಕೆ‌ ಯತ್ನ

08:25 AM Jul 18, 2024 | Team Udayavani |

ಬೆಳಗಾವಿ: ತಾಲೂಕಿನ ಕಡೋಲಿ ಗ್ರಾಮದಲ್ಲಿ ಬುದ್ಧಿಮಾಂದ್ಯ ಯುವತಿ ಮೇಲೆ ಅನ್ಯ ಕೋಮಿನ ಯುವಕನೋರ್ವ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿ ಬಿದ್ದದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Advertisement

ತಾಲೂಕಿನ‌ ಕಡೋಲಿ ಗ್ರಾಮದ ಆಜಾದ್ ಗಲ್ಲಿಯ ಸಮೀರ ಅಬ್ಬಾಸ್‌ ಧಾಮಣೆಕರ ಎಂಬ ಯುವಕ ಬುದ್ದಿಮಾಂದ್ಯ ಯುವತಿಯನ್ನು ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಬುಧವಾರ ಗ್ರಾಮದಲ್ಲಿ ಮೊಹರಂ ಹಬ್ಬ ಆಚರಣೆ ವೇಳೆ ಈ ಯುವಕ ಬುದ್ಧಿಮಾಂದ್ಯತೆಯ ಯುವತಿಯನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದು,  ಈತನನ್ನು ಗ್ರಾಮಸ್ಥರು ಹಿಡಿದು ಕಾಕತಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನ್ಯಕೊಮಿನ ಯುವಕ ಮತ್ತೊಂದು ಕೊಮಿನ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರಿಂದ ಕಡೋಲಿ  ಗ್ರಾಮಸ್ಥರು ಠಾಣೆಗೆ ಮುಂದೆ ಜಮಾಯಿಸಿದ್ದರು. ಎಲ್ಲರನ್ನೂ ಪೊಲೀಸರು ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಡಿಸಿಪಿಗಳಾದ ರೋಹನ್‌ ಜಗದೀಶ ಹಾಗೂ ಪಿ.ವಿ.‌ಸ್ನೇಹ ಠಾಣೆಗೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಗ್ರಾಮದಲ್ಲಿ ಸಭೆ ನಡೆಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next