Advertisement
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ರವಿವಾರ ನಡೆದ ವಿವಿಧ ಗ್ರಾಮ ಪಂಚಾಯತಿ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿ, ಏನೇ ಕೆಲಸ ಇದ್ದರೂ ನೇರವಾಗಿ ಬಂದು ನಮ್ಮನ್ನು ಭೇಟಿಯಾಗಬೇಕು. ಗೋಕಾಕ ತಾಲೂಕು ಈಗಾಗಲೇ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದೆ. ಇನ್ನು ಜಿಲ್ಲೆಯ ಅನೇಕ ಕ್ಷೇತ್ರಗಳತ್ತ ಗಮನಹರಿಸಿ ಅಭಿವೃದ್ಧಿ ಮಾಡುವುದೇ ನಮ್ಮ ಸಂಕಲ್ಪವಾಗಿದೆ ಎಂದು ಹೇಳಿದರು.
Related Articles
Advertisement
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಇಲ್ಲ. ನಗರ ಪ್ರದೇಶದಲ್ಲಿರುವ ಖಾಸಗಿ ಶಾಲೆಗಳಿಗೆ ಲಕ್ಷಾಂತರ ರೂ. ಶುಲ್ಕ ತುಂಬಿ ಮಕ್ಕಳನ್ನು ಅಂಥ ಶಾಲೆಗಳಿಗೆ ಸೇರಿಸುವುದು ಕಷ್ಟಕರವಾಗಿದೆ. ಹೀಗಾಗಿ ಲಖನ್ ಜಾರಕಿಹೊಳಿ ಅವರು ಆಯ್ಕೆಯಾದ ಬಳಿಕ ಹಿಂಡಲಗಾದ ಒಂದು ಎಕರೆ ಜಾಗದಲ್ಲಿ ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕೆಎಂಎಫ್ ನಿರ್ದೇಶಕ ಎಸ್. ಎಸ್. ಮುಗಳಿ ಮಾತನಾಡಿ, ವಿರೋಧಿಗಳ ಬಣ್ಣದ ಮಾತುಗಳಿಗೆ ಯಾರೂ ಮರುಳಾಗಬಾರದು. ಆಸೆ-ಆಮಿಷಗಳಿಗೆ ಯಾರೂ ಬಲಿಯಾಗಬಾರದು. ನಿಮ್ಮ ಬೆನ್ನಿಗೆ ನಿಂತು ಕೆಲಸ ಮಾಡುತ್ತಿರುವ ಜಾರಕಿಹೊಳಿ ಕುಟುಂಬಕ್ಕೆ ಸಹಾಯ ಮಾಡಬೇಕು. ವಿಧಾನ ಪರಿಷತ್‌ಗೆ ಲಖನ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಿ ಕಳುಹಿಸಬೇಕಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಟಿ.ಆರ್. ಕಾಗಲ್, ಮಹಾನಗರ ಪಾಲಿಕೆ ಸದಸ್ಯೆ ವೈಶಾಲಿ ಭಾತಕಾಂಡೆ, ಪುಂಡಲೀಕ ಪಾವಸೆ, ಅಪ್ಪಾ ಜಾಧವ, ಎಂ.ಆರ್. ಪಾಟೀಲ, ಕಲ್ಲಪ್ಪ ಗಿರೆನ್ನವರ, ಪ್ರಥ್ವಿ ಸಿಂಗ್ ಫೌಂಡೇಶನ್ ಸದಸ್ಯ ಜಸವೀರ ಸಿಂಗ್ ಹೀಗೆ ಹಿಂಡಲಗಾ, ಅಂಬೇವಾಡಿ, ಉಚಗಾಂವ, ಕುದ್ರೇಮನಿ, ಬೆಳಗುಂದಿ, ಬೆನಕನಹಳ್ಳುಇ, ಕಂಗ್ರಾಳಿ ಕೆಎಚ್, ಕಂಗ್ರಾಳಿ ಬಿಕೆ, ಧಾಮಣೆ, ನಂದಿಹಳ್ಳಿ, ದೇಸೂರ, ಯಳ್ಳೂರು, ಕಿಣಯೇ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.