Advertisement

Belagavi: ಗೋವಾ ರಾಜ್ಯದ ಅಕ್ರಮ ಮದ್ಯ ಸಾಗಾಟ, ಮಾರಾಟ; ವ್ಯಕ್ತಿ ಬಂಧನ

02:50 PM Mar 30, 2024 | Team Udayavani |

ಬೆಳಗಾವಿ: ನಗರದ ಹಿಂಡಲಗಾ ಲಕ್ಷ್ಮೀ ನಗರದ  ಸಾರ್ವಜನಿಕ ಸ್ಥಳವೊಂದರಲ್ಲಿ ಪಕ್ಕದ ಗೋವಾ ರಾಜ್ಯದ ಅಕ್ರಮ ಮದ್ಯ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಡಿಸಿಪಿ ಸ್ನೇಹಾ ಪಿ. ವಿ ಹಾಗೂ ಅವರ ತಂಡ ಯಶಸ್ವಿಯಾಗಿದೆ.

Advertisement

ಹಿಂಡಲಗಿ ಗ್ರಾಮದ ರಾಜೇಶ ಕೇಶವ ನಾಯ್ಕ ಉರ್ಪ ಹಿಂಡಲಗಿ ರಾಜು (40)ನನ್ನು ಪೊಲೀಸರು ಕೆಡ್ಡಾಗೆ ಕೆಡವಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಡಿಸಿಪಿ ಸ್ನೇಹಾ ಪಿ. ವಿ ಹಾಗೂ ಸಿಸಿಬಿ ಪಿಐ ಸಿಬ್ಬಂದಿ ಅವರ ತಂಡ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಸರಾಯಿ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಸರಾಯಿಯನ್ನು ಪಕ್ಕದ ಗೋವಾ ರಾಜ್ಯದ ಹಾಗೂ ಮಿಲಿಟರಿ ಕ್ಯಾಂಟೀನ್ ಮದ್ಯ ಎಂದು ಹಗಲಿರಳು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಹಿಂಡಲಗಿ ರಾಜು ಎಂಬವನಿಂದ ವಿವಿಧ ಕಂಪನಿಯ ಗೋವಾ ರಾಜ್ಯದ ಸುಮಾರು 187 ಲೀಟರ್ ಅಂದಾಜು 9,09,750 ಬೆಲೆಯ ಅಕ್ರಮ ಸರಾಯಿ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಾರು, 1.5 ಲಕ್ಷ ನಗದು ಸೇರಿದಂತೆ ಒಟ್ಟು ರೂ 10,60,100 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Advertisement

ಈ ದಾಳಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಸಿಸಿಬಿ ಘಟಕದ ಪಿಐ ಸಿಬ್ಬಂದಿ ಅವರ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next