Advertisement

Belagavi: ವಿದ್ಯಾರ್ಥಿನಿಯಿಂದ ಹನಿಟ್ರ್ಯಾಪ್; ಯುವಕನಿಂದ ಹಣ ದೋಚಿದ್ದ ಗ್ಯಾಂಗ್‌ ಬಂಧನ

10:11 PM Sep 25, 2024 | Team Udayavani |

ಬೆಳಗಾವಿ: ನಗರದಲ್ಲಿ ಹನಿಟ್ರ್ಯಾಪ್ ಮಾಡಿ ಹಣ ದೋಚಿದ್ದ ಗ್ಯಾಂಗ್ ಅನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು 10 ಲಕ್ಷ ರೂ. ನಗದು  ಹಾಗೂ ಮೂರು ದ್ವಿಚಕ್ರ ವಾಹನಗಳ ವಶಪಡಿಸಿಕೊಂಡಿದ್ದಾರೆ.

Advertisement

ಶಹಾಪುರ ಬಸವಣ ಗಲ್ಲಿಯ ವಿದ್ಯಾರ್ಥಿನಿ ದಿವ್ಯಾ (23), ಪ್ರಶಾಂತ ಉರೂಫ್‌ ಸ್ಪರ್ಶ ಕಲ್ಲಪ್ಪ ಕೋಲಕಾರ(25), ಕಣಬರ್ಗಿ‌ ಜ್ಯೋತಿರ್ಲಿಂಗ ಗಲ್ಲಿಯ ಕುಮಾರ ಉರೂಫ್  ಡಾಲಿ ಅರ್ಜುನ ಗೋಕರಕ್ಕನವರ(29) ಕಣಬರ್ಗಿ ವಾಲ್ಮೀಕಿ ಗಲ್ಲಿಯ ರಾಜು ಸಿದ್ರಾಯಿ ಜಡಗಿ(29) ಎಂಬಾತರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಘಟನೆ ಹಿನ್ನೆಲೆ:
ಟಿಳಕವಾಡಿಯ ವಿನಾಯಕ‌‌ ಸುರೇಶ ಕುರಡೇಕರ ಎಂಬ ಯುವಕ ವಿದ್ಯಾರ್ಥಿನಿಯೊಂದಿಗೆ ಭುಜ ಮುಟ್ಟಿದ್ದ ವಿಡಿಯೋ ಇಟ್ಟುಕೊಂಡು ಹನಿಟ್ರ್ಯಾಪ್ ಮಾಡಿದ ವಿದ್ಯಾರ್ಥಿನಿ ಸೇರಿ ನಾಲ್ವರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅಪಹರಣ ಮಾಡಿ 25 ಲಕ್ಷ ರೂ.‌ ಬೇಡಿಕೆ ಇಟ್ಟಿದ್ದಾರೆ. 15 ಲಕ್ಷ ರೂ. ಹಣ ಪಡೆದು ಇನ್ನೂ 10 ಲಕ್ಷ ರೂ. ಕೊಡುವಂತೆ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಶಹಾಪುರ ಠಾಣೆಯಲ್ಲಿ ಯುವಕ‌ ದೂರು ನೀಡಿದ್ದಾರೆ.‌

ಮಾರ್ಕೆಟ್ ಎಸಿಪಿ ಸಂತೋಷ ಸತ್ಯನಾಯಿಕ ಮಾರ್ಗದರ್ಶನದಲ್ಲಿ ಶಹಾಪೂರ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್‌ ಎಸ್.ಎಸ್. ಸಿಮಾನಿ ನೇತೃತ್ವದಲ್ಲಿ ಎಎಸ್‌ಐಗಳಾದ ಬಿ. ಎ. ಚೌಗಲಾ, ಆರ್.ಐ. ಸನದಿ, ನಾಗರಾಜ ಓಸಪ್ಪಗೋಳ, ಶಿವಶಂಕರ ಗುಡದೈಗೋಳ, ಸಿಬ್ಬಂದಿಗಳಾದ ಶ್ರೀಧರ ತಳವಾರ, ಜಗದೀಶ ಹಾದಿಮನಿ, ಸಂದೀಪ ಬಾಗಡಿ, ಸಿದ್ದರಾಮೇಶ್ವರ ಮುಗಳಖೋಡ, ವಿಜಯ ಕಮತೆ, ಕಾವೇರಿ ಕಾಂಬಳೆ, ಪ್ರತಿಭಾ ಕಾಂಬಳೆ ಕಾರ್ಯಾಚರಣೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.