ಬೆಳಗಾವಿ: ಜೈಲಿನಲ್ಲಿ ಕೊಲೆ ಆರೋಪಿ ನಟ ದರ್ಶನಗೆ (Darshan) ರಾಜ್ಯಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕೊಹೊಳಿ (Satish Jarkiholi) ಅವರು, ಎಲ್ಲದಕ್ಕೂ ಉತ್ತರ ಕೊಡಲು ಆಗುವುದಿಲ್ಲ, ಅದು ಸಾರ್ವಜನಿಕ ಹಿತಾಸಕ್ತಿ ವಿಷಯವೇ ಅಲ್ಲ ಎಂದು ಅಚ್ಛರಿಯ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಸೋಮವಾರ (ಆ.26) ಮಾತನಾಡಿದ ಅವರು, ಅದು ಆ ಇಲಾಖೆಗೆ ಸಂಬಂಧಿಸಿದ ವಿಷಯ. ರಾಜ್ಯದ ಜೊತೆಗೆ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಇದು ಸಾರ್ವಜನಿಕ ಚರ್ಚಿತ ವಿಷಯವೇ ಅಲ್ಲ, ಇಲಾಖೆಯವರೇ ಪ್ರತಿಕ್ರಿಯೆ ಕೊಡಬೇಕು ಎಂದರು.
ಇದಕ್ಕೆ ಕ್ರಮ ವಹಿಸಲು ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಿದ್ದಾರೆ. ಅವರೇ ಅದಕ್ಕೆ ಸ್ಪಷ್ಟೀಕರಣ ಕೊಟ್ಟರೆ ಒಳ್ಳೆಯದು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಬಗ್ಗೆ ಹೇಳಿದರೆ ಮಹತ್ವ ಇರುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಬೆನ್ನಿಗೆ ಜಾರಕೊಹೊಳಿ ಬ್ರದರ್ಸ್ ನಿಂತಿದ್ದಾರಾ, ಅದಕ್ಕಾಗಿಯೇ ಗೋಕಾಕಕ್ಕೆ ಬೆಳಗಾವಿಗೆ ಬರುತ್ತಿದ್ದಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ಅದಕ್ಕೂ ಇದಕ್ಕೂ ಏನು ಸಂಬಂಧವಿಲ್ಲ, ಬಹಳ ದಿನಗಳಿಂದ ಬರಬೇಕಿತ್ತು ಬರ್ತಿದ್ದಾರಷ್ಟೇ ಎಂದರು.
ಕಾಂಗ್ರೆಸ್ ಶಾಸಕರಿಗೆ 100 ಕೋಟಿ ರೂ. ಹಣದ ಆಮಿಷ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ, ಅದು ಸ್ವಾಭಾವಿಕ ಅದು ಇದ್ದೇ ಇದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲೇ ಸಿಎಂ ಕಟ್ಟಿಹಾಕುತ್ತಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಈಗ ಕ್ಲಿಯರ್ ಆಗಿದೆ ಎಲ್ಲರೂ ಸಿಎಂ ಅವರ ಪರವಾಗಿಯೇ ಇದ್ದಾರೆ ಎಂದರು.
ಕಾಂಗ್ರೆಸ್ ಶಾಸಕರಿಗೆ ಆಫರ್ ವಿಚಾರ, ಅವರು ಮಾಡಿದ್ದಾರೆ, ಅವರಿಗೆ ಯಾರು ಕಾಂಟ್ಯಾಕ್ಟ್ ಮಾಡಿದ್ದಾರೆ, ನನಗೆ ಗೊತ್ತಿಲ್ಲ. ಅಪರೇಷನ ಕಮಲ ವಿಚಾರ ಅದು ಮುಗಿದು ಹೋದ ಅಧ್ಯಾಯ ಎಂದ ಸತೀಶ ಜಾರಕಿಹೊಳಿ ಹೇಳಿದರು.