Advertisement

ಬೆಳಗಾವಿ : ಸ್ನೇಹಿತರ ಜೊತೆ ಹೋದ ಯುವಕನ ಬರ್ಬರ ಹತ್ಯೆ: ಮನೆಯ ಪಕ್ಕದಲ್ಲೇ ಪತ್ತೆಯಾದ ಮೃತದೇಹ

11:16 AM Dec 17, 2020 | sudhir |

ಬೆಳಗಾವಿ: ಮನೆಯಿಂದ ಸ್ನೇಹಿತರ ಜೊತೆ ಹೊರಗೆ ಹೋದ ಯುವಕ ಮನೆಯ ಪಕ್ಕದಲ್ಲೇ ಬರ್ಬರವಾಗಿ ಕೊಲೆಯಾಗಿರುವ ಘಟನೆ ಇಲ್ಲಿಯ ಜುನೆ ಬೆಳಗಾವಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

Advertisement

ಜುನೆ ಬೆಳಗಾವಿಯ ಅಂಬೇಡ್ಕರ್ ಗಲ್ಲಿಯ ಜಯಪಾಲ್ ಮಸನು ಘರಾನೆ(35) ಎಂಬ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮನೆಯಿಂದ ಸುಮಾರು 50 ಅಡಿ ಅಂತರದಲ್ಲಿಯೇ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಕ್ಕದ ಮನೆಯವರ ಮದುವೆ ಸಮಾರಂಭಕ್ಕೆ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೋಗಿ ರಾತ್ರಿ 12 ಗಂಟೆಗೆ ಮನೆಗೆ ವಾಪಸ್ಸು ಬಂದಿದ್ದರು. ನಂತರ ಸ್ನೇಹಿತನೊಂದಿಗೆ ಹೋದವ ಕೊಲೆಯಾಗಿ ಪತ್ತೆ ಆಗಿದ್ದಾನೆ.

ಇದನ್ನೂ ಓದಿ:ಉತ್ತರಪ್ರದೇಶ: ಹಿಂದು ಯುವತಿ ಅಪಹರಣ, ಬಲವಂತದ ಮತಾಂತರ; ಆರೋಪಿ ಬಂಧನ

ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ, ಶಹಾಪುರ ಇನ್ಸಪೆಕ್ಟರ್ ರಾಘವೇಂದ್ರ ಹವಾಲ್ದಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಲೆ ಮಾಡಿದವರ ಶೋಧ ಕಾರ್ಯ ಮುಂದುವರೆದಿದೆ.
ಶಹಾಪುರ ಠಾಣಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next