ಬೆಳಗಾವಿ: ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿ ನಡೆದಿದ್ದು, ಈವರೆಗೆ ಒಟ್ಟು 46 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ನಿಪ್ಪಾಣಿ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಶಿಕಲಾ ಜೊಲ್ಲೆ, ಜೆಡಿಎಸ್ ದಿಂದ ರಾಜಾರಾಮ ಪವಾರ, ಚಿಕ್ಕೋಡಿ ಸದಲಗಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಮೋಹನ ಮೋಟನ್ನವರ, ರಿಪಬ್ಲಿಕ್ ಮೂಮೆಂಟ್ ಪಾರ್ಟಿಯಿಂದ ಅಪ್ಪಾಸಾಹೇಬ ಕುರಣೆ, ಕಾಂಗ್ರೆಸ್ ನಿಂದ ಗಣೇಶ ಹುಕ್ಕೇರಿ, ಅಥಣಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ನಾಮಪತ್ರ ಸಲ್ಲಿಸಿದರು.
ಕಾಗವಾಡ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಭರಮಗೌಡ(ರಾಜು)ಕಾಗೆ, ಪಕ್ಷೇತರರಾಗಿ ಸದಾನಂದ ಮಗದುಮ್ಮ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ವಿನೋದ ಸುಖದೇವ ನಾಂಗರೆ, ಪಕ್ಷೇತರ ಸತ್ಯಪ್ಪ ಕಾಲೇಳಿ, ಕುಡಚಿ ಕ್ಷೇತ್ರದಿಂದ ಕಾಂಗ್ರೆಸ್ ನ ಮಹೇಂದ್ರ ತಮ್ಮನ್ನವರ, ಅರಭಾಂವಿ ಕ್ಷೇತ್ರದಿಂದ ಕಾಂಗ್ರೆಸ್ ನ ಅರವಿಂದ ದಳವಾಯಿ, ಗೋಕಾಕ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಸುರೇಶ ಮರಲಿಂಗನ್ನವರ, ಬಹುಜನ ಸಮಾಜ ಪಾರ್ಟಿಯಿಂದ ಲೋಹಿತ ಬಾಗನ್ನವರ, ಕಾಂಗ್ರೆಸ್ ದಿಂದ ಮಹಾಂತೇಶ ಕಡಾಡಿ ನಾಮಪತ್ರ ಸಲ್ಲಿಸಿದರು.
ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಬಿಜೆಪಿಯಿಂದ ಡಾ. ರವಿ ಪಾಟೀಲ, ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿಯಿಂದ ಬಸವರಾಜ ಜರಳಿ, ದಕ್ಷಿಣ ಕ್ಷೇತ್ರದಿಂದ ಬಿಜೆಪಿಯಿಂದ ಅಭಯಕುಮಾರ ಪಾಟೀಲ, ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಶಕುಂತಲಾ ಈಳಿಗೇರ, ಬಿಜೆಪಿಯಿಂದ ನಾಗೇಶ ಮನ್ನೋಳಕರ, ಖಾನಾಪುರ ಕ್ಷೇತ್ರದಲ್ಲಿ ಪಕ್ಷೇತರರಾಗಿ ರುದ್ರಗೌಡ ಪಾಟೀಲ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ರಾಜಕುಮಾರ ಪೂಜಾರಿ, ಶಿವಸೇನೆಯಿಂದ ಕೃಷ್ಣಾಜಿ ಪಾಟೀಲ, ಪಕ್ಷೇತರ ಮುರುಳೀಧರ ಪಾಟೀಲ, ಜೆಡಿಎಸ್ ದಿಂದ ನಾಸೀರ ಬಾಗವಾನ್, ಪಕ್ಷೇತರ ಅಭ್ಯರ್ಥಿ ಸೋಮನಿಂಗ ಧಬಾಳೆ ನಾಮಪತ್ರ ಸಲ್ಲಿಸಿದರು.
ಕಿತ್ತೂರು ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಬಾಬಾಸಾಹೇಬ ಪಾಟೀಲ, ಆಮ್ ಆದ್ಮಿ ಪಾರ್ಟಿಯಿಂದ ಆನಂದ ಹಂಪನ್ನವರ, ಬೈಲಹೊಂಗಲ ಮತ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಕೌಜಲಗಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸವರಾಜ ಕೌಜಲಗಿ, ಪಕ್ಷೇತರ ಅಭ್ಯರ್ಥಿಯಾಗಿ ಡಾ. ವಿಶ್ವನಾಥ ಪಾಟೀಲ, ಅಮಿತ್ ಪಾಟೀಲ, ಸವದತ್ತಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಮಲ್ಲಿಕಾತ್ಜುನ ಮುದೇನೂರ, ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ, ರಾಮದುರ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಪಟ್ಟಣ, ಬಿಜೆಪಿ ಹಾಗೂ ಪಕ್ಷೇತರರಾಗಿ ಪ್ರತ್ಯೇಕವಾಗಿ ಮಹಾದೇವಪ್ಪ ಯಾದವಾಡ, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಪ್ರತ್ಯೇಕವಾಗಿ ಮಲ್ಲಪ್ಪ ಯಾದವಾಡ, ಬಿಜೆಪಿಯಿಂದ ಚಿಕ್ಕ ರೇವಣ್ಣ ನಾಮಪತ್ರ ಸಲ್ಲಿಸಿದರು.