Advertisement
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರಿಗೆ ಅಪಮಾನ ಮಾಡುವದು ಬಿಜೆಪಿಯವರ ಸಿದ್ದಾಂತ. ಚಲವಾದಿ ನಾರಾಯಣಸ್ವಾಮಿ ಮೂಲಕ ಒಬ್ಬ ದಲಿತನನ್ನು ಉಪಯೋಗಿಸಿಕೊಂಡು ದಲಿತರಿಗೆ ಅಪಮಾನ ಮಾಡುವ ಕಾಯಕವನ್ನು ಬಿಜೆಪಿ ಮುಂದುವರಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ದಲಿತರಿಗೆ ಅಪಮಾನ ಎಂಬ ಅಸ್ತ್ರ ಬಿಟ್ಟಿದ್ದಾರೆ ಎಂದು ಟೀಕೆ ಮಾಡಿದರು.
Related Articles
Advertisement
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಅವರದೇ ಪಕ್ಷದ ಯಾವ ನಾಯಕರೂ ಒಪ್ಪಿಕೊಂಡಿಲ್ಲ. ಯತ್ನಾಳ, ರಮೇಶ ಜಾರಕಿಹೊಳಿ ಮೊದಲಾದ ನಾಯಕರು ತಮ್ಮ ಅಧ್ಯಕ್ಷರ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ವಿಜಯೇಂದ್ರ ಗಾಡಿ ಬಹಳ ದಿನ ಓಡುವುದಿಲ್ಲ ಎನಿಸುತ್ತದೆ ಎಂದು ವ್ಯಂಗವಾಡಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಟ್ರಸ್ಟ ಗೆ ಕೆಐಎಡಿ ಬಿಸಿಎ ನಿವೇಶನ ಹಂಚಿಕೆ ವಿಚಾರದಲ್ಲಿ ಯಾವುದೇ ಅಕ್ರಮವಾಗಿಲ್ಲ. ಎಲ್ಲವೂ ಕಾನೂನು ಪ್ರಕಾರವೇ ಆಗಿದೆ. ರಾಹುಲ್ ಖರ್ಗೆ ಅವರು ಮೆರಿಟ್ ಆಧಾರದ ಮೇಲೆಯೇ ಈ ನಿವೇಶನ ಪಡೆದುಕೊಂಡಿದ್ದಾರೆ. ಆದರೆ ಸಿಎ ನಿವೇಶನ ಹಂಚಿಕೆ ಬಗ್ಗೆ ತಿಳುವಳಿಕೆ ಇಲ್ಲದ ಚಲವಾದಿ ನಾರಾಯಣ ಸ್ವಾಮಿ, ಲೆಹರಸಿಂಗ್ ಮೊದಲಾದ ನಾಯಕರು ಸುಳ್ಳು ದಾಖಲೆಗಳನ್ನು ನೀಡಿ ಖರ್ಗೆ ಕುಟುಂಬದ ವಿರುದ್ಧ ನಿರಾಧಾರ ಆರೋಪ ಮಾಡಿದ್ದಲ್ಲದೆ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಎಂ.ಬಿ ಪಾಟೀಲ್ ಹೇಳಿದರು.