Advertisement

ಕೋವಿಡ್‌ ನಿಯಂತ್ರಣಕ್ಕೆ ಗ್ರಾಪಂಗೇ ಅಧಿಕಾರ

08:17 PM May 21, 2021 | Team Udayavani |

ಬೆಳಗಾವಿ: ಕೋವಿಡ್‌ ಸೋಂಕು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದ್ದು ಇದರ ನಿಯಂತ್ರಣಕ್ಕೆ ಗ್ರಾಮ ಪಂಚಾಯತ್‌ ಮಟ್ಟದಲ್ಲೇ ಅಧಿಕಾರ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗ್ರಾಮಗಳಲ್ಲಿ ಈಗ ಹೆಚ್ಚುತ್ತಿರುವ ಸೋಂಕಿನ ಪ್ರಮಾಣ ನೋಡಿದರೆ 15 ದಿನಗಳ ಲಾಕ್‌ಡೌನ್‌ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಲ್ಲಿನ ಪಿಡಿಒ ಗಳಿಗೆ ಅಧಿಕಾರ ನೀಡಲಾಗಿದೆ ಎಂದರು.

ಕೊರೊನಾ ಸೋಂಕಿತರನ್ನು ಹೋಮ್‌ ಐಸೋಲೇಷನ್‌ದಲ್ಲಿಡದೆ ವಸತಿ ಶಾಲೆಗಳಲ್ಲಿ ತೆರೆದಿರುವ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ದಾಖಲಿಸುವಂತೆ ಸೂಚಿಸಲಾಗಿದೆ. ಇದಲ್ಲದೆ ತಾಲೂಕು ಕೇಂದ್ರಗಳಲ್ಲಿ 50 ಆಕ್ಸಿಜನ್‌ ಹಾಸಿಗೆಗಳ ವ್ಯವಸ್ಥೆಗೆ ಕ್ರಮವಹಿಸಲಾಗಿದೆ ಎಂದು ಹೇಳಿದರು.

ಬೆಳಗಾವಿಗೆ ಕೇಂದ್ರದಿಂದ 20 ಟನ್‌ ಆಕ್ಸಿಜನ್‌ ಪೂರೈಕೆಯಾಗಿದ್ದು ಈ ಆಕ್ಸಿಜನ್‌ ಹೊತ್ತ ಟ್ಯಾಂಕರ್‌ ಗುರುವಾರ ರಾತ್ರಿ ಬೆಳಗಾವಿಗೆ ಆಗಮಿಸಲಿದೆ. ಇನ್ನು 70 ಆಕ್ಸಿಜನ್‌ ಸಿಲಿಂಡರ್‌ ಲಭ್ಯವಾಗಲಿವೆ. ಹೀಗಾಗಿ ಜಿಲ್ಲೆಯಲ್ಲಿ ಆಕ್ಸಿಜನ್‌ ಕೊರತೆಯಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಗೋವಿಂದ ಕಾರಜೋಳ ಹೇಳಿದರು. ಸರಕಾರದ ವಿರುದ್ಧ ಕಾಂಗ್ರೆಸ್‌ ನಾಯಕರು ಮಾಡುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಂತಹ ಸ್ಥಿತಿಯಲ್ಲಿ ಸರಕಾರದ ಜೊತೆ ಕೈಜೋಡಿಸಬೇಕಾದ ಪ್ರತಿಪಕ್ಷಗಳು ಟೀಕೆ ಮಾಡುವದನ್ನೇ ಕಾಯಕ ಮಾಡಿಕೊಂಡಿದ್ದಾರೆ.

ಈ ಟೀಕೆಗಳಿಗೆ ಆಧಾರವೇ ಇಲ್ಲ. ಕಾಂಗ್ರೆಸ್‌ ದವರು 70 ವರ್ಷ ಸರಿಯಾಗಿ ಆಡಳಿತ ನಡೆಸಿದ್ದರೆ ದೇಶದಲ್ಲಿ ಸಮಸ್ಯೆಗಳೇ ಇರುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು. ಕಳೆದ ವರ್ಷ ಸರಕಾರ ಪ್ಯಾಕೇಜ್‌ ಘೋಷಣೆ ಮಾಡಿದಾಗ ಅದರ ಪರಿಹಾರ ಎಲ್ಲರಿಗೂ ಸಿಕ್ಕಿದೆ. ಹೀಗಿರುವಾಗ ಕಾಂಗ್ರೆಸ್‌ದವರ ಆರೋಪದಲ್ಲಿ ಹುರುಳಿಲ್ಲ. ಕೆಲವರಿಗೆ ತಾಂತ್ರಿಕ ಕಾರಣಗಳಿಂದ ಸಮಸ್ಯೆ ಆಗಿರಬಹುದು.

Advertisement

ಆದರೆ ಬಹುತೇಕ ಜನರಿಗೆ ಸಿಕ್ಕಿಲ್ಲ ಎಂಬುದು ಸುಳ್ಳು. ಒಂದು ವೇಳೆ ಅವರು ಸಾಬೀತು ಮಾಡಿದರೆ ಅದಕ್ಕೆ ಅವರು ಕೊಡುವ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next