Advertisement

ಬೇಕಲರ ಬರಹಗಳು ಸಾರ್ವಕಾಲಿಕ ಮೌಲ್ಯವುಳ್ಳ ಅಧ್ಯಯನ ಯೋಗ್ಯ ಕೃತಿಗಳು

03:56 PM Apr 13, 2017 | Harsha Rao |

ಕಾಸರಗೋಡು: ಬೇಕಲ ರಾಮ ನಾಯಕರ  ಬರಹಗಳು ಸಾರ್ವಕಾಲಿಕ ಮೌಲ್ಯವುಳ್ಳ ಅಧ್ಯಯನ ಯೋಗ್ಯ ಕೃತಿಗಳು. ಅವುಗಳ ಆಳ ಮತ್ತು ವಿಸ್ತಾರ ಶೋಧಿಸಿದಷ್ಟು ತೆರೆದು ಕೊಳ್ಳುತ್ತಾ ಹೋಗುತ್ತದೆ. ಐತಿಹಾಸಿಕ ಸತ್ಯಗಳನ್ನು ತಮ್ಮ ಬರಹಗಳ ಮೂಲಕ ಎತ್ತಿ ತೋರಿಸಿದ ಬೇಕಲರ ಶೈಲಿ ಜಾನಪದ ಸತ್ವವನ್ನು ಮೈಗೂಡಿಸಿಕೊಂಡಿದ್ದು, ಕಾಸರಗೋಡಿನದ್ದೇ ಆದ ಕೆಲವು ಶಬ್ದಗಳು ಕನ್ನಡದ ಶಬ್ದ ಭಂಡಾರವನ್ನು ಹೆಚ್ಚಿಸಿವೆ ಎಂದು ಹವ್ಯಾಸಿ ಲೇಖಕಿ ಆಶಾ ಜಗದೀಶ್‌ ಕೂಡ್ಲು ಹೇಳಿದರು.

Advertisement

ಅವರು ಕಾಸರಗೋಡಿನ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಜರಗಿದ ಬೇಕಲ ರಾಮ ನಾಯಕರ ಕೃತಿ ವಿಮರ್ಶೆ ಮತ್ತು ಸಂಸ್ಮರಣಾ ಕಾರ್ಯಕ್ರಮದಲ್ಲಿ ಕೃತಿ ವಿಮರ್ಶೆ ಮಾಡಿ ಮಾತನಾಡಿದರು.
ಒಂದು ಕಾಲದಲ್ಲಿ ಕೇರಳ ವಿದ್ಯಾಭ್ಯಾಸ ಇಲಾಖೆಯ ಪಠ್ಯ ಪುಸ್ತಕಗಳಾಗಿದ್ದ ಬೇಕಲರ ಕೃತಿಗಳು ಕಾಲಕ್ರಮೇಣ ಮೂಲೆ ಗುಂಪಾಗುವ ಸ್ಥಿತಿಯಿಂದ ಅವುಗಳನ್ನು ಕಲೆ ಹಾಕಿ ಸಮಗ್ರ ಸಾಹಿತ್ಯ ಸಂಪುಟದ ಮೂಲಕ ಪುನರ್‌ಜನ್ಮ ನೀಡಿರುವುದು ಕಾಸರಗೋಡಿನ ಅಕ್ಷರ ಇತಿಹಾಸ ಪರಂಪರೆಗೆ ನೀಡಿರುವ ಮರು ಹುಟ್ಟು ಎಂದು ಅವರು ಹೇಳಿದರು.

ರಾಮರಾಜ ಕ್ಷತ್ರಿಯ ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಹಿರಿಯ ಸಾರಿಗೆ ಉದ್ಯಮಿ ಕೆ. ನಿರಂಜನ ಕೊರಕ್ಕೋಡು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕನ್ನಡ ಭವನ ಗ್ರಂಥಾ ಲಯದ ಸ್ಥಾಪಕ ಅಧ್ಯಕ್ಷ ಕೆ.ವಾಮನ ರಾವ್‌ ಬೇಕಲ್‌ ಅಧ್ಯಕ್ಷತೆ ವಹಿಸಿದರು. ಸಂಘಟಕ ದಯಾನಂದ ಬೆಳ್ಳೂರಡ್ಕ, ನವೀನ್‌ಚಂದ್ರ ಅಣಂಗೂರು, ಅಶ್ವಥ್‌ರಾಜ್‌ ಬಹುಮಾನ್‌, ಪ್ರಕಾಶ್‌ ಬೆಳ್ಳೂರಡ್ಕ, ರಮಾಬಾಯಿ, ಉಷಾ ಕಿರಣ್‌ ಅಣಂಗೂರು ಮೊದಲಾದವರು ಮಾತನಾಡಿದರು.

ಕನ್ನಡ ಭವನದ ನಿರ್ದೇಶಕಿ ಸಂಧ್ಯಾ ರಾಣಿ ಟೀಚರ್‌ ಸ್ವಾಗತಿಸಿದರು. ಕಾರ್ಯದರ್ಶಿ ಕೆ. ಜಗದೀಶ್‌ ಕೂಡ್ಲು ವಂದಿಸಿದರು. ಉಪನ್ಯಾಸಕಿ, ಯಕ್ಷಗಾನ ಕಲಾವಿದೆ ಲತಾ ಪ್ರಕಾಶ್‌ ಬೆಳ್ಳೂರಡ್ಕ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next