Advertisement
ಬಿಜೈ ಕೆಎಸ್ಸಾರ್ಟಿಸಿ ನಿಲ್ದಾಣದಿಂದ ಪೊಳಲಿ ಮತ್ತು ಕಟೀಲಿಗೆ ಸಂಪರ್ಕ ಕಲ್ಪಿಸಲಾಗಿದೆ. ಈಗಾಗಲೇ ಕಲ್ಪನೆಗೆ ತೆರಳುತ್ತಿದ್ದ ಬಸ್ ಅನ್ನು ಪೊಳಲಿಗೆ ವಿಸ್ತರಿಸಲಾಗಿದೆ. ಅದೇ ರೀತಿ ಪೊಳಲಿ ಮಾರ್ಗಕ್ಕೆ ಹೆಚ್ಚುವರಿ ಬಸ್‌ಗಾಗಿ ತಾತ್ಕಾಲಿಕ ಪರವಾನಿಗೆಯನ್ನು ಸಾರಿಗೆ ಇಲಾಖೆಯಿಂದ ಪಡೆಯ ಲಾಗಿದೆ. ಸದ್ಯದಲ್ಲೇ ಹೊಸ ಬಸ್ ಕಾರ್ಯಾಚರಣೆಯೂ ಆರಂಭ ಗೊಳ್ಳಲಿದೆ.
ಬಿಜೈ ನಿಲ್ದಾಣದಿಂದ ಪೊಳಲಿಗೆ ತೆರಳುವ ಬಸ್ ಪಿವಿಎಸ್, ನಂತೂರು, ಕದ್ರಿ, ಬಿಕರ್ನಕಟ್ಟೆ, ಕುಲಶೇಖರ, ಬೈತುರ್ಲಿ, ಕುಡುಪು, ವಾಮಂಜೂರು, ಕೆತ್ತಿಕಲ್ಲು, ತಾರಿಗುಡ್ಡೆ/ ಬೊಂಡಂತಿಲ, ಕೊಂಬೆಲ್ ಲಚ್ಚಿಲ್, ಬದ್ರಿಯನಗರ, ಮಲ್ಲೂರು, ಕಳಾಯಿ ಕ್ರಾಸ್, ಅಮ್ಮುಂಜೆ ಬಸ್ ನಿಲ್ದಾಣ, ಬಡಕಬೈಲು ಮೂಲಕ ಸಾಗಲಿದೆ. ಬಿಜೈಯಿಂದ ಕಟೀಲಿಗೆ ತೆರಳುವ ಬಸ್ ಕೂಳೂರು, ಸುರತ್ಕಲ್, ಚೊಕ್ಕಬೆಟ್ಟು, ಕಾಟಿಪಳ್ಳ, ಶಿಬರೂರು, ಬಲವಿನಗುಡ್ಡೆ, ಕಿನ್ನಿಗೋಳಿ, ಮೂರುಕಾವೇರಿ ಮೂಲಕ ಕಟೀಲಿಗೆ ಸಂಚರಿಸಲಿದೆ.