Advertisement

Politics; ಜನರ ಜತೆ ನಾವಿರುವುದು ಕಾಂಗ್ರೆಸ್ ಗೆ ಅಪರಾಧದಂತೆ ಕಾಣುತ್ತಿದೆ: ಸಿ.ಟಿ ರವಿ

04:36 PM Aug 26, 2023 | Team Udayavani |

ಚಿಕ್ಕಮಗಳೂರು: ಚಂದ್ರಯಾನ-3 ಬಗ್ಗೆ ಇಡೀ ದೇಶವೇ ಸಂಭ್ರಮಿಸಿದೆ. ಒಂದು ಪಕ್ಷಕ್ಕೆ ಸೀಮಿತವಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದರು. ನಮ್ಮವರು ಜನರ ಜೊತೆ ಇದ್ದು ಪ್ರಧಾನಿಯನ್ನು ಸ್ವಾಗತಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವ್ಯಂಗ್ಯ ಟ್ವೀಟ್‌ ಗೆ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

Advertisement

ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾಗತಿಕವಾಗಿ ಭಾರತಕ್ಕೆ ಗೌರವ ಸಿಗುತ್ತಿದೆ. ಚಂದ್ರಯಾನ-3 ದೇಶದ 140 ಕೋಟಿ ಜನರಿಗೆ ಸೇರಿದ್ದು ಎಂದು ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. 140 ಕೋಟಿ ಜನರಲ್ಲಿ ಕಾಂಗ್ರೆಸ್ ನವರು ಇದ್ದಾರೆ ಎಂದು ನಾನು ಭಾವಿಸಿದ್ದೇನೆ ಎಂದರು.

140 ಜನಸಂಖ್ಯೆಯಲ್ಲಿ ಕಾಂಗ್ರೆಸ್‌ನವರು ಇದ್ದಾರೆಂದು ನಾವು ಭಾವಿಸಿದ್ದು, ಅವರು ತಾವಿಲ್ಲವೆಂದು ಏಕೆ ಭಾವಿಸುತ್ತಾರೆ ನನಗೆ ಅರ್ಥವಾಗುತ್ತಿಲ್ಲ ಎಂದ ಅವರು, ಜನರ ಜೊತೆ ನಾವಿರುವುದು ಸಂತೋಷ ತಂದರೆ, ಕಾಂಗ್ರೆಸ್‌ ನವರಿಗೆ ಅಪರಾಧ ಅನಿಸುತ್ತಿರಬೇಕು ಎಂದು ಟೀಕಿಸಿದರು.

ಜನ ಸಾಮಾನ್ಯರ ಜೊತೆ ಕಾಂಗ್ರೆಸ್‌ನವರು ಇದ್ದರೇ ಅವರಿಗೆ ಕೀಳರಿಮೆ ಭಾವನೆ ಬರುತ್ತದೆ ಇರಬೇಕು. ಅವರು ಒಡ್ಡೋಲಗದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಾರೆಂದ ಅವರು, 140 ಕೋಟಿ ಜನರ ಜೊತೆ ನಾವಿದ್ದೇವೆ. ಕಾಂಗ್ರೆಸ್‌ ನವರು ಇಲ್ಲವೆಂದುಕೊಂಡರೆ ಅವರ ದುರ್ದೈವ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷ ತೊರೆದು ಬಂದವರಿಗೆ ಹಿಂದಿನ ಬೆಂಚ್ ಎಂದು ಕಾಂಗ್ರೆಸ್ ಹೇಳಿದೆ. ಅವರು ಗೌರವದಿಂದ ಕರೆಯುತ್ತಿಲ್ಲ. ಗೌರವಿಲ್ಲದ ಕಡೆ ಏಕೆ ಹೋಗುತ್ತಾರೆ ಎಂದ ಅವರು ಗೌರವಿಲ್ಲದ ಕಡೆ ಯಾರು ಹೋಗಲ್ಲ ಎಂದರು.

Advertisement

ಸೋಮಶೇಖರ್ ಸೇರಿದಂತೆ ಕೆಲವರು ನಮ್ಮನ್ನು ಕಳುಹಿಸಲು ನೋಡುತ್ತಿದ್ದಾರೆಂದು ಹೇಳಿಕೆ ನೀಡಿದ್ದು, ನಾವು ಯಾರನ್ನು ಕಳಿಸಲು ಪ್ರಯತ್ನಿಸುತ್ತಿಲ್ಲ. ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಉಳಿದುಕೊಳ್ಳುವುದು, ಹೋಗುವುದು ಅವರಿಗೆ ಬಿಟ್ಟಿದ್ದು, ಕಾರ್ಯಕರ್ತರ ಬಲದಿಂದ ಪಕ್ಷ ಕಟ್ಟಿದ್ದೇವೆ. ಕಾರ್ಯಕರ್ತರಿಂದಲೇ ಎಂತಹ ಪರಿಸ್ಥಿತಿ ಬಂದರೂ ಎದುರಿಸುತ್ತೇವೆ ಎಂದು ಅಭಿಪ್ರಾಯ ಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next