Advertisement

ನಿಷ್ಕಲ್ಮಶ ಭಕ್ತಿಗೆ ಭಗವಂತನೊಲವು: ವಿನಾಯಕನಂದ ಮಹಾರಾಜ್‌

12:18 PM Apr 24, 2018 | Team Udayavani |

ಮಲ್ಪೆ: ನಿಷ್ಕಲ್ಮಶ ಭಕ್ತಿಗೆ ಮಾತ್ರ ಭಗವಂತ ಒಲಿಯುತ್ತಾನೆ. ತ್ಯಾಗ, ಸೇವೆ ಮತ್ತು ನಿಷ್ಕಳಂಕ ಪ್ರೇಮದಿಂದ ವ್ಯವಹರಿಸಿದಾಗ ದೇವರ ಪ್ರೀತಿಗೆ ಪಾತ್ರರಾಗುತ್ತೇವೆ ಎಂದು ಕಾರ್ಕಳ ಯರ್ಲಪಾಡಿ ಬೈಲೂರು ಮಠ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ವಿನಾಯ ಕಾನಂದ ಮಹಾರಾಜರು ನುಡಿದರು.

Advertisement

ವಡಭಾಂಡೇಶ್ವರ ತೊಟ್ಟಂ ಶ್ರೀ ಪಂಡರೀನಾಥ ಭಕ್ತಿ ಉದಯ ಭಜನ ಮಂದಿರದ ಬ್ರಹ್ಮಕಲಶೋತ್ಸವ ಹಾಗೂ ನೂತನ ಜ್ಞಾನ ಜ್ಞಾನಮಂದಿರವನ್ನು ಸೋಮವಾರ ಸಮರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.
ಭಗವಂತನ ಅಸ್ತಿತ್ವ ಶಾಂತವಾಗಿರು ತ್ತದೆ, ಭಕ್ತನ ನಿಷ್ಕಲ್ಮಶ ಭಕ್ತಿ, ಪ್ರಾರ್ಥನೆಗೆ ಆತನ ಅಸ್ತಿತ್ವ ಪ್ರಕಟವಾಗುತ್ತದೆ. ಶುದ್ಧ ಹೃದಯದಿಂದ ಭಗವಂತನಲ್ಲಿ ಪ್ರಾರ್ಥಿಸಿದಾಗ ದುರಿತಗಳು ನಿವಾರಣೆ ಯಾಗಿ ಜೀವನ ಪಾವನವಾಗುತ್ತದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಎಸ್‌.ಟಿ. ಹರೀಶ್‌ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಗೌರವ ಅಧ್ಯಕ್ಷ ಸಾಧು ಸಾಲ್ಯಾನ್‌, ಅಧ್ಯಕ್ಷ ಯತಿರಾಜ್‌ ಎಸ್‌. ಸಾಲ್ಯಾನ್‌, ಪ್ರಧಾನ ಕಾರ್ಯದರ್ಶಿ ಶಂಕರ ಸಾಲ್ಯಾನ್‌, ಗೌರವ ಸಲಹೆಗಾರ ಎಸ್‌.ಟಿ. ಹರೀಶ್‌, ಭಜನ ಮಂದಿರದ ಅಧ್ಯಕ್ಷ ಸುಂದರ ಜಿ. ಕುಂದರ್‌, ಕಾರ್ಯದರ್ಶಿ ಪದ್ಮನಾಭ ಸುವರ್ಣ, ಮಾತೃಮಂಡಳಿ ಅಧ್ಯಕ್ಷೆ ಲಕ್ಷ್ಮೀ ಗಣೇಶ್‌, ತೆಂಕತೊಟ್ಟಂ ಮೊಗವೀರ ಸಭಾದ ಅಧ್ಯಕ್ಷ ದಾಮೋದರ ಸಾಲ್ಯಾನ್‌, ತೆಂಕತೊಟ್ಟಂ ಮಹಿಳಾ ಮಂಡಳಿ ಅಧ್ಯಕ್ಷೆ ಅಪ್ಪಿ ಸುವರ್ಣ ಮೊದಲಾದವರು  ಪಾಲ್ಗೊಂಡಿದ್ದರು.

ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ
ಬೆಳಗ್ಗೆ ಕೊರಂಗ್ರಪಾಡಿ ವಿದ್ವಾನ್‌ ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ನಡೆದವು. ಬೆಳಗ್ಗಿನ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ವಿಠೊಭ ರುಖುಮಾಯಿ ದೇವರ ಬಿಂಬ ಪ್ರತಿಷ್ಠಾಪನೆ, ಶ್ರೀ ದೇವರಿಗೆ
ಬ್ರಹ್ಮಕಲಶಾಭಿಷೇಕ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತ ರ್ಪಣೆ ಜರಗಿತು. ಮಂಗಳವಾರ ಸಂಜೆ ಧಾರ್ಮಿಕ ಸಭೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next