Advertisement
ಒಂದು ತಿಂಗಳಿನಿಂದ ಚೀನದ ವಾಣಿಜ್ಯ ರಾಜಧಾನಿ ಶಾಂಘೈಯಲ್ಲಿ ಬಿಗಿ ಲಾಕ್‌ಡೌನ್ ಜಾರಿಯಲ್ಲಿದೆ. ಈಗ ರಾಜಧಾನಿ ಬೀಜಿಂಗ್‌ನಲ್ಲೂ ಕೊರೊನಾ ಹೆಚ್ಚಳವಾಗಿದ್ದು, ನಾಗರಿಕರಲ್ಲಿ ಭೀತಿ ಹುಟ್ಟಿಸುತ್ತದೆ.
ಬೀಜಿಂಗ್‌ನ 158 ಬಸ್ ಮಾರ್ಗಗಳಲ್ಲಿ 60 ಸಬ್‌ವೇ ಸ್ಟೇಷನ್‌ಗಳನ್ನು ಮುಚ್ಚಲಾಗಿದೆ. ಇವೆಲ್ಲವೂ ಛಾಯಾಂಗ್ ಜಿಲ್ಲೆಯಲ್ಲೇ ಇದ್ದು, ಇಲ್ಲಿ ಪ್ರಮುಖ ನಾಯಕರು ಮತ್ತು ಅಧಿಕಾರಿಗಳ ನಿವಾಸಗಳಿವೆ. ಬೀಜಿಂಗ್‌ಗೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು 10 ದಿನಗಳ ಕಾಲ ಬಿಗಿ ಕ್ವಾರಂಟೈನ್‌ನಲ್ಲಿ ಇರಬೇಕಾಗಿದೆ.
ಅತ್ತ ಶಾಂಘೈನಲ್ಲಿ ಕೊರೊನಾ ಪ್ರಕರಣ ಇಳಿಕೆಯಾಗುತ್ತಿದೆ. ಆದರೂ ಇಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ತೆರವು ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಥಳೀಯಾಡಳಿತ ಹೇಳಿದೆ.