Advertisement
ಅನಿವಾಸಿ ಕನ್ನಡಿಗರ ರಂಗ ಪ್ರತಿಭಾ ಪ್ರದರ್ಶನಕ್ಕೊಂದು ಅವಕಾಶ ನೀಡುವ ಸಲುವಾಗಿ “ರಂಗ ನಾವಿಕ’ ವಿಶ್ವ ಕನ್ನಡಿಗರ ವರ್ಚುವಲ್ ಕನ್ನಡ ನಾಟಕೋತ್ಸವದಲ್ಲಿ ಪಾಲ್ಗೊಳ್ಳುವವರು www.nvks21.com/drama,, ಸಂಗೀತ ಪ್ರತಿಭಾ ಪ್ರದರ್ಶನಕ್ಕೆ “ಸ್ವರ ನಾವಿಕ’ ವಿಶ್ವ ಕನ್ನಡಿಗರ ವರ್ಚುವಲ್ ಸಂಗೀತೋತ್ಸವದಲ್ಲಿ ಭಾಗವಹಿಸುವವರು www.nvks21.com/music, ನೃತ್ಯ ಪ್ರತಿಭಾ ಪ್ರದರ್ಶನಕ್ಕೆ “ನೃತ್ಯ ಕಲಾ ನಾವಿಕ’ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು www.nvks21.com/dance, , ಸಂಗೀತ ಹಬ್ಬ “ನಾವಿಕ ಕೋಗಿಲೆ’ ಯಲ್ಲಿ ಪಾಲ್ಗೊಳ್ಳುವವರು ಹಾಗೂ “ಕ್ಷಣ ನಾವಿಕ’ ಒಂದು ನಿಮಿಷದ ಟಿಕ್‌ಟಾಕ್ ವಿಡಿಯೋ ಮಾಡುವವರಿಗೆ ಒಂದು ಅವಕಾಶದಲ್ಲಿ ಪಾಲ್ಗೊಳ್ಳುವವರು, “ನಾವಿಕ ಅಂತ್ಯಾಕ್ಷರಿ’ ವಿಶ್ವ ಕನ್ನಡಿಗರ ವರ್ಚುವಲ್ ಅಂತ್ಯಾಕ್ಷರಿ ಸ್ಪರ್ಧೆಯಲ್ಲಿ ಭಾಗವಹಿಸುವವರು www.nvks21.com/competitions,, ವಿಶ್ವ ಕನ್ನಡಿಗರ ಶಾರ್ಟ್ ಫಿಲ್ಮಂ ಸ್ಪರ್ಧೆ ಕಿರು ಚಲನಚಿತ್ರೋತ್ಸವದಲ್ಲಿ ಭಾಗವಹಿಸುವವರು www.nvks21.com/shortfilms ನಲ್ಲಿ ಎಪ್ರಿಲ್ 30ರೊಳಗೆ ಹಾಗೂ “ಛಾಯಾ ನಾವಿಕ’ ಛಾಯಾಚಿತ್ರಗ್ರಹಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು www.nvks21.com/competitions ನಲ್ಲಿ ಜೂನ್ 30ರೊಳಗೆ ನೋಂದಣಿ ಮಾಡಿಕೊಳ್ಳಬಹುದು.
Related Articles
Advertisement
ಪ್ರೈಮ್ ಚಾನೆಲ್ ಜತೆಗೆ ಬಿಸಿನೆಸ್ ಫೋರಂ, ವುಮೆ®Õ… – ಫೋರಂ, ಆಧ್ಯಾತ್ಮಿಕ, ಯೋಗ, ಕನ್ನಡ ಕೂಟಗಳ ಕಾರ್ಯಕ್ರಮಗಳು, ಪ್ರತಿಭಾ- ಸ್ಪರ್ಧೆಗಳು ವಿವಿಧ ಚಾನಲ್‌ಗಳಲ್ಲಿ ಪ್ರಸಾರ ವಾಗಲಿದ್ದು, ನೋಡುಗರು ತಮಗೆ ಬೇಕಾದ ಚಾನಲ್ ಅನ್ನು ಆಯ್ಕೆ ಮಾಡಿಕೊಳ್ಳ ಬಹುದು. ಲೈವ್ ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಂಡರೆ ರೆಕಾರ್ಡಿಂಗ್ ಪ್ರೋಗ್ರಾಮ್‌ಗಳನ್ನೂ ನೋಡಲು ಅವಕಾಶವಿದೆ. ಪ್ರಚಂಚದ ವಿವಿಧ ದೇಶಗಳ ನೂರಾರು ಕನ್ನಡ ಸಂಘಗಳು ಈ ಆರನೇ ನಾವಿಕ ವಿಶ್ವಕನ್ನಡ ಸಮಾವೇಶದಲ್ಲಿ ಭಾಗವಹಿಸಲಿವೆ.
ಪ್ರಖ್ಯಾತ ಗಾಯಕ ಸಹೋದರರಾದ ಪ್ರವೀಣ್ ಬಿ.ವಿ., ಪ್ರದೀಪ್ ಬಿ.ವಿ. ಮತ್ತು ಸಂಗೀತ ಕಟ್ಟಿ ಅವರ ನೇತೃತ್ವದಲ್ಲಿ ನಡೆಯಲಿರುವ ಕನ್ನಡವೇ ಸತ್ಯ ಎಂಬ ಕಾರ್ಯಕ್ರಮದಲ್ಲಿ ಹತ್ತು ಜನ ಪ್ರಖ್ಯಾತ ಗಾಯಕರು ಮತ್ತು 10 ಜನ ಪ್ರಖ್ಯಾತ ಗಾಯಕಿಯರು ಒಟ್ಟಿಗೆ ಸೇರಿ ಕೇಳುಗರನ್ನು ಮನೋರಂಜಿಸಲಿದ್ದಾರೆ. ಫಿಟೆ°ಸ್ ವಿಭಾಗದಲ್ಲಿ ಕುಮಾರ- ಕುಮಾರ್ ಕನ್ನಡ ಗೀತೆಗಳ ಮೂಲಕ ಏರೋಬಿಕÕ… ವ್ಯಾಯಾಮ ಕಾರ್ಯ ಕ್ರಮವನ್ನು ವಿಭಿನ್ನ ರೀತಿಯಲ್ಲಿ ನಡೆಸಿಕೊಡಲಿದ್ದಾರೆ. ಇದರೊಂದಿಗೆ ನಾವಿಕ-ನಿಮಿಷ, ಏಕ ನಾವಿಕ, ನಾವಿಕ ಕೋಗಿಲೆ, ಛಾಯಾ ನಾವಿಕ, ರಂಗ ನಾವಿಕ, ಗಾನ ನಾವಿಕ, ನೃತ್ಯ ನಾವಿಕ, ಸಿಹಿಕಹಿ ಚಂದ್ರು ನಡೆಸಿಕೊಂಡುವ ಬಾಣಸಿಗ ನಾವಿಕ, ನಾವಿಕ ಅಂತಕ್ಷರಿ ಸ್ಪರ್ಧೆ ಹೀಗೆ ಹತ್ತು ಹಲವಾರು ಸ್ಪರ್ಧೆಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ಡಿಡಿಡಿ.nvks21.cಟಞ ಅನ್ನು ನೋಡಬಹುದು ಎಂದು ನಾವಿಕ ಸಂಸ್ಥೆಯ ಅಧ್ಯಕ್ಷರಾದ ವಲ್ಲೀಶ ಶಾಸ್ರ್ತಿ ತಿಳಿಸಿದ್ದಾರೆ.