Advertisement

ರಾಜಶೇಖರ ಶ್ರೀ ಮೌನಾನುಷ್ಠಾನ ಆರಂಭ

05:03 PM Aug 12, 2022 | Team Udayavani |

ವಾಡಿ: ಭಕ್ತರ ಒಳಿತಿಗಾಗಿ ಹಳಕರ್ಟಿಯ ರಾಜಶೇಖರ ಶ್ರೀಗಳು ಒಂಭತ್ತು ದಿನ ಮೌನಾನುಷ್ಟಾನ ಮತ್ತು ಒಂಭತ್ತು ದಿನ ಜೀವ ನಿರ್ವಿಕಲ್ಪ ಸಮಾಧಿ ಅನುಷ್ಠಾನಕ್ಕೆ ಮುಂದಾಗಿದ್ದಾರೆ ಎಂದು ಚಂದನಕೇರಾ ಬೃಂಗಿ ಪ್ರಾಚೇಶ್ವರ ಕಟ್ಟಿಮನಿ ಸಂಸ್ಥಾನದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ ನುಡಿದರು.

Advertisement

ಗುರುವಾರ ಹಳಕರ್ಟಿ ಗ್ರಾಮದ ಸಿದ್ಧೇಶ್ವರ ಧ್ಯಾನಧಾಮದಲ್ಲಿ ಮೌನಾನುಷ್ಠಾನ ಆರಂಭಿಸಿದ ಶ್ರೀ ರಾಜಶೇಖರ ಸ್ವಾಮೀಜಿ ಅವರ ವಿಶೇಷ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಆಹಾರ, ಹಣ್ಣು, ಹಾಲು ಸೇರಿದಂತೆ ಯಾವುದೇ ಪದಾರ್ಥವಿಲ್ಲದೇ ಕೇವಲ ಜಲ ಪಾನ ಸೇವನೆ ಮೂಲಕ 18 ದಿನಗಳ ಕಠಿಣ ತಪಸ್ಸು ಕೈಗೊಂಡು ದೇವಿ ಪಾರಾಯಣ ಅಧ್ಯಯನಕ್ಕೆ ಪೂಜ್ಯರು ಮುಂದಾಗಿರುವುದು ಭಕ್ತರ ಹಿತದೃಷ್ಟಿಯಿಂದ ಎಂದರು.

ಸುಗೂರ ಮಠದ ಡಾ| ಚನ್ನ ರುದ್ರಮುನಿ ಶಿವಾಚಾರ್ಯರು, ಬಾಲಯೋಗಿ ಪೂಜ್ಯ ಅಭಿನವ ಕೇದಾರಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ರಾಘವೇಂದ್ರ ಅಲ್ಲಿಪುರ, ರವಿ ನಾಯಕ, ಸಿದ್ಧು ಮುಗುಟಿ, ವಿರೇಶ ಕಪ್ಪರ, ದಿನೇಶ ರಾಠೊಡ, ಬಸವರಾಜ ಕುಂಬಾರ ಬಳವಡಗಿ, ಮಹಾದೇವ ಪಗಡೀಕರ, ಪರಶುರಾಮ ರಾಠೊಡ, ಪ್ರೇಮಕುಮಾರ ರಾಠೊಡ, ವಿಜಯಕುಮಾರ ರಾಠೊಡ ಪಾಲ್ಗೊಂಡಿದ್ದರು. ಆ.28ರ ವರೆಗೆ ಮಠದಲ್ಲಿ ಪ್ರತಿದಿನವೂ ಅನ್ನ ದಾಸೋಹ, ರಾತ್ರಿ ಭಜನೆ ಏರ್ಪಡಿಸಲಾಗಿದೆ ಎಂದು ಭಕ್ತರು ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next