Advertisement

ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿ

12:50 PM Jan 19, 2018 | Team Udayavani |

ಧಾರವಾಡ: ಜಿಲ್ಲೆಯಲ್ಲಿ ಕಡಲೆ ಬೆಳೆ ಉತ್ಪನ್ನ ಈಗಾಗಲೇ ರೈತನ ಕೈಗೆ ಬಂದಿದ್ದು, ಸೂಕ್ತ ದರ ಲಭ್ಯವಾಗದೇ ಕೃಷಿಕರು ಆತಂಕದಲ್ಲಿದ್ದು, ಕೂಡಲೇ ಬೆಂಬಲ  ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಹೇಳಿದರು. ಇಲ್ಲಿನ ಜಿಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಜಿಲ್ಲೆಯಾದ್ಯಂತ ಕಡಲೆ ಬೆಳೆ ಬೆಳೆದಿರುವ ರೈತರಿಗೆ ಸಹಾಯ ಹಸ್ತ ಚಾಚುವುದು ಅಗತ್ಯ. ಈಗಾಗಲೇ  ಬೆಂಬಲ ಬೆಲ ಘೋಷಣೆ ಮಾಡಿದ್ದು, ತಕ್ಷಣ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕು ಎಂದು ಸೂಚಿಸಿದರು. ಇದಕ್ಕೆ ಉತ್ತರಿಸಿದ ಕೃಷಿ ಜಂಟಿ ನಿರ್ದೇಶಕ  ಟಿ.ಎಸ್‌.ರುದ್ರೇಶಪ್ಪ, ಈಗಾಗಲೇ 4400 ರೂ. ಕನಿಷ್ಠ ಬೆಂಬಲ ಬೆಲೆ ಘೋಷಿಸಲಾಗಿದೆ. ಖರೀದಿ ಕೇಂದ್ರ ತೆರೆಯುವ ಕುರಿತು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿದೆ.

ಕೃಷಿ ಸಚಿವರು ಖುದ್ದಾಗಿ ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಪರಿಸ್ಥಿತಿ ವಿವರಿಸಿ, ಖರೀದಿ ಕೇಂದ್ರ ತೆರೆಯಲು ಅನುಮತಿ ಕೋರಿದ್ದಾರೆ. ಕೇಂದ್ರದಿಂದ ಅನುಮತಿ ದೊರೆತ ಕೂಡಲೇ 3-4 ದಿನಗಳಲ್ಲಿ ಖರೀದಿ ಕೇಂದ್ರ  ಆರಂಭಿಸಲಾಗುವುದು ಎಂದರು.

ಮೆಕ್ಕೆಜೋಳಕ್ಕೂ ಖರೀದಿ ಕೇಂದ್ರ ಆರಂಭಿಸುವಂತೆ ಕೇಳಿದ ಅಧ್ಯಕ್ಷರ ಸೂಚನೆಗೆ ಉತ್ತರಿಸಿದ ರುದ್ರೇಶಪ್ಪ, ಅನ್ನ ಭಾಗ್ಯ ಯೋಜನೆಯಡಿ ಮೆಕ್ಕೆಜೋಳವನ್ನು ವಿತರಿಸುವುದಾದರೆ ಮಾತ್ರ ಬೆಂಬಲ ಬೆಲೆಯಡಿ ಖರೀದಿ ಮಾಡುವಂತೆ ಸರಕಾರ ಸೂಚಿಸಿದೆ.

ನಮ್ಮ ಭಾಗದಲ್ಲಿ  ಮೆಕ್ಕೆಜೋಳವನ್ನು ಆಹಾರ ಧಾನ್ಯವಾಗಿ ಬಳಸದ ಕಾರಣ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ಆರಂಭಿಸಲು ಸಾಧ್ಯವಾಗುತ್ತಿಲ್ಲ ಎಂದರು. ಇದಕ್ಕೆ  ಸ್ಪಂದಿಸಿದ ಜಿಪಂ ಅಧ್ಯಕ್ಷರು, ಕಡಲೆ ಬೀಜ ಖರೀದಿಯೊಂದಿಗೆ ಮೆಕ್ಕೆಜೋಳಕ್ಕೂ ಬೆಂಬಲ ಬೆಲೆ ನಿಗದಿಗೊಳಿಸಿ ಖರೀದಿ ಕೇಂದ್ರ ಆರಂಭಿಸಲು ಅನುಮತಿ  ಕೋರಿ ಜಿಪಂ ಸಾಮಾನ್ಯ ಸಭೆಯ ಠರಾವು ಪಡೆದು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. 

Advertisement

ಜಿಲ್ಲೆಯಲ್ಲಿ ಕೃಷಿಹೊಂಡಗಳ ನಿರ್ಮಿಸುವಾಗ ಗುಣಮಟ್ಟ  ಕಾಯ್ದುಕೊಳ್ಳಲು ಆದ್ಯತೆ ನೀಡಬೇಕು. ತಾಪಂ ತ್ತೈಮಾಸಿಕ ಸಭೆ ನಡೆಯುವ ಸಂದರ್ಭದಲ್ಲಿ ಆಯಾ ತಾಲೂಕಿನ ಜಿಪಂ ಸದಸ್ಯರಿಗೆ ಕಡ್ಡಾಯವಾಗಿ ಸಭೆಯ  ನೋಟಿಸ್‌ ತಲುಪಿಸಬೇಕು. ಸಭೆಯ ನಂತರ ಅದರ ನಡವಳಿಗಳನ್ನೂ ತಲುಪಿಸಬೇಕು.

ಜಿಲ್ಲೆಯಾದ್ಯಂತ ಎಲ್ಲ ಗ್ರಾಪಂ ಶಾಲೆ, ಹಾಸ್ಟೆಲ್‌ಗ‌ಳು, ಅಂಗನವಾಡಿ ಸೇರಿದಂತೆ ಮತ್ತಿತರ ಸರಕಾರಿ ಕಟ್ಟಡಗಳ ಆವರಣದಲ್ಲಿ ಅಡುಗೆ ಕೈತೋಟ ನಿರ್ಮಿಸಬೇಕು. ಇನ್ಮುಂದೆ ಜಿಪಂ ಸಾಮಾನ್ಯ ಸಭೆಗಳಿಗೆ  ಪ್ರಮುಖ ಇಲಾಖೆಗಳ ತಾಲೂಕು ಮಟ್ಟದ ಅ ಧಿಕಾರಿಗಳನ್ನು ಸಹ ಆಹ್ವಾನಿಸಬೇಕು ಎಂದು ಸೂಚಿಸಿದರು. 

ಬಂಡಿವಾಡ ಮತ್ತು ಕೋಳಿವಾಡ ಗ್ರಾಪಂ  ಪಿಡಿಒ ಕಾರ್ಯ ವೈಖರಿಗಳ ಬಗ್ಗೆ ಅಸಮಾಧಾನ ಹೊರ ಹಾಕಿದ ಅಧ್ಯಕ್ಷರು, ಈ ಕೂಡಲೇ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸಿಇಒ ಅವರಿಗೆ  ಸೂಚನೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next