Advertisement

17ರಿಂದ ವಯೋಶ್ರೀ ಯೋಜನೆಗೆ ನೋಂದಣಿ ಶುರು: ಬೊಮ್ಮನಹಳ್ಳಿ

03:33 PM May 12, 2017 | Team Udayavani |

ಧಾರವಾಡ: ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಮೇ 17ರಿಂದ 21ರವರೆಗೆ ನೋಂದಣಿ ಕಾರ್ಯ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಹೇಳಿದರು. ಇಲ್ಲಿನ ಜಿಪಂ ಸಭಾಂಗಣದಲ್ಲಿಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಹಿರಿಯ ನಾಗರಿಕರಿಗೆ ಅಗತ್ಯವಾಗಿರುವ ಗಾಲಿ ಖುರ್ಚಿ, ಶ್ರವಣಯಂತ್ರ, ಕನ್ನಡಕ, ಊರುಗೋಲು, ವಾಕರ್‌, ಗೇಟಲ್‌, ಎಲ್‌ ಎಸ್‌ಬೆಲ್ಟ್, ಮೊಣಕಾಲು ಕ್ಯಾಪ್‌, ಹಲ್ಲಿನ ಸೆಟ್‌ ಮತ್ತಿತರ ಉಪಕರಣಗಳನ್ನು ಉಚಿತವಾಗಿ ವಿತರಿಸುವ ಸಲುವಾಗಿ ಬೇಡಿಕೆಯ ಸಮೀಕ್ಷೆ ನಡೆಸಲಾಗುತ್ತಿದೆ. 

ರಾಜ್ಯ ಸರಕಾರದ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯು ಕೇಂದ್ರ ಸರಕಾರ ಸ್ವಾಮ್ಯದ ಅಲಿಮೊ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯ ಕೈಗೊಳ್ಳುತ್ತಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತಮ್ಮ ಬಿಪಿಎಲ್‌, ಪಿಂಚಣಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಆಧಾರ್‌, ಪಡಿತರ ಪ್ರಮಾಣ ಪತ್ರದ ನಕಲು ಪ್ರತಿಗಳು ಹಾಗೂ ಎರಡು ಅವಧಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ನೋಂದಣಿ ಶಿಬಿರಗಳು ಸಾರ್ವಜನಿಕ ಆಸ್ಪತ್ರೆಗಳಲ್ಲಿ ನಡೆಯುತ್ತವೆ. ಅಲ್ಲಿ ಕುಡಿಯುವ ನೀರು ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಮೇ 17ರಂದು ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ, ಮೇ  18ರಂದು ಕಲಘಟಗಿಯ ತಾಲೂಕು ಆಸ್ಪತ್ರೆ, ಮೇ 19 ರಂದು ಧಾರವಾಡದ ಜಿಲ್ಲಾಸ್ಪತ್ರೆ, ಮೇ 20ರಂದು ನವಲಗುಂದ ತಾಲೂಕು ಆಸ್ಪತ್ರೆ ಹಾಗೂ ಮೇ 21ರಂದು ಕುಂದಗೋಳ ತಾಲೂಕು ಆಸ್ಪತ್ರೆಗಳಲ್ಲಿ ನೋಂದಣಿ ಕಾರ್ಯ ನಡೆಯಲಿದೆ.

ಬೇಡಿಕೆ ಆಧರಿಸಿ 2ರಿಂದ 3 ತಿಂಗಳ ಅವಧಿಯಲ್ಲಿ ಉಪಕರಣಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿ ಧಿಕಾರಿಗಳು ತಿಳಿಸಿದರು. ಇದೇ ವೇಳೆ ಮಾತನಾಡಿದ ಕುಟುಂಬ ಕಲ್ಯಾಣಾಧಿಕಾರಿ ಡಾ| ಆರ್‌.ಎಂ. ದೊಡ್ಡಮನಿ ಮಾತನಾಡಿ, ಈ ಎಲ್ಲ ನೋಂದಣಿ ಕೇಂದ್ರಗಳಲ್ಲಿ ದಂತ ವೈದ್ಯರು, ಕಿವಿ, ಮೂಗು, ಗಂಟಲು, ಮೂಳೆ, ಕೀಲು, ಕಣ್ಣಿನ ತಜ್ಞರು ಮತ್ತು ಆಡಿಯೋಲಾಜಿಸ್‌ rಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

Advertisement

ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ವಿಕಲಚೇತನರ ಕಲ್ಯಾಣಾಧಿಕಾರಿ ಕೆ.ಎಂ. ಅಮರನಾಥ, ಅಲಿಮೊ ಸಂಸ್ಥೆಯ ಸಹಾಯಕ ಮ್ಯಾನೇಜರ್‌ ಎ.ಶಿವಕುಮಾರ್‌, ಕೆ.ಸಿ. ಬೆಹೆರಾ ಮತ್ತಿತತರು ಇದ್ದರು. ಹಿರಿಯ ನಾಗರಿಕರು ಹೆಚ್ಚಿನ ಮಾಹಿತಿಗಾಗಿ ಮೊ.99164 21211 ಸಂಪರ್ಕಿಸಬಹುದು. 

Advertisement

Udayavani is now on Telegram. Click here to join our channel and stay updated with the latest news.

Next