Advertisement
ವಿಧಾನಸಭೆಯಲ್ಲಿ ಬುಧವಾರ ಸಮಿತಿ ಅಧ್ಯಕ್ಷೆ ಕೆ. ಪೂರ್ಣಿಮಾ ಅವರು ವರದಿ ಮಂಡಿಸಿದ್ದು, ಭಿಕ್ಷಾಟನೆ ಮಾಡುವವರನ್ನು ಬಂಧಿಸಿ ಅವರ ಮನವೊಲಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ಹೇಳಿದೆ. ತಿಳಿಸಲಾಗಿದೆ.
Related Articles
Advertisement
ಅಂಧ ಮಹಿಳೆಯರಿಗೆ ಜನಿಸುವ ಮಗುವಿನ ಆರೈಕೆ ಭತ್ತೆಯನ್ನು 2 ಸಾವಿರದಿಂದ 4 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಹಾಗೂ ಈ ಸೌಲಭ್ಯವನ್ನು ಕನಿಷ್ಠ 2 ಮಕ್ಕಳಿಗೆ ನೀಡುವಂತಾಗಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಮಾಸಾಶನ ಹೆಚ್ಚಿಸಿ :
ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿ ವೃದ್ಧಿಗಾಗಿ ಮೀಸಲಿಟ್ಟಿರುವ ಹಣ ಮೂರು ವರ್ಷಗಳಿಂದ ಸದ್ಬಳಕೆ ಯಾಗಿಲ್ಲ. ಆ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಮಿತಿ ಶಿಫಾರಸು ಮಾಡಿದೆ. ಪ್ರಸ್ತುತ ಶೇ.45ರಿಂದ 70ರಷ್ಟು ಅಂಗ ವೈಕಲ್ಯ ಹೊಂದಿರುವವರಿಗೆ ನೀಡ ಲಾಗು ತ್ತಿರುವ ಮಾಸಾಶನವನ್ನು 800 ರೂ.ದಿಂದ 3 ಸಾವಿರ ರೂ.ಗಳಿಗೆ ಹಾಗೂ ಶೇ.75ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರು ವವರಿಗೆ 6 ಸಾವಿರ ರೂ. ಮಾಸಾಶನ ನೀಡಲು ಶಿಫಾರಸು ಮಾಡಲಾಗಿದೆ.