Advertisement

ಮನಸು ಮುರಿಯುವ ಮುನ್ನ

06:43 PM Jun 26, 2021 | Team Udayavani |

ಪ್ರತಿಯೊಂದು ಜೀವಿಯೂ ಡೀಪೆಂಡಬಲ್‌ ಅನ್ನೋದು ಎಷ್ಟು ಸತ್ಯವೋ ಪ್ರತಿ ಜೀವಿ ನಾನು ಡೀಪೆಂಡಬಲ್‌ ಅಲ್ಲ ಅನ್ನೋದನ್ನು ಫ್ರೂವ್‌ ಮಾಡೋಕೆ ತಯಾರಾಗಿ ಇರುತ್ತಾರೆ ಎಂಬುದು ಅಷ್ಟೇ ಸತ್ಯ. ಹಾಗಿದ್ದಾಗ ನಾವು ಹಿಂದಿನ ವರ್ಷದಿಂದ ಅನುಭವಿಸುತ್ತಿರುವ ಒಂದು ವೈರಸ್‌ ಗೆ ಎಷ್ಟೋ ಸಲ ಧನ್ಯವಾದ ಹೇಳಲೇಬೇಕು.

Advertisement

ಯಾಕೆಂದರೆ ಎಷ್ಟೋ ಕುಟುಂಬ ಒಟ್ಟಾಗಿದೆ, ಮನೆ ಅಂಗಳದಲ್ಲಿ ಹೂವು ಅರಳಿದೆ, ಅಪ್ಪನಿಗೆ ಮಗನೇ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾನೆ. ಮಗಳು ಅಮ್ಮನಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡುತ್ತಾಳೆ. ಅಂಗಳದಲ್ಲಿರುವ ಗಿಡಗಳು ಮಾನವನ ಸಹಜ ಆಕರ್ಷಣೆಗೆ ಒಳಗಾಗಿ ಆನಂದದಿಂದ ಓಲಾಡುತ್ತಿವೆ. ಅದೇ ಸಮಯದಲ್ಲಿ ಹಲವಾರು ಒತ್ತಡಗಳು, ಮನೆ ಮಂದಿಯ ಅನಾರೋಗ್ಯ, ಸಾವು ನೋವುಗಳು, ಮನೆಯಲ್ಲೇ ಕೆಲಸ ಮಾಡುವ ಸಮಯದಲ್ಲಿ ಆಗುವ ಹಲವಾರು ತೊಂದರೆಗಳು ನಮ್ಮನ್ನು ಅಷ್ಟೇ ಹೈರಾಣ ಮಾಡಿರುವುದು ಸುಳ್ಳಲ್ಲ. ಹಾಗಾದರೆ, ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ ? ಕಾಲಾಯಾ ತಸ್ಮೆಃ ನಮಃ ಎಂಬ ಹಳೆ ವಾಕ್ಯ ನೆನಪಿಗೆ ತಂದುಕೊಂಡು, ಹೊಸ ಸೂರ್ಯೋದಯ ನಮ್ಮ ಪಾಲಿಗೆ ಇದೆಯೆಂಬ ಕನಸು ಪುನಃ ಕಟ್ಟಿಕೊಂಡು ಬದುಕುವುದು ಅನಿವಾರ್ಯ ಕರ್ಮ ನಮಗೆ.

ಒಳಿತು ಮಾಡು ಮನುಜ ನೀ ಇರೋದು ಮೂರು ದಿವಸ… ನೆನಪಿಗೆ ಬರಲಾರದು ಇದೊಂಥರಾ ಫಿಲಾಸಫಿ. ಇವತ್ತಿನ ಸಮಸ್ಯೆಗೆ ಹೆದರಿ ಮುಂದಿನ ದಿನಗಳನ್ನು ಕಳೆದುಕೊಳ್ಳುವುದಕ್ಕಿಂತ ನಮ್ಮದೇ ಕುಟುಂಬ ಒಂದು ಕಾಲದಲ್ಲಿ ಹೇಗಿತ್ತು, ಎಷ್ಟು ಕಷ್ಟವಿತ್ತು, ನಮ್ಮದೇ ಅಜ್ಜ, ಅಜ್ಜಿ, ನಮ್ಮ ಪಾಲಕರು ಹೇಗೆ ನಮ್ಮನ್ನು ರಕ್ಷಣೆ ಮಾಡಿದ್ದರು. ಅವರೇ ಇಲ್ಲ ಎಂದಿದ್ದರೆ ನಾವು ಇರುತ್ತಿದ್ದೇವೆಯೇ ? ಹೀಗೆ ಹಲವಾರು ಪ್ರಶ್ನೆಗಳನ್ನು ನಿಮ್ಮ ನಿಮ್ಮ ಹಿರಿಯರೊಂದಿಗೆ ಸಂವಹನ ನಡೆಸಿ ನೈತಿಕ ಧೈರ್ಯ ನೀವು ಪಡೆದು, ಹೇಳಿಕೊಂಡ ಸಮಾಧಾನ ಅವರಿಗೆ ಕೊಟ್ಟರೆ ಅದಕ್ಕಿಂತ ಹೆಚ್ಚಿನ ನಿಮ್ಮ ಕುಟುಂಬದ ರಕ್ಷಣೆ ಸಾಧ್ಯವಿಲ್ಲ.

Family is a place where those who cannot live in heaven on earth deserve nothing else ಇದೇ ಒಂದು ಸಿರಿಯಲ್‌ ತರಹ ಮಾಡಿದರೆ ನಿಮಗೆ ನಿಮ್ಮ ಕುಟುಂಬದ ಒಳಹೊರಗು, ಒಳಜಗಳಗಳು ಎಲ್ಲವೂ ತಿಳಿಯಬಹುದು. ಆದರೆ, ಇದಕ್ಕಿಂತ ಒಳ್ಳೆಯ ಜಾಗ ಬೇರೆಲ್ಲೂ ಸಹ ಇಲ್ಲ ಅನ್ನೊದನ್ನು ಒಪ್ಪಲೇಬೇಕಾಗುತ್ತದೆ. ನಿಮ್ಮದೇ ಹಲವಾರು ವೈಯಕ್ತಿಕ ಸಮಸ್ಯೆ ಈಗೀಗ ಜಾಸ್ತಿ ಆಗಿರಬಹುದು.

ಮಾನಸಿಕ, ದೈಹಿಕವಾಗಿ ನೀವು ಸಿದ್ಧರಿಲ್ಲದೆ ಎಷ್ಟೋ ಜನ ಕೆಲಸ ಕಳೆದುಕೊಂಡಿರಬಹುದು, ದಿನದ ಇಪ್ಪತ್ತು ಗಂಟೆ ಕೆಲಸ ಮಾಡುವವರು ಇರಬಹುದು, ಸಮಯ ಅನ್ನೊದು ಡಾಲರ್‌ ಲೆಕ್ಕದಲ್ಲಿ ಸಾಲ ಸಿಗಬಹುದೇ ಎನ್ನುವ ಆಸೆಗೆ ಮನ ವಾಲುತ್ತಿರಬಹುದು. ಇದೇ ಪರಿಸ್ಥಿತಿ ನಿಮ್ಮ ಅಜ್ಜಂದಿರ ಕಾಲದಲ್ಲಿತ್ತು. ಅವರು ನಿಮ್ಮ ಹಾಗೆ ಜರ್ಜರಿತವಾಗಿದ್ದರೆ ನೀವೇ ಇರುತ್ತಿರಲಿಲ್ಲ ಎಂಬ ಸತ್ಯ ನಿಮ್ಮ ಕಣ್ಣೆದರು ಬಂದಾಗ ಕೊರೊನಾ ಎಂಬ ಮಾಹಾಮಾರಿ ಹೊಸದಾದ ಅಥವಾ ಆಕಾಶದ ಮೇಲಿಂದ ಉದುರಿದ ಸಮಸ್ಯೆ ಅಲ್ಲ.ಪ್ರೀತಿ ಶತಮಾನಕ್ಕೆ ಇಂತಹ ಒಂದೊಂದು ರೋಗಗಳು ಬಂದಿರುವ ಇತಿಹಾಸ ಇದೆ.

Advertisement

ನಾವೆಲ್ಲರೂ ಕುಟುಂಬದ ಹಿರಿಯರು ಸೇರಿ ಕೊರೊನಾ ಒಪ್ಪಿಕೊಂಡರೇ ಅರ್ಧದಷ್ಟು ಸಮಸ್ಯೆ ಪರಿಹಾರ ಆಗುತ್ತದೆ. ಸಣ್ಣ ಉದಾಹರಣೆ ನೀವು ನಿಮ್ಮ ಗೆಳೆಯ/ತಿಗೆ ಮೆಸೇಜ್‌ ಮಾಡುತ್ತೀರಿ, ಉತ್ತರ ಬರೋದಿಲ್ಲ. ಅವನು/ಳು ಬ್ಯುಸಿ ಇರಬೇಕು ಅಂದುಕೊಳ್ಳುತ್ತೀರಿ. ಅದೇ ಮೆಸೇಜ್‌ ನಿಮ್ಮ ಕುಟುಂಬದ ಸದಸ್ಯರಿಗೆ ಹೇಳುತ್ತೀರಿ. ಅಲ್ಲಿಂದಲೂ ಉತ್ತರ ಬರೋದಿಲ್ಲ. ಆಗ ನಿಮ್ಮ ವರ್ತನೆ ಹೇಗಿರುತ್ತದೆ? ಮನೆಯವರೇ ಹೀಗೆ ಮಾಡಿದರೆ ಎಂಬ ಭಾವನೆ ಬಂದು ನಿಮ್ಮಲ್ಲಿ ನೆಗೆಟಿವ್‌ ಆಲೋಚನೆ ಬಂದಾಗ ನಿಮ್ಮನ್ನು ನೀವು ಅವಲೋಕನ ಮಾಡಿಕೊಂಡಾಗ ನೀವು ಯಾರಿಗೆ ಹೆಚ್ಚು ಒತ್ತು ಕೊಡಬೇಕು ಎಂಬುದು ಗೊತ್ತಾಗುತ್ತದೆ.

ಹಾಗಂತ ಗೆಳೆಯ/ತಿ ಬೇಡ ಅಂತಲ್ಲ. ಆದರೆ, ಅವರಿಗೂ ಕುಟುಂಬ ಇದೆ, ಅವರಲ್ಲಿ ಶೇ. 85ರಷ್ಟು ಜನ ಅವರವರ ಕುಟುಂಬದಲ್ಲಿ ದೊಡ್ಡ ಜವಾಬ್ದಾರಿ ಹೊತ್ತುಕೊಂಡಿರುತ್ತಾರೆ. ಮುಂಬಯಿ ಅಲ್ಲಿರುವ ಬಹುತೇಕ ಜನರು ಅಂದರೆ ಮಹಾರಾಷ್ಟ್ರೀಯರಲ್ಲದವರು ತಮ್ಮ ಗೆಳೆಯ/ಗೆಳತಿಯರು ಮಹಾರಾಷ್ಟ್ರದವರೇ ಇರುತ್ತಾರೆ. ನೀವು ಅವರಿಗೆ ಅನಿವಾಸಿ, ನಿಮ್ಮ ಕುಟುಂಬ ಬೇರೆಲ್ಲೋ ಇರುತ್ತದೆ, ಹೊಟ್ಟೆಪಾಡಿಗೆ, ಕೆಲಸಕ್ಕೆ, ಅನುಭವಕ್ಕೆ, ವಿದ್ಯಾಭ್ಯಾಸಕ್ಕೆ ಹೋದವರು ನೀವು. ಅವರು ಅವರ ಕುಟುಂಬ ಬಿಟ್ಟು ನಿಮ್ಮ ಜತೆ ಪಾರ್ಟಿಗೆ, ಎಂಜಾಯ್‌ಮೆಂಟ್‌ಗೆ ಬರಬಹುದು. ಆದರೆ, ನೀವು ?

*ಶಾರದಾ ಭಟ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next