Advertisement
ಬೈಕ್ ಸರ್ವೀಸ್ ನಿಮ್ಮ ಬೈಕ್ ಸುಸ್ಥಿತಿಯಲ್ಲಿದ್ದರೂ ಒಂದು ಬಾರಿ ಮೆಕ್ಯಾನಿಕ್ ಬಳಿ ಒಯ್ದು ಅಥವಾ ನಿಮಗೇ ತಿಳಿದಂತೆ ಫಿಟೆ°ಸ್ ಪರೀಕ್ಷೆ ನಡೆಸುವುದು ಉತ್ತಮ. ಬೈಕ್ ಆಯಿಲ್ ಬದಲಾಯಿಸಿ, ಬ್ರೇಕ್ ಶೂ, ಕೇಬಲ್‌ಗಳನ್ನು ಬೇಕಾದರೆ ಬದಲಾಯಿಸಿ. 200 ಸಿಸಿ ಮೇಲ್ಪಟ್ಟ ಬೈಕ್ ಆಗಿದ್ದರೆ ಎಂಜಿನ್ ಕೂಲೆಂಟ್‌ಗಳನ್ನು, ಬ್ರೇಕ್ ಆಯಿಲ್‌ಗಳನ್ನು ಬದಲಾಯಿಸಿ. ಸ್ಪಾರ್ಕ್ ಪ್ಲಗ್, ಏರ್‌ಫಿಲ್ಟರ್, ಎಲೆಕ್ಟ್ರಿಕಲ್ ಸಲಕರಣೆಗಳನ್ನು, ಲೈಟ್ ಪರಿಶೀಲಿಸಿ, ಚೈನ್ ಶುಚಿಗೊಳಿಸಿ ಬಿಗಿ ಗೊಳಿಸಿ. ಟಯರ್ ಚೆನ್ನಾಗಿದೆಯೇ? ಎಂದೂ ಪರಿಶೀಲಿಸಿ. ಇಷ್ಟೆಲ್ಲ ಆದ ಬಳಿಕ ಬೈಕ್ ಅನ್ನು 2-3 ಕಿ.ಮೀ. ಓಡಿಸಿ ಖಚಿತ ಪಡಿಸಿಕೊಳ್ಳಿ.
ದೂರದ ಪ್ರಯಾಣದ ವೇಳೆ ಬೈಕ್‌ಗೆ ಅಗತ್ಯವಾದ ಕ್ಲಚ್ ವಯರ್, ಆ್ಯಕ್ಸಲರೇಟರ್ ಕೇಬಲ್, ಚೈನ್ ಲಿಂಕ್, ಫ್ಯೂಸ್, ಪಂಕ್ಚರ್ ಕಿಟ್, ಟಾರ್ಚ್, ಪುಟ್ಟ ಚಾಕು, 4 ಮೀಟರ್ ರೋಪ್ ಇತ್ಯಾದಿಗಳನ್ನು ಇರಿಸಿಕೊಳ್ಳುವುದು ಉತ್ತಮ. ಪ್ರವಾಸದ ಮುನ್ನ ನೀವು ಹೊಸ ಕೇಬಲ್‌ಗಳನ್ನು ಬದಲಾಯಿಸಿದ್ದರೂ, ಇನ್ನೊಂದಷ್ಟು ಅಗತ್ಯ ಬಿಡಿ ಭಾಗಗಳನ್ನು ಇಟ್ಟುಕೊಳ್ಳುವುದು ಪ್ರಯೋಜನಕಾರಿ. ಬೈಕ್ ಪ್ರವಾಸದ ವೇಳೆ ನಿತ್ಯದ ಬಳಕೆ ವಸ್ತುಗಳು, ಬಟ್ಟೆ ಇತ್ಯಾದಿಗಳನ್ನು ತೆಗೆದುಕೊಳ್ಳುವಾಗ ಸರಂಜಾಮುಗಳು ಅತೀ ಭಾರವಿರದಂತೆ ಗಮನಿಸಿ. ಜತೆಗೆ ಸರಂಜಾ ಮುಗಳನ್ನು ಸಮಭಾರವಿರುವಂತೆ ಎರಡೂ ಬದಿಗೆ ಬ್ಯಾಗ್‌ಗಳಲ್ಲಿ ಹಾಕುವುದು/ಕಟ್ಟುವುದು ಉತ್ತಮ. ಇದರಿಂದ ಬ್ಯಾಲೆನ್ಸ್ ಅನುಕೂಲ.
Related Articles
ಪ್ರಯಾಣದ ವೇಳೆ ಎಚ್ಚರಿಕೆ ವಹಿಸಬೇಕಾದ ಅಂಶವೆಂದರೆ ಆಹಾರ. ಭಿನ್ನ ಹವಾಮಾನ, ಭಿನ್ನ ಪ್ರದೇಶಗಳ ಮೂಲಕ ಸಂಚರಿಸುವುದರಿಂದ ಕಂಡ ಕಂಡಲ್ಲಿ ತಿನ್ನುವ ಅಭ್ಯಾಸ ಉತ್ತಮವಲ್ಲ. ಇದರಿಂದ ಆರೋಗ್ಯ ಹದಗೆಟ್ಟು ಸಮಸ್ಯೆ ಯಾಗಬಹುದು. ಸಾಕಷ್ಟು ನೀರು ಇರಲಿ. ಪೌಷ್ಟಿಕಾಂಶಯುಕ್ತ ಆಹಾರ ಅಗತ್ಯ. ಒಣಹಣ್ಣು, ಹಣ್ಣುಗಳನ್ನು ಇಟ್ಟುಕೊಳ್ಳಬಹುದು.
Advertisement
ಚಾಲನೆ ವಿಧಾನಬೈಕ್ ಪ್ರವಾಸ ಎಂದರೆ ಅದು ವೇಗದ ಚಾಲನೆ/ಬೈಕ್ ಸ್ಟಂಟ್ ಪ್ರದರ್ಶನದ ಸಮಯವಲ್ಲ. ಬೈಕ್ ವೇಗ ಸಾಮಾನ್ಯವಾಗಿರಲಿ. ಹೈವೇಗಳಲ್ಲಿ ಒಂದೇ ಸ್ಪೀಡ್‌ಗಳಲ್ಲಿ ಓಡಿಸಲು ಯತ್ನಿಸಿ. ಸಂಚಾರಿ ನಿಯಮ ತಪ್ಪದೆ ಪಾಲಿಸಬೇಕು. ರಸ್ತೆ ಬದಿ ನಿಲ್ಲಿಸಿದ ವೇಳೆ, ಬೈಕ್ ಹಾಳಾದ ವೇಳೆ ಪಾರ್ಕಿಂಗ್ ಲೈಟ್‌ಗಳನ್ನು ಕಡ್ಡಾಯವಾಗಿ ಉರಿಸ ಬೇಕು. ಸಿಗ್ನಲ್‌ಗಳನ್ನು ಲೈಟ್ ಮತ್ತು ಕೈಗಳನ್ನು ಬಳಕೆ ಮಾಡಿ ನೀಡಬೇಕು. ಗ್ರಾಮೀಣ, ಘಾಟಿ ರಸ್ತೆಗಳಲ್ಲಿ ಎಚ್ಚರಿಕೆಯಿಂದ ಚಲಾಯಿಸಬೇಕು. ಸಾಮರ್ಥ್ಯಕ್ಕೆ ಅನು ಗುಣವಾಗಿ ದಿನಕ್ಕೆ ಗರಿಷ್ಠ 350-400 ಕಿ.ಮೀ. ಚಾಲನೆ, 8 ತಾಸು ವಿಶ್ರಾಂತಿ ಉತ್ತಮ. ರೈಡಿಂಗ್ ಗಿಯರ್
ಬೈಕ್ ಪ್ರವಾಸಕ್ಕೆ ಬೈಕ್ ಸಿದ್ಧವಾದರೆ ಸಾಲದು. ನಾವೂ ಸಿದ್ಧವಾಗಿರಬೇಕು. ಸುರಕ್ಷತೆ ದೃಷ್ಟಿಯಿಂದ ರೈಡಿಂಗ್ ಗಿಯರ್ ಹಾಕುವುದು ಉತ್ತಮ. ಅಪಘಾತವಾದರೆ ಇದು ನಮ್ಮನ್ನು ರಕ್ಷಿಸುತ್ತದೆ. ಉತ್ತಮ ರೈಡಿಂಗ್ ಗಿಯರ್‌ಗಳು ಸುಮಾರು 8 ಸಾವಿರ ರೂ.ಗಳಿಂದ ಆರಂಭವಾಗುತ್ತವೆೆ. ಹಾಗೆಯೇ ಉತ್ತಮ ಹೆಲ್ಮೆಟ್, ಪ್ಯಾಂಟ್, ಮೊಣಕಾಲುಗಳಿಗೆ ಏಟಾಗದಂತೆ ಫೈಬರ್ ಕವರ್‌ಗಳು, ಮುಖಕ್ಕೆ ಮಾಸ್ಕ್, ಗ್ಲೌಸ್, ಉತ್ತಮ ಕನ್ನಡಕ, ಉತ್ತಮ ಶೂ ಕೂಡ ಅಗತ್ಯ. - ಈಶ