Advertisement

ಸಮೀಕ್ಷೆ ನಡೆಸಿ ಸಾವು

12:21 AM May 16, 2019 | Team Udayavani |

ಕೌಲಾಲಂಪುರ: “ನಾನು ಬದುಕ ಬೇಕೇ, ಸಾಯಬೇಕೇ’ ಎಂಬ ಪ್ರಶ್ನೆಯನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದ 16ರ ಬಾಲಕಿಯೊಬ್ಬಳು, “ಸಾಯಬೇಕು’ ಎಂಬ ಉತ್ತರಗಳೇ ಹೆಚ್ಚು ಬಂದಿದ್ದರಿಂದ ಆತ್ಮಹತ್ಯೆಗೆ ಶರಣಾದ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಇನ್‌ಸ್ಟಾಗ್ರಾಂನಲ್ಲಿ ವಿವಿಧ ವಿಚಾರಗಳಿಗೆ ಸಂಬಂಧಿಸಿ ಸಮೀಕ್ಷೆಗಳು ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಅಂತೆಯೇ ಈ ಬಾಲಕಿ ತನ್ನ ಬದುಕನ್ನು ಮುಂದುವರಿಸುವ ಅಥವಾ ಕೊನೆಗೊಳಿಸುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಿದ್ದಾಳೆ.
ಶೇ. 69ರಷ್ಟು ಮಂದಿ “ಸಾಯಬೇಕು’ ಎಂದಿದ್ದರೆ, ಉಳಿದವರು “ಬದುಕಬೇಕು’ ಎಂದಿದ್ದಾರೆ. ಹೀಗಾಗಿ, ಆಕೆ ಸಾವನ್ನು ಆಯ್ದು ಕೊಂಡಿದ್ದಾಳೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next