Advertisement
ಬುಧವಾರ ರಾತ್ರಿ ಸುಮಾರು 8 ಗಂಟೆಗೆ ವೇಳೆಗೆ ಅಗಸನಹಳ್ಳಿ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗೆ ಪೋನ್ ಮಾಡಿದ್ದಾರೆ. ಕತ್ತಲಾಗಿದ್ದರಿಂದ ಗ್ರಾಮಸ್ಥರು ಬೈಕ್ ಹಾಗೂ ಅನೇಕ ವಾಹನಗಳ ಜೊತೆ ನೂರಾರು ಸಂಖ್ಯೆಯಲ್ಲಿ ಬಂದು ಕರಡಿಯನ್ನು ಹಿಂಬಾಲಿಸುತ್ತಿದ್ದರು. ಇದನ್ನ ತಿಳಿದ ಎಮ್ಮೆಹಟ್ಟಿ ಗ್ರಾಮಸ್ಥರು ಇನ್ನೊಂದು ಕಡೆಯಿಂದ ಕರಡಿ ಶೋಧನೆ ಇಳಿದರು.
Related Articles
Advertisement
ಗುರುವಾರ ಮಧ್ಯಾಹ್ನ 12 ಗಂಟೆ ವೇಳೆಯಲ್ಲಿ ಎಮ್ಮೆಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಕಾಣಿಸಿಕೊಂಡಿದ್ದು, ಇಲ್ಲಿಗೂ ಸಹ ಆಗಮಿಸಿ ಅಧಿಕಾರಿಗಳು ರಸ್ತೆಯಲ್ಲಿಯೇ ಜೀಪಿನಲ್ಲಿ ಕುಳಿತುಕೊಂಡು ಗ್ರಾಮಸ್ಥರೊಂದಿಗೆ ಕಾಲಾ ಹರಣ ಮಾಡಿ ಕರಡಿ ಪಲಾಯನ ಮಾಡಿದ ನಂತರ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಕರಡಿ ಹಿಡಿಯುವುದಕ್ಕೆ ಬರುವ ಅರಣ್ಯ ಅಧಿಕಾರಿಗಳು ನೆಂಟರ ಮನೆಗೆ ಬರುವಂತೆ ಬರುತ್ತಿದ್ದು, ಕೈಯಲ್ಲಿ ಯಾವುದೇ ಬಲೆಯಾಗಲಿ ಅಥವಾ ಮತ್ತು ಬರುವ ಚುಚ್ಚುಮದ್ದು ಹಾಕಿ ಹಿಡಿಯಬಹುದು. ಆದರೆ ಉಡಾಫೆ ಉತ್ತರ ನೀಡುತ್ತಾ ಎರಡು ಗ್ರಾಮಸ್ಥರ ಜೀವ ಜೊತೆಗೆ ಆಟವಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಈಗಾಗಲೇ ಅಡಿಕೆ ಬರದಿಂದ ಅಡಿಕೆ ಕ್ಯೂಯ್ಯಲು ಪ್ರಾರಂಭವಾಗಿದ್ದು, ಗ್ರಾಮದಿಂದ ಹೊರಗಡೆ ಅಡಿಕೆ ಮನೆಗಳಿದ್ದು, ಅಡಿಕೆ ಮನೆಯಲ್ಲಿ ಒಬ್ಬೊಬ್ಬರೇ ಇರುವ ಪರಿಸ್ಥಿತಿ ಇರುತ್ತದೆ. ಮಲಗಿದ ನಂತರ ಕರಡಿ ದಾಳಿ ನಡೆಸಿದರೇ ಅವರ ಪರಿಸ್ಥಿತಿ ಊಹಿಸಿಕೊಳ್ಳಲು ಸಹ ಸಾಧ್ಯವಾಗುವುದಿಲ್ಲ. ಅಕಸ್ಮಾತ್ ಪ್ರಾಣ ಕಳೆದುಕೊಂಡರೆ ಅರಣ್ಯ ಇಲಾಖೆಯವರು ನಮ್ಮ ಪ್ರಾಣವನ್ನು ಹಿಂದಿರುಸಿ ಕೊಡುವರೇ ಎಂಬುದು ವೈ. ಮಲ್ಲೇಶಪ್ಪ ರವರ ಪ್ರಶ್ನೆಯಾಗಿದೆ.
ಆದ್ದರಿಂದ ಕೂಡಲೇ ಅರಣ್ಯ ಇಲಾಖೆಯವರು ಕರಡಿಯನ್ನು ಆದಷ್ಟು ಬೇಗ ಹಿಡಿದು ಕಾಡಿಗೆ ರವಾನಿಸಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ.