Advertisement

ಗ್ರಾಮಾಭಿವೃದ್ಧಿಗೆ ಶ್ರಮಿಸಿ: ಜೈನ್‌

05:50 PM Feb 14, 2021 | Shreeraj Acharya |

ಇಂಡಿ: ಗ್ರಾಮ ಪಂಚಾಯತ್‌ಗೆ ಆಯ್ಕೆಯಾದ ಎಲ್ಲ ಪ್ರತಿನಿ ಧಿಗಳು ಪಕ್ಷಪಾತ, ರಾಜಕೀಯ ಮಾಡದೆ ಗ್ರಾಮದ ಸವಾಂಗೀಣ ಅಭಿವೃದ್ಧಿಗೆ
ಬದ್ಧರಾಗಿ ಗ್ರಾಮೋದ್ಧಾರ ಮಾಡಬೇಕು ಎಂದು ಉದ್ಯಮಿ ಅನಂತ ಜೈನ್‌ ಹೇಳಿದರು.

Advertisement

ಶನಿವಾರ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ನೂತನವಾಗಿ ಗ್ರಾಮ ಪಂಚಾಯತ್‌ಗೆ ಆಯ್ಕೆಯಾದ ಸರ್ವ ಸದಸ್ಯರಿಗೆ, ಅಧ್ಯಕ್ಷ-ಉಪಾಧ್ಯಕ್ಷರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮಗಳಲ್ಲಿ ಎಲ್ಲರೂ ಪ್ರತಿ ದಿನ ಕೂಡಿಯೇ ಇರಬೇಕಾಗುತ್ತದೆ. ಹೀಗಾಗಿ ಯಾರಲ್ಲೂ ದ್ವೇಷ ಭಾವನೆ ಇಟ್ಟುಕೊಳ್ಳದೆ ಸರ್ವ ಜನರನ್ನೂ ಒಂದೇ
ರೀತಿ ಕಾಣಬೇಕು. ನಿಜವಾದ ಬಡವರು, ಅನಾಥರು, ಸೌಲಭ್ಯ ವಂಚಿತರನ್ನು ಗುರುತಿಸಿ ಅವರಿಗೆ ಮೇಲೆತ್ತುವ ಕಾರ್ಯ ಮಾಡಬೇಕು ಎಂದರು. ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿರುತ್ತವೆ. ಅವೆಲ್ಲವನ್ನೂ ಹಂತ-ಹಂತವಾಗಿ ಪರಿಹರಿಸಿಕೊಳ್ಳಬೇಕು. ನಿಮ್ಮ ಇಂಗಳಗಿ ಗ್ರಾಪಂ ರಾಜ್ಯದಲ್ಲಿಯೇ ಮಾದರಿ ಪಂಚಾಯತ್‌ ಆಗುವಂತೆ ಕೆಲಸ ಮಾಡಿ ತೋರಿಸಿ ಎಂದು ನೂತನ ಸದಸ್ಯರಿಗೆ ಸಲಹೆ ನೀಡಿದರು.

ಈರನಗೌಡ ಬಿರಾದಾರ, ಹುಸೇನಿ ಅಹಿರಸಂಗ, ಜಗುಗೌಡ ಬಿರಾದಾರ, ಅಪ್ಪಾಸಾಹೇಬ ಪವಾರ, ಸಚಿನ ರಾಠೊಡ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಹನುಮಂತ ಗುಡ್ಲ, ಮಂಜು ಪಾಟೀಲ, ದೋಂಡಿಬಾ ಮಾನೆ, ಸುನೀಲ ದಶವಂತ, ಖಾಜು ಹೊನ್ನಕೋರೆ, ಶಿವು ಶಿವಗದ್ದಗಿ, ಕಲ್ಲಪ್ಪ
ಬಾರಾಣಿ, ಸಚಿನ್‌ ರಾಠೊಡ, ಯಲ್ಲಪ್ಪ ಪೂಜಾರಿ, ಶಟ್ಟೆಪ್ಪ, ಪ್ರಭು ವಾಲೀಕಾರ, ರಾಜು ಜಾಧವ, ಲಕ್ಷ್ಮಣ ಪೂಜಾರಿ ರಾಜು ಬಾರಾಣೆ ಸೇರಿದಂತೆ ಮತ್ತಿತರರು ಇದ್ದರು.

ಓದಿ : ‘ಪ್ರೇಮಿಗಳ ದಿನ’… ಸಿಂಗಲ್ ಇರೋರಿಗೆ ಚಾರ್ ಮಿನಾರ್ ಚೆಲುವೆಯ ಬಿಗ್ ಗಿಫ್ಟ್…ಏನದು ?

Advertisement
Advertisement

Udayavani is now on Telegram. Click here to join our channel and stay updated with the latest news.

Next