Advertisement

ಸೂಕ್ಷ್ಮತೆ ಇದ್ದ ಪತ್ರಕರ್ತನಿಗೆ ಸಮಸ್ಯೆಗಳ ಅರಿವು

05:18 PM Feb 14, 2021 | Shreeraj Acharya |

ವಿಜಯಪುರ: ಸಮಾಜದಲ್ಲಿರುವ ಲೋಪ, ಸಮಸ್ಯೆಗಳನ್ನು ಸೂಕ್ಷ್ಮ ಸಂವೇದನೆಯಿಂದ ಗ್ರಹಿಸುವ ಪತ್ರಕರ್ತರಿಗೆ ಮಾತ್ರ ಸಮಾಜದ ಅಭಿವೃದ್ಧಿ, ಗ್ರಾಮಗಳ ಪ್ರಗತಿಯ ಚಿಂತನೆ ಸಾಧ್ಯ ಎಂದು ಮುಧೋಳ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ ಹೇಳಿದರು.

Advertisement

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ರಜತ ಮಹೋತ್ಸವ ಸಮಿತಿ ದತ್ತನಿ ಧಿ ಉಪನ್ಯಾಸ ಮಾಲಿಕೆ ಅಡಿಯಲ್ಲಿ ಗ್ರಾಮೀಣ ಅಭಿವೃದ್ಧಿ ವರದಿಗಾರಿಕೆಯ ಸವಾಲುಗಳು ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜದಲ್ಲಿರುವ ಮೂಢನಂಬಿಕೆ ಹೋಗಲಾಡಿಸಲು ಪತ್ರಕರ್ತನಿಗೆ ವೈಜ್ಞಾನಿಕ ಮನೋಭಾವನೆ ಬೇಕು. ಇಂತ ಸಂದರ್ಭದಲ್ಲಿ ವರಿದಿಗಾರರು ಮೂಢನಂಬಿಕೆಗಳ ವಿರುದ್ಧ ಹೋರಾಟಕ್ಕೂ ಸಿದ್ಧವಾಗಬೇಕು. ಆಗಲೇ ವೈಜ್ಞಾನಿಕ ಮನೋಭಾವ ಸಮಾಜ ನಿರ್ಮಾಣ ಸಾಧ್ಯ ಎಂದು ಕಿವಿಮಾತು ಹೇಳಿದರು.

ಪತ್ರಿಕೆಗಳು ಸಮಾಜದ ಧ್ವನಿ ಇದ್ದಂತೆ. ಹೀಗಾಗಿ ಪತ್ರಕರ್ತರೂ ಜನರ ಸಮಸ್ಯೆ, ಜೀವನಶೈಲಿಯ ಬಗ್ಗೆ ಬರೆಯುವಾಗ ಯಾರ ಭಾವನೆಗೂ ಧಕ್ಕೆ ಆಗದಂತೆ ಎಚ್ಚರಿಕೆ ವಹಿಸಬೇಕು. ವರದಿಗಾರ ಯಾವಾಗಲು ಸಮಾಜವನ್ನು ತನ್ನ ಮನೆಯಂತೆ ಭಾವಿಸಿ ವರದಿ ಮಾಡಬೇಕು.
ಸಮಾಜ ಸುಧಾರಣೆಯತ್ತಲೇ ಚಿತ್ತ ಇರಬೇಕು. ಮಾಧ್ಯಮಗಳಲ್ಲಿ ಬರುವ ವರದಿಗಳು ಸಮಾಜದಲ್ಲಿ ತ್ವರಿತ ಪರಿಣಾಮ ಬೀರುತ್ತವೆ. ಹೀಗಾಗಿ
ವರದಿಗಾರ ಪ್ರತಿಯೊಂದು ಸೂಕ್ಷ್ಮತೆ ಅರಿತು ವರದಿ ಮಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಮಾತನಾಡಿ, ಸ್ವಯಂ ಪರಿಶ್ರಮ ಇಲ್ಲದೇ ಅತ್ಯುತ್ತಮ ಫಲ ಸಿಗಲು ಸಾಧ್ಯವಿಲ್ಲ. ಸರಳವಾಗಿ ಸಿಗುವುದಕ್ಕೆ ಹೆಚ್ಚಿನ ಭವಿಷ್ಯವೂ ಇಲ್ಲ. ಹೀಗಾಗಿ ಆಸಕ್ತಯಿಂದ ಕಲಿಯಲು ಮಹಿಳಾ ವಿಶ್ವವಿದ್ಯಾಲಯದಲ್ಲಿ ಉತ್ತಮ
ವಾತಾವರಣವಿದೆ. ಇದಕ್ಕಾಗಿ ಲಭ್ಯ ಇರುವ ಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ
ರೂಪಿಸಿಕೊಳ್ಳುವಂತೆ ಮಾರ್ಗದರ್ಶನ ಮಾಡಿದರು.

Advertisement

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ತಹಮೀನಾ ಕೋಲಾರ ಪ್ರಾಸ್ತಾವಿಕ ಮಾತನಾಡಿದರು.
ಮಾಯಾ ಹೊಸಟ್ಟಿ ನಿರೂಪಿಸಿದರು. ಅರ್ಚನಾ ಸೂರ್ಯವಂಶಿ ಸ್ವಾಗತಿಸಿದರು. ಶುಭಲಕ್ಷ್ಮೀ ಹೊಸಮನಿ ಪರಿಚಯಿಸಿದರು. ವಿನುತಾ ಹವಾಲ್ದಾರ್‌ ವಂದಿಸಿದರು.

ಓದಿ : ಒಂದು ವರ್ಷದೊಳಗೆ ರಾಜ್ಯದ ಎಲ್ಲಾ ಬಂಜಾರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಲಾಗುವುದು: BSY

Advertisement

Udayavani is now on Telegram. Click here to join our channel and stay updated with the latest news.

Next