Advertisement

ಬೀಡಿ ಕಂಟ್ರಾಕ್ಟ್ದಾರರು ಮುಷ್ಕರ ಹಿಂಪಡೆಯುವಂತೆ ಮನವಿ

11:55 PM Feb 08, 2023 | Team Udayavani |

ಮಂಗಳೂರು: ಕಮಿಷನ್‌ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಕೆಲವು ಬೀಡಿ ಕಂಟ್ರಾಕ್ಟರುದಾರರ ಸಂಘಗಳು ಫೆ. 10ರಿಂದ ನಡೆಸಲು ಉದ್ದೇಶಿಸಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆದು ಯಥಾಸ್ಥಿತಿ ಕಾಪಾಡಬೇಕು ಎಂದು ಕರ್ನಾಟಕ ಬೀಡಿ ಇಂಡಸ್ಟ್ರೀಸ್‌ ಅಸೋಸಿಯೇಶನ್‌ ವಿನಂತಿಸಿದೆ.

Advertisement

ಮುಷ್ಕರ ನಡೆಸಿದರೆ ಬೀಡಿ ಕಟ್ಟುವ ಲಕ್ಷಾಂತರ ಜನರ ಜೀವನಕ್ಕೆ ಸಂಕಷ್ಟಗಳುಂಟಾಗಿ ಹಲವು ಕಷ್ಟನಷ್ಟಗಳಿಗೆ ಕಾರಣವಾಗುತ್ತದೆ. ದೇಶದಲ್ಲಿ ಬೀಡಿ ಕಂಟ್ರಾಕುrದಾರರ ಕಮಿಷನ್‌ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ 2-3 ಪಟ್ಟು ಹೆಚ್ಚಾಗಿದೆ. ಸಂಧಾನ ಮಾತುಕತೆ ಪ್ರಾರಂಭಿಸುವ ಮೊದಲು ಪ್ರತೀ 1000 ಬೀಡಿಗಳಿಗೆ 26.75 ರೂ. ನೀಡುತ್ತಿದ್ದೆವು. ಆದರೂ ಅಸೋಸಿಯೇಶನ್‌ ಡಿ. 24, ಫೆ. 2 ಹಾಗೂ ಫೆ. 4ರಂದು ಕಂಟ್ರಾಕುrದಾರರ ಸಭೆಯನ್ನು ಕರೆದು ಈ ಬಗ್ಗೆ ಚರ್ಚಿಸಿ ಪರಿಹಾರ ಕಾಣಲು ಪ್ರಯತ್ನ ನಡೆಸಿದೆ. ಈಗಾಗಲೇ ಅಸೋಸಿಯೇಶನ್‌ 2022- 2023ರ ಸಾಲಿಗೆ ಪ್ರತೀ 1 ಸಾವಿರ ಬೀಡಿಗೆ 2 ರೂ. ಕಂಟ್ರಾಕ್ಟ್ ಕಮಿಷನ್‌ ಹೆಚ್ಚಳ ನೀಡಲು ಮಾತುಕತೆಯಲ್ಲಿ ಒಪ್ಪಿದ್ದರೂ ಕಂಟ್ರಾಕುrದಾರರ ಸಂಘಗಳು ಇದನ್ನು ತಿರಸ್ಕರಿಸಿವೆ ಹಾಗೂ ಪ್ರತೀ 1 ಸಾವಿರ ಬೀಡಿಗೆ 3.25 ರೂ. ಹೆಚ್ಚಳ ನೀಡಲೇ ಬೇಕೆಂದು ಪಟ್ಟು ಹಿಡಿದು ಸಂಧಾನ ಸಭೆಯನ್ನು ಮುರಿದಿದ್ದಾರೆ. ಈಗಾಗಲೇ ನೀಡಿದ 2 ರೂ. ಹೆಚ್ಚಳವನ್ನು ಸೇರಿಸಿದರೆ ಕಂಟ್ರಾಕ್ಟ್ ಕಮಿಷನ್‌ 2022- 23ರ ಸಾಲಿಗೆ ಪ್ರತೀ 1 ಸಾವಿರ ಬೀಡಿಗೆ 28.75 ರೂ. ಆಗುತ್ತದೆ. ಇದಕ್ಕಿಂತ ಹೆಚ್ಚು ನೀಡಲು ಯಾವುದೇ ಕಾರಣಕ್ಕೆ ಅಸಾಧ್ಯವಾಗಿದ್ದು, ಈ ಬೇಡಿಕೆ ನಮ್ಮ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಕಾರಣವಾಗುವುದಲ್ಲದೇ ದೇಶೀಯ ಮಟ್ಟದಲ್ಲಿ ಇತರ ರಾಜ್ಯಗಳ ಬೀಡಿ ಉತ್ಪಾದಕರೊಂದಿಗೆ ಸ್ಪರ್ಧಿಸಲು ಅಸಾಧ್ಯವಾಗುತ್ತದೆ ಎಂದು ಸಂಘವು ಪ್ರಕಟನೆಯಲ್ಲಿ ತಿಳಿಸಿದೆ.

ಕಂಟ್ರಾಕ್ಟ್ ಕಮಿಷನ್‌ 2022-23ರಲ್ಲಿ ಪಶ್ಚಿಮ ಬಂಗಾಲದಲ್ಲಿ 7 ರೂ., ತಮಿಳುನಾಡಿನಲ್ಲಿ 12 ರೂ., ಆಂಧ್ರಪ್ರದೇಶದಲ್ಲಿ 15.02 ರೂ. ಇದ್ದು, ಕರ್ನಾಟಕದಲ್ಲಿ 28.75 ರೂ. ಇದೆ. ಹೀಗಾಗಿ ಕಂಟ್ರಾಕ್ಟರುದಾರರ ಕಮಿಷನ್‌ ಹೆಚ್ಚಳದ ಬಗ್ಗೆ ಮುಷ್ಕರವು ನ್ಯಾಯ ಸಮ್ಮತವಾಗಿರುವುದಿಲ್ಲ. ನಾವು ನಮ್ಮ ಕಚೇರಿಯನ್ನು (ಬ್ರಾಂಚ್‌) ತೆರೆದಿಟ್ಟು ಕೆಲಸ ನೀಡಲು ಯಾವತ್ತೂ ತಯಾರಿದ್ದೇವೆ. ಕಂಟ್ರಾಕುrದಾರರು ನಮ್ಮಿಂದ ತಂಬಾಕು ಹಾಗೂ ಇತರ ಕಚ್ಚಾವಸ್ತುಗಳನ್ನು ಪಡೆದು ಅಥವಾ ಪಡೆಯದೆ ಕಾರ್ಮಿಕರಿಗೆ ನೀಡದೆ ಅವರಿಗೆ ಕೆಲಸವನ್ನು ನಿರಾಕರಿಸಿದಲ್ಲಿ, ಮುಂದೆ ಉದ್ಭವಿಸಬಹುದಾದಂತಹ ಎಲ್ಲ ಕಷ್ಟನಷ್ಟಗಳಿಗೆ ಮುಷ್ಕರದಲ್ಲಿ ತೊಡಗಿರುವ ಕಂಟ್ರಾಕುrದಾರರೇ ಬಾಧ್ಯರಾಗಿರುತ್ತಾರೆ ಎಂದು ಕರ್ನಾಟಕ ಬೀಡಿ ಇಂಡಸ್ಟ್ರೀಸ್‌ ಅಸೋಸಿಯೇಶನ್‌ ಪ್ರಕಟನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next