Advertisement

ಸರ್ವಜ್ಞ ತ್ರಿಪದಿಗಳಲ್ಲಿದೆ ಸಮಾನತೆ ಸಂದೇಶ: ಚಿದ್ರಿ

05:01 PM Feb 21, 2020 | Naveen |

ಬೀದರ: ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಸಂತಕವಿ ಸರ್ವಜ್ಞ ಜಯಂತಿ ಆಚರಿಸಲಾಯಿತು. ಜಿಪಂ ಅಧ್ಯಕ್ಷೆ ಗೀತಾ ಪಂಡಿತರಾವ್‌ ಚಿದ್ರಿ ಅವರು ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿ, ಸರ್ವಜ್ಞ ಅವರು ಆದರ್ಶ ಪುರುಷರಾಗಿದ್ದರು. ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

Advertisement

ಸರ್ವಜ್ಞರು ಬಹುತೇಕ ಎಲ್ಲ ವಿಷಯಗಳ ಮೇಲೆ ವಚನಗಳನ್ನು ರಚಿಸಿದ್ದಾರೆ. ಅವರ ವಚನಗಳಲ್ಲಿ ಸಮಾನತೆಯ ಸಂದೇಶವಿದೆ. ಬದುಕಿಗೆ ಹತ್ತಿರವಾಗಿರುವ ವಿಚಾರಗಳನ್ನು ಅವರು ಬರೆದಿದ್ದಾರೆ ಎಂದು ಹೇಳಿದರು.

ಹಿರಿಯ ಸಾಹಿತಿ ಎಂ.ಜಿ. ಗಂಗನಪಳ್ಳಿ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕವಿ ಸರ್ವಜ್ಞ ಬರೆಯದ ವಿಷಯವಿಲ್ಲ. ತಮಗೆ ತಿಳಿದ ಎಲ್ಲ ವಿಷಯವನ್ನು ಸರ್ವಜ್ಞ ಅವರು ತ್ರಿಪದಿಗಳಲ್ಲಿ ಹಿಡಿದಿದ್ದಾರೆ. ಸರ್ವಜ್ಞ ಅವರಿಗೆ ಇಡೀ ಲೋಕವೇ ವಿಶ್ವವಿದ್ಯಾಲಯವಾಗಿತ್ತು ಎಂದರು. ಇದೇ ವೇಳೆ ಸರ್ವಜ್ಞ ಕುರಿತು ಕವನಗಳನ್ನು ವಾಚಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ್‌, ಉಪ ಕಾರ್ಯದರ್ಶಿ ಸೂರ್ಯಕಾಂತ ಎಸ್‌., ಮುಖ್ಯ ಯೋಜನಾಧಿಕಾರಿ ಎಸ್‌. ಎಸ್‌. ಮಠಪತಿ, ಮುಖ್ಯ ಲೆಕ್ಕಾಧಿಕಾರಿ ದೀಪು ಕುಮಾರ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಇನಾಯತಲಿ ಶಿಂಧೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವ್ಯವಸ್ಥಾಪಕ ಮಕರಂದ ಕುಲಕರ್ಣಿ, ಪ್ರವೀಣ ಸ್ವಾಮಿ, ಸಿದ್ದಲಿಂಗ ಪದಮಾ ಹಾಗೂ ಇತರರು ಇದ್ದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ: ಸಂತ ಕವಿ ಸರ್ವಜ್ಞ ಜಯಂತ್ಯುತ್ಸವ ನಿಮಿತ್ತ ನಗರದ ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ್‌ ಗಾಳಿ ಅವರು ಸರ್ವಜ್ಞ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

Advertisement

ಇದೇ ವೇಳೆ ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಮುಖಂಡರಾದ ಅಮೃತರಾವ್‌ ಚಿಮಕೋಡೆ, ಕಾಶಿನಾಥ ಕುಂಬಾರ, ದತ್ತಾತ್ರಿ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ಕಾಮಶೆಟ್ಟಿ ಕುಂಬಾರ, ರಾಜಕುಮಾರ ಕುಂಬಾರ, ಪ್ರಕಾಶ ಕುಂಬಾರ, ರಾಜು ಕುಂಬಾರ, ಬಸವರಾಜ ಕುಂಬಾರ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲಾ ಧಿಕಾರಿಗಳ ಕಚೇರಿಯ ಸಿಬ್ಬಂದಿ ಪುಷ್ಪನಮನ ಸಲ್ಲಿಸಿದರು.

ಗಮನ ಸೆಳೆದ ಮೆರವಣಿಗೆ: ಸಂತ ಕವಿ ಸರ್ವಜ್ಞ ಜಯಂತಿ ನಿಮಿತ್ತ ನಗರದಲ್ಲಿ ನಡೆದ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಜಿಲ್ಲಾ ಧಿಕಾರಿಗಳ ಕಚೇರಿ ಆವರಣದಲ್ಲಿ ಮೆರವಣಿಗೆಗೆ ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಚಾಲನೆ ನೀಡಿದರು. ಮೆರವಣಿಗೆಯು ಶಿವಾಜಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ, ಜನರಲ್‌ ಕರಿಯಪ್ಪ ವೃತ್ತ, ಕನ್ನಡಾಂಬೆ ವೃತ್ತದ ಮೂಲಕ ಡಾ| ಚನ್ನಬಸವ ಪಟ್ಟದೇವರು ರಂಗಮಂದಿರಕ್ಕೆ ತಲುಪಿತು.

ಮೆರವಣಿಗೆಯುದ್ದಕ್ಕೂ ಮಹಿಳಾ ತಂಡದ ಆಕರ್ಷಕ ತಮಟೆ ವಾದನ, ಕೋಲಾಟ ಹಾಗೂ ಡೊಳ್ಳು ಕುಣಿತ ಮೆರವಣಿಗೆಯ ಕಳೆ ಹೆಚ್ಚಿಸಿದವು. ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಮುಖಂಡರಾದ ಅಮೃತರಾವ್‌ ಚಿಮಕೋಡೆ, ಕಾಶಿನಾಥ ಕುಂಬಾರ, ದತ್ತಾತ್ರಿ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ಕಾಮಶೆಟ್ಟಿ ಕುಂಬಾರ,
ರಾಜಕುಮಾರ ಕುಂಬಾರ, ಪ್ರಕಾಶ ಕುಂಬಾರ ಹಾಗೂ ಇತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next