Advertisement

ನಿಯಮ ಪಾಲಿಸಿ ಅಪಘಾತ ತಡೆಯಿರಿ: ವಿಶ್ವನಾಥ

05:11 PM Jan 25, 2020 | Team Udayavani |

ಬೀದರ: ಮೋಟಾರು ವಾಹನ ನಿಯಮ, ಕಾನೂನು ಪಾಲಿಸಿ ಅಪಘಾತಗಳನ್ನು ತಡೆಯಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಟಿ. ವಿಶ್ವನಾಥ ಸಲಹೆ ನೀಡಿದರು.

Advertisement

ನಗರದ ಹೊರವಲಯದ ಪಶು ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2020ರ ನಿಮಿತ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಾದೇಶಿಕ ಸಾರಿಗೆ ಕಚೇರಿ, ಭಾಲ್ಕಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಟಿ20 ಕ್ರಿಕೆಟ್‌ ಟೂರ್ನಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತ್ತಿಚಿನ ದಿನಗಳಲ್ಲಿ ಯುವಕರು ನಿರ್ಲಕ್ಷ್ಯದಿಂದ ವಾಹನ ನಡೆಸುತ್ತಿರುವುದರಿಂದ ಅಪಘಾತಗಳು ಹೆಚ್ಚುತ್ತಿದ್ದು, ಘಟನೆಯಲ್ಲಿ ಹಲವರು ಸಾವನ್ನಪ್ಪಿದರೆ ಬಹಳಷ್ಟು ಜನ ಅಂಗವಿಕಲರಾಗುತ್ತಿದ್ದಾರೆ ಎಂದರು.

ಭಾಲ್ಕಿಯ ಮೋಟಾರು ವಾಹನ ನಿರೀಕ್ಷಕ ಮಹ್ಮದ್‌ ಜಾಫರ್‌ ಸಾ ದಿಕ್‌ ಮಾತನಾಡಿ, 2019ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟವರು ಹೆಚ್ಚಿನವರು ಯುವಕರೇ ಆಗಿದ್ದು, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಹಾಗೂ ಲಘು ಮೋಟಾರು ವಾಹನ ಚಲಾಯಿಸುವವರು ಸೀಟ್‌ ಬೆಲ್ಟ್ ಉಪಯೋಗಿಸಬೇಕು. ತಲೆ ನಮ್ಮ ದೇಹದ ಅತ್ಯಂತ ಸೂಕ್ಷ್ಮಅಂಗವಾಗಿದ್ದು, ಅಪಘಾತದಲ್ಲಿ ತಲೆಗೆ ಪೆಟ್ಟಾದರೆ ಸಾವು ಖಚಿತ ಎಂದು ಎಚ್ಚರಿಸಿದರು. ಪ್ರಾಣ ಉಳಿಸಲು ನೀವು ವೈದ್ಯರಾಗಬೇಕಿಲ್ಲ, ಆಂಬ್ಯೂಲೆನ್ಸ್‌ಗೆ ದಾರಿ ನೀಡಿದರೆ ಸಾಕು. ಅಪಘಾತ ಸಂಭವಿಸಿದಾಗ ಫೋಟೋ, ವೀಡಿಯೋ ಮಾಡುವ ಬದಲು ಆಂಬ್ಯೂಲೆನ್ಸ್‌ ಮತ್ತು ಪೊಲೀಸರಿಗೆ ಕರೆ ಮಾಡಿ ಪ್ರಾಣ ಉಳಿಸಬೇಕು. ಯುವ ಬಲದಿಂದಲೇ ಬದಲಾವಣೆ ಸಾಧ್ಯವಿದೆ ಎಂದು ಹೇಳಿದರು.

ಪಶು ಮಹಾವಿದ್ಯಾಲಯದ ಡೀನ್‌ ದಿಲೀಪಕುಮಾರ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಯಶವಂತಕುಮಾರ, ಗುರು ಬಸವ ಮೋಟಾರ್ಸ್‌ ಮಾಲೀಕ ಕುಪೇಂದ್ರ ಪ್ರಥಮ ನಗದು ಪುರಸ್ಕಾರವನ್ನು ಹಾಗೂ ಎಸ್‌ ಕೆಎಸ್‌ ಡ್ರೈವಿಂಗ್‌ ಶಾಲೆ ಪ್ರಾಂಶುಪಾಲ ಶರೀಫ್‌ ಖಾನ್‌ ದ್ವಿತೀಯ ನಗದು ಪುರಸ್ಕಾರ ವಿತರಿಸಿದರು.

Advertisement

ಸಾಯಿ ರಾಜ್‌ ಚಾಲನಾ ತರಬೇತಿ ಶಾಲೆಯ ರಾಜಪ್ಪ, ಅಂಪೈರ್‌ ಗಳಾದ ವಿನಾಯಕ ಕುಲಕರ್ಣಿ, ಬಸವರಾಜ ಬಿರಾದಾರ, ಮಹ್ಮದ್‌ ಮತೀನ್‌, ಹಾಜಿ, ಇಲಿಯಾಸ್‌, ಅಯಾಜ್‌ ಇತರರು ಪಾಲ್ಗೊಂಡಿದ್ದರು. ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಗಜಾನನ ಕ್ರಿಕೆಟ್‌ ಕ್ಲಬ್‌ ಕಾಯಕ ಕ್ರಿಕೆಟ್‌ ಕ್ಲಬ್‌ ವಿರುದ್ಧ ಜಯ ಗಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next