Advertisement

ಬೀದರ ನಗರಸಭೆ: ಶೇ.51.25 ಮತದಾನ

06:46 PM Apr 28, 2021 | Team Udayavani |

ಬೀದರ: ಬಹು ನಿರೀಕ್ಷಿತ ಬೀದರ ನಗರ ಸಭೆಯ 32 ವಾರ್ಡ್‌ಗಳಿಗೆ ಚುನಾವಣೆ ಹಿನ್ನೆಲೆ ಮಂಗಳವಾರ ಶಾಂತಿಯುತ ಮತದಾನ ನಡೆದಿದ್ದು, ಶೇ.51.25 ಮತದಾನ ದಾಖಲಾಗಿದೆ. ಮೀಸಲಾತಿ ತಕರಾರು ಸಂಬಂಧ ನ್ಯಾಯಾಲಯದಲ್ಲಿ ದಾವೆ ಹಿನ್ನೆಲೆ ಬರೋಬ್ಬರಿ ಮೂರು ವರ್ಷಗಳ ನಂತರ ಬೀದರ ನಗರಸಭೆಗೆ ಚುನಾವಣೆ ನಡೆದಿದೆ.

Advertisement

ನಗರಸಭೆಯ 26, 28 ಮತ್ತು 32 ವಾರ್ಡ್‌ ಹೊರತುಪಡಿಸಿ ಇನ್ನುಳಿದ 32 ವಾಡ್‌ ìಗಳಿಗೆ ಮತದಾನ ಪ್ರಕ್ರಿಯೆ ಅಹಿತಕರ ಘಟನೆ ಮತ್ತು ಗೊಂದಲಗಳಿಲ್ಲದೇ ಶಾಂತಿಯುವಾಗಿ ಜರುಗಿತು. ಸಮವಾರು ಮತದಾನ: ಬೆಳಗ್ಗೆ 7ರಿಂದ 6ರವರೆಗೆ ಮತದಾನ ನಡೆಯಿತು. ಬೆಳಗ್ಗೆ 9ರವರೆಗೆ ಶೇ.7.92, ಬೆಳಗ್ಗೆ 11ರವರೆಗೆ ಶೇ.19.37, ಮಧ್ಯಾಹ್ನದವರೆಗೆ ಶೇ.30.18 ಮತದಾನವಾದರೆ, ಮಧ್ಯಾಹ್ನ 3ರವರೆಗೆ ಶೇ.39.11, ಸಾಯಂಕಾಲ 5ರವರೆಗೆ ಶೇ. 48.09 ಹಾಗೂ ಸಂಜೆ 6ರವರೆಗೆ ಶೇ.51.25 ಮತದಾನ ದಾಖಲಾಗಿದೆ. ಕೋವಿಡ್‌ ಹೆಚ್ಚಳ ಹಿನ್ನೆಲೆ ಮತಗಟ್ಟೆಗಳಲ್ಲಿ ಮಾರ್ಗಸೂಚಿಗಳಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮತಗಟ್ಟೆ ಅಧಿಕಾರಿಗಳಿಗೆ ಕೋವಿಡ್‌ ಕಿಟ್‌ ಮತ್ತು ಎಲ್ಲ ಮತಗಟ್ಟೆಗಳಲ್ಲಿ ಥರ್ಮಲ್‌ ಸ್ಕಾÂನಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಸರದಿಯಲ್ಲಿ ನಿಂತು ಹಕ್ಕು ಚಲಾಯಿಸಿದರು.

ವಿಕಲಚೇತನರಿಗೆ ವೋಟ್‌ ಹಾಕಲು ಅನುಕೂಲವಾಗುವಂತೆ ವ್ಹೀಲ್‌ ಚೇರ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಕೊನೆ ಹಂತದವರೆಗೆ ಕಸರತ್ತು ನಡೆಸಿದರು.

ಕೆಲವು ವಾರ್ಡ್‌ಗಳಲ್ಲಿ ಮತಗಟ್ಟೆಗೆ ಬರುವ ಮತದಾರರಿಗಾಗಿ ಅಭ್ಯರ್ಥಿಗಳ ಆಟೋ ಸೇರಿ ಇತರ ವಾಹನಗಳ ವ್ಯವಸ್ಥೆ ಮಾಡಿದರು. ಆದರೆ, ಮತದಾನಕ್ಕೆ ನಿರುತ್ಸಾಹ ತೋರಿದ್ದರಿಂದ ವಾಹನಗಳ ಖಾಲಿ ಖಾಲಿ ಓಡಾಟ ಕಂಡುಬಂದಿತು. ಒಟ್ಟಾರೆ ಶಾಂತಿಯುತ ಮತದಾನ ನಡೆಯಲು ಅಗತ್ಯ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next