ಹಾಸ್ಯ ಬರಹಗಾರ ಚಿಂತಕ ಬೀಚಿಯವರ ಜೀವನಾಧಾರಿತ ನಾಟಕ “ಮಾನಸ ಪುತ್ರ’ ಪ್ರದರ್ಶನ ಕಾಣುತ್ತಿದೆ. ಬೀಚಿಯವರ ಆತ್ಮಚರಿತ್ರೆ ಹಾಗೂ ಅವರ ಇತರೆ ಸಾಹಿತ್ಯವನ್ನು ಆಧರಿಸಿದ ಈ ನಾಟಕವನ್ನು ಬಸವರಾಜ ಎಮ್ಮಿಯವರ ಅವರು ರಚಿಸಿದ್ದಾರೆ.
ಸಾಹಿತಿಯ ಬದುಕಿನ ಒಳ ನೋಟವನ್ನು ಪ್ರೇಕ್ಷಕರಿಗೆ ನೀಡುವ ನಾಟಕವನ್ನು ಕಲಾವಿಲಾಸಿ ತಂಡ ಪ್ರಸ್ತುತ ಪಡಿಸುತ್ತಿದೆ. ನಾಟಕದ ಪ್ರಮುಖ ಆಕರ ಗ್ರಂಥವಾಗಿರುವ “ನನ್ನ ಭಯಾಗ್ರಫಿ’ ಕೃತಿಯು ಸಾಮಾನ್ಯವಾಗಿ ನಮಗೆ ಕಾಣ ಸಿಗುವ ಒಂದು ಕ್ರಮಬದ್ದ ಜೀವನ ಚರಿತ್ರೆಯಂತೆ ಕಂಡು ಬರುವುದಿಲ್ಲ.
ಬದಲಿಗೆ ತಮ್ಮ ಅಸಂಖ್ಯ ಅನುಭವಗಳ ಪ್ರಾಮಾಣಿಕ ಸಂಗ್ರಹದಂತೆ ಲೇಖಕರು ಆತ್ಮ ಚರಿತ್ರೆಯನ್ನು ಓದುಗರ ಮುಂದೆ ಇಡುತ್ತಾರೆ. ನಾಟಕವನ್ನೂ ಅದೇ ಆಶಯದಲ್ಲಿ ಕಟ್ಟಿ ಸಾಹಿತಿಯ ಗತ ಜೀವನವನ್ನು ರಂಗದ ಮೇಲಿನ ಬೆಳಕು ಭಾವಗಳ ಮೂಲಕ ಓರೆ ಹಚ್ಚಿ ನೋಡುಗರಿಗೆ ಪುನರ್ ಪರಿಚಯಿಸಲು ಪ್ರಯತ್ನಿಸಲಾಗಿದೆ.
ಎಲ್ಲಿ?: ಸೇವಾಸದನ, ಮಲ್ಲೇಶ್ವರ
ಯಾವಾಗ?: ಏಪ್ರಿಲ್ 13, ಸಂಜೆ 7
ಪ್ರವೇಶ: 100 ರೂ.