Advertisement
ಆನೆಗಳು ಸ್ವಭಾವತಃ ಜೇನುನೊಣಗಳಿಗೆ ಹೆದರುತ್ತವೆ ಮಾತ್ರವಲ್ಲದೆ ಅವು ಇರುವ ಪ್ರದೇಶಕ್ಕೆ ಪ್ರವೇಶಿಸಲು ಗಜ ಪಡೆ ಹಿಂಜರಿಯುತ್ತವೆ. ಈ ಸ್ವಭಾವದ ಉಪಯೋಗವನ್ನೇ ಮಧ್ಯಪ್ರದೇಶ ಸರ್ಕಾರ ಪಡೆದುಕೊಂಡಿದೆ. ಅದಕ್ಕಾಗಿ “ಹನಿ ಮಿಷನ್ ‘ ಎನ್ನುವ ಯೋಜನೆ ರೂಪಿಸಿದೆ.ಮೊರೆನಾ ಜಿಲ್ಲೆಯಲ್ಲಿ ಯೋಜನೆಯ ಉದ್ಘಾಟನೆ ಭಾಗವಾಗಿ 10 ಫಲಾನುಭವಿಗಳಿಗೆ 100 ಜೇನು ಸಾಕಾಣಿಕೆ ಪೆಟ್ಟಿಗೆಗಳನ್ನು ನೀಡಿದೆ. ರಾಜ್ಯದ ಎಲ್ಲ ರೈತರಿಗೂ ತಮ್ಮ ತೋಟಗಳಲ್ಲಿ ಇತರೆ ಬೆಳೆಗಳ ನಡುವೆ ಜೇನು ಸಾಕಾಣಿಕೆ ಮಾಡುವಂತೆ ಸೂಚನೆ ನೀಡಿದೆ.
ಆನೆಗಳಿಂದಾಗುತ್ತಿರುವ ಬೆಳೆಹಾನಿಯನ್ನು ರಕ್ಷಿಸುವುದರ ಜತೆಗೆ ಅವುಗಳಿಗೆ ತೊಂದರೆ ನೀಡದಂತೆ ಹಿಮ್ಮೆಟ್ಟಿಸಲು ಅನುವಾಗುವಂತೆ “ಹಾಥಿ ಮಿತ್ರದಳ’ ವನ್ನು ಸರ್ಕಾರ ಸ್ಥಾಪಿಸಿದೆ. ಉಪಟಳವೇಕೆ ?
ನೆರೆ ರಾಜ್ಯ ಛತ್ತೀಸ್‌ಗಢದೊಂದಿಗೆ ಗಮಧ್ಯಪ್ರದೇಶ ಗಡಿ ಹಂಚಿಕೊಂಡಿದೆ. ಗಡಿ ಭಾಗದಲ್ಲಿ ಬೆಳೆಯಲಾಗುವ ಮಹುವಾ ಹೂಗಳ ಬೆಳೆಗಳನ್ನು ಅರಸಿ,ಆನೆಗಳು ಮಧ್ಯಪ್ರದೇಶ ಪ್ರವೇಶಿಸುತ್ತಿವೆ. ಹೀಗಾಗಿ, ಅಲ್ಲಿ ಕಾಡಾನೆಗಳ ಸಮಸ್ಯೆಗಳ ಹೆಚ್ಚಾಗಿದೆ.