Advertisement

ನಾಳೆಯಿಂದ ಬೇಡರ ವೇಷ-ಕುಣಿತಕ್ಕೆ ಚಾಲನೆ

01:18 PM Mar 23, 2021 | |

ಶಿರಸಿ: ರಾಜ್ಯದಲ್ಲಿ ಎಲ್ಲಿಯೂ ಕಾಣಸಿಗದ ಶಿರಸಿಯ ವಿಶೇಷವಾದ ಬೇಡರ ವೇಷ ಹಾಗೂ ಕುಣಿತಕ್ಕೆಮಾ. 24ರಿಂದ ಚಾಲನೆ ಸಿಗಲಿದೆ. ಈಗಾಗಲೇಕಳೆದೊಂದು ತಿಂಗಳುಗಳಿಂದ ರಾತ್ರಿ ವೇಳೆ ತಾಲೀಮು ಆರಂಭವಾಗಿದೆ.

Advertisement

ಈಗ ಆರಂಭಗೊಳ್ಳುವ ಬೇಡರ ವೇಷ ಪ್ರದರ್ಶನ ಹೋಳಿ ಹುಣ್ಣಿಮೆ ತನಕವೂ ನಡೆಯಲಿದೆ. ನಗರದ70ಕ್ಕೂ ಅಧಿಕ ತಂಡಗಳು ಸಿದ್ಧಗೊಂಡು ಪ್ರತಿದಿನ ತರಬೇತಿ ಪಡೆದುಕೊಳ್ಳುತ್ತಿವೆ.

ಸಾಂಪ್ರದಾಯಿಕ ಬೇಡರ ವೇಷ ನೋಡಲುಚೆಂದ. ಬಣ್ಣಗಾರಿಕೆ, ನವಿಲುಗರಿ ಸಿಲುಕಿಸಿಕೊ ಳ್ಳುವುದು ಸೇರಿದಂತೆ ಅದರ ವಿನ್ಯಾಸವೇ ಚೆಂದ. ಈ ಬೇಡರವೇಷ ನಗರದ ಪ್ರಮುಖ ಸರ್ಕಲ್‌ಗ‌ಳಾದ ದೇವಿಕೆರೆ ,ಹಳೆಬಸ್‌ ನಿಲ್ದಾಣ, ಶಿವಾಜಿ ಚೌಕ್‌, ಮಾರಿಗುಡಿ ಹಾಗೂವೀರಭದ್ರಗಲ್ಲಿಯಲ್ಲಿ ಬಂದು ಹೋಗುವಾಗ ನೂರಾರುಜನ ಸೇರುತ್ತಾರೆ. ಹಲಗೆಯ ಶಬ್ದ, ಯುವಕರ ಸಿಳ್ಳೆ ಕೇಳಿಬರುವಾಗ ಕಲಾವಿದರಿಗೂ ಉಮೇದು ಬರಲಿವೆ.ಶತಮಾನಗಳ ಇತಿಹಾಸ ಇರುವ ಬೇಡರ ವೇಷ ನಗರದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಮಾರಿಕಾಂಬಾ ದೇವಿ ಜಾತ್ರೆ ವರ್ಷಬೇಡರ ವೇಷ ಇರುವುದಿಲ್ಲ.

ಶಿರಸಿ ಪಟ್ಟಣದ ಅಧಿಕಾರ ನಡೆಸುತ್ತಿದ್ದ ಸೋದೆ ಅರಸರು ದಾಸಪ್ಪಶೆಟ್ಟಿ ಎಂಬಾತನಿಗೆ ಆಡಳಿತದಉಸ್ತುವಾರಿ ವಹಿಸಿದ್ದರು. ಮುಸಲ್ಮಾನರು ದಂಡೆತ್ತಿಬರುವ ಭೀತಿಯಿಂದ ದಾಸಪ್ಪ ಶೆಟ್ಟಿ ಮಲ್ಲೇಶಿಎಂಬ ಬೇಡ ಸಮುದಾಯವನ್ನು ನೇಮಿಸಿದ್ದ.ಆದರೆ, ಆತ ಸ್ತ್ರೀಲಂಪಟನಾಗಿ ಸ್ವತಃ ದಾಸಪ್ಪಶೆಟ್ಟಿಯಮಗಳು ರುದ್ರಾಂಬೆಯನ್ನೇ ಕೆಟ್ಟ ದೃಷ್ಟಿಯಿಂದ ನೋಡಲಾರಂಭಿಸಿದ್ದ. ಮಲ್ಲೇಶಿಯನ್ನೇ ವಿವಾಹವಾದ ರುದ್ರಾಂಬೆ ಆತನ ಕಣ್ಣು ಕಿತ್ತಳು. ಹೋಳಿ ಹುಣ್ಣಿಮೆಯ ದಿನ ಆತನ ಮೆರವಣಿಗೆ ನಡೆಸುವಾಗ ಆತ ಪತ್ನಿಯ ಮೇಲೆ ಕತ್ತಿ ಬೀಸಲು ಯತ್ನಿಸಿ ವಿಫಲನಾಗುತ್ತಿದ್ದ. ಇದನ್ನು ನೋಡಿದ ಜನರು ಬೇಡರ ವೇಷ ಎಂಬ ಕಲೆ ಆರಂಭಿಸಿದರು ಎಂದು ಹೇಳಲಾಗುತ್ತದೆ.

ಬೇಡರ ವೇಷದ ಕುರಿತಂತೆ ಇನ್ನೊಂದು ಕಥೆಯೂ ಪ್ರಚಲಿತವಿದೆ. ಹಾನಗಲ್‌ ಭಾಗದ ಕಳ್ಳನನ್ನು ಹಿಡಿಯಲು ರಾಜಭಟರಿಗೆ ಸಾಧ್ಯವಾಗಿರಲಿಲ್ಲ. ಆದರೆ, ಮಲ್ಲಿ ಎಂಬ ಮಹಿಳೆ ಆತನ್ನು ಮೋಹಿಸಿದಂತೆ ಮಾಡಿ ರಾಜಭಟರಿಗೆಕಳ್ಳನನ್ನು ಹಿಡಿಯಲು ನೆರವಾಗುತ್ತಾಳೆ. ಕಳ್ಳನನ್ನುಅರಮನೆಗೆ ಕರೆತರುವಾಗ ಮಲ್ಲಿಯನ್ನು ಅಲ್ಲಿ ಕಂಡ ಕಳ್ಳ ಆಕೆಯ ಮೇಲೆ ಎರಗಲು ಮುಂದಾಗುತ್ತಾನೆ. ಅಲ್ಲಿಯಸನ್ನಿವೇಶವನ್ನು ಸಾರ್ವಜನಿಕರು ಒಬ್ಬರಿಂದೊಬ್ಬರಿಗೆ ಆಡಿ ತೋರಿಸುವ ಮೂಲಕ ಈ ಕಲೆ ಬೆಳೆದುಬಂದಿದೆ ಎನ್ನಲಾಗಿದೆ.

Advertisement

ನವಿಲು ಗರಿಗಳ ಪರದೆಯನ್ನು ಬೆನ್ನಿಗೆ ಕಟ್ಟಿಕೊಂಡು, ಕೆಂಪುಬಣ್ಣದ ನಿಲುವಂಗಿ ಧರಿಸಿದ ಬೇಡರವೇಷಧಾರಿಯ ಕಾಲಿಗೆ ದೊಗಲೆ ಚಡ್ಡಿಯೇ ಸಿಂಗಾರ. ಒಂದು ಕೈಯಲ್ಲಿ ಗುರಾಣಿ, ಇನ್ನೊಂದರಲ್ಲಿ ಕತ್ತಿ ಹಿಡಿದುಝಳಪಿಸುತ್ತ ಸಾಗುವ ಆತನ ಶಾಂತ ಮುಖವನ್ನು ರುದ್ರರೂಪಿಯಾಗಿಸುವುದರಲ್ಲಿ ಕಲಾವಿದನ ಕೈಚಳಕ ಪ್ರಾಮುಖ್ಯತೆ ಪಡೆದಿದೆ. ಕಾಲಿಗೆ ಗೆಜ್ಜೆ, ತಲೆಗೆ ಬೇಡರಸಾಂಪ್ರದಾಯಿಕ ಕಿರೀಟ ತೊಟ್ಟ ವೇಷ ನೋಡುಗರ ಆಕರ್ಷಣೆ. ತಮಟೆ ಅಥವಾ ಹಲಗೆಯ ಸದ್ದಿಗೆ ತಕ್ಕಂತೆ ಬೇಡರ ವೇಷಧಾರಿ ನರ್ತಿಸುತ್ತ ಜನರ ಮೇಲೆರಗಲು ಹೋದಂತೆಆತನನ್ನು ನಿಯಂತ್ರಿಸುವುದು ತಂಡದಲ್ಲಿರುವ ಇಬ್ಬರು ಸಹಚರರ ಕೆಲಸ.

ಹೋಳಿ ಹುಣ್ಣಿಮೆಗೆ ನಾಲ್ಕು ದಿನ ಮೊದಲುಬೇಡರ ವೇಷದ ಪ್ರದರ್ಶನ ಆರಂಭಗೊಂಡು, ಹೋಳಿಹುಣ್ಣಿಮೆಯೊಂದಿಗೆ ಸಮಾಪ್ತಿಗೊಳ್ಳುತ್ತದೆ. ಈ ನಡುವೆಈ ಬಾರಿ ಉದ್ಯಮಿ ಉಪೇಂದ್ರ ಪೈ ನೇತೃತ್ವದ ಸಮಿತಿ ವಿವಿಧ ಬಹುಮಾನ ಕೂಡ ಪ್ರಕಟಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next